ಕಲಬುರಗಿ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸಂಗೀತ ಮತ್ತು ಲಲಿತಕಲಾ ವಿಭಾಗ ಶನಿವಾರ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನಕ್ಕೆ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್ ಚಾಲನೆ ನೀಡಿದರು. ಪ್ರೊ.ವಿಕ್ರಮ ವಿಸಾಜಿ, ಡಾ.ಶಿವಾನಂದ ಬಂಟನೂರ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಿಯುಕೆ ಕುಲಸಚಿವ ಪ್ರೊ.ಬಿರಾದಾರ್ ಹೇಳಿಕೆ
ಅಂದಾಜಿ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನ
ಕಲಬುರಗಿ: ಚಿತ್ರಕಲಾಕೃತಿಗಳು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದರ ಜತೆ ಮಾನವನ ಜೀವನ ಉತ್ತಮಪಡಿಸುತ್ತವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ್ ಹೇಳಿದರು.
ನಗರದ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ಕೇಂದ್ರೀಯ ವಿವಿ ಸಂಗೀತ ಮತ್ತು ಲಲಿತಕಲಾ ವಿಭಾಗ ಶನಿವಾರ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಕಲಾವಿದರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಎಲ್ಲೋ ಒಬ್ಬಿಬ್ಬರು ಕಲಾಕೃತಿಗಳ ಮಾರಾಟದಿಂದ ಸುಸ್ಥಿತಿಯಲ್ಲಿರಬಹುದು. ಕಲಾ ಪರಿಕರ ತಯಾರಿಸಿ ಮಾರುವವರು ಯಾವಾಗಲೂ ಶ್ರೀಮಂತರಾಗುತ್ತಾರೆ. ಆದರೆ ಕಲಾವಿದರೇಕೆ ಶ್ರೀಮಂತರಾಗಬಾರದು ಎಂದು ಪ್ರಶ್ನಿಸಿದರು.
ಕೇಂದ್ರೀಯ ವಿವಿ ಮಾನವಿಕ ಮತ್ತು ಭಾಷಾ ನಿಕಾಯದ ಪ್ರೊ.ವಿಕ್ರಮ ವಿಸಾಜಿ ಮಾತನಾಡಿ, ಕಲಾವಿದರ ಮನಸ್ಸು ಬಹಳ ಸೂಕ್ಷ$್ಮವಾಗಿರುತ್ತದೆ. ಅವರು ಪ್ರತಿಯೊಂದನ್ನು ಭಾವುಕ ಆಯಾಮಗಳಿಂದ ನೋಡಿ ಕಲಾಕೃತಿಗಳ ಮೂಲಕ ಅಭಿವ್ಯಕ್ತಿಸುತ್ತಾರೆ. ಕಲಬುರಗಿ ಕಲಾವಿದರ ತಾಣವಾಗಿದ್ದು, ಕೇಂದ್ರೀಯ ವಿವಿಯಲ್ಲೂ ಸ್ವತಂತ್ರ ವಿಭಾಗ ಆರಂಭವಾಗಿದೆ. ಅಲ್ಲಿ ದೇಶದ ವಿವಿಧೆಡೆ ವಿದ್ಯಾರ್ಥಿಗಳು ಕಲಿಯುತ್ತ ರಚಿಸಿದ ಕಲಾಕೃತಿಗಳು ಶ್ರೇಷ್ಠ ಮಟ್ಟದ್ದಾಗಿದ್ದು, ಈ ಪ್ರದರ್ಶನದಿಂದ ಅವರಿಗೆ ಉತ್ತೇಜನ ದೊರಕಿದಂತಾಗಿದೆ ಎಂದರು.
ಕಲಾ ಪ್ರದರ್ಶನದ ಸಂಯೋಜಕ ಹಾಗೂ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಾನಂದ ಬಂಟನೂರ ಪ್ರಾಸ್ತಾವಿಕ ಮಾತನಾಡಿ, ಕೇಂದ್ರೀಯ ವಿವಿಯಲ್ಲಿ 2019ರಲ್ಲಿ ಸಂಗೀತ ಮತ್ತು ಲಲಿತಕಲಾ ವಿಭಾಗ ಆರಂಭವಾಗಿದೆ. 2024&25ನೇ ಸಾಲಿನಿಂದ ಚಿತ್ರಕಲಾ ಸ್ನಾತಕೋತ್ತರ ಪದವಿ (ಎಂವಿಎ) ಆರಂಭ ಮಾಡಲಾಗಿದೆ. ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕಾಗಿ ಅನೇಕ ಕಲಾ ಚಟುವಟಿಕೆಗಳನ್ನು ಆಯೋಜಿಸುತ್ತಾ ಬರಲಾಗಿದ್ದು ಪ್ರಸ್ತುತ ಕಲಾ ಪ್ರದರ್ಶನವನ್ನು ವಿಭಾಗದ ವಿದ್ಯಾರ್ಥಗಳು, ಪಿಎಚ್ಡಿ ಸಂಶೋಧಕರು, ಅಧ್ಯಾಪಕರು ಸೇರಿ ಹಮ್ಮಿಕೊಳ್ಳಲಾಗಿದೆ. ಈ ಪ್ರದರ್ಶನವು ವಿಶ್ವ ವಿದ್ಯಾಲಯದ ಆವರಣದ ಹೊರಗೆ ಆಯೋಜಿಸಿರುವ ಮೊದಲ ವಾರ್ಷಿಕ ಕಲಾ ಪ್ರದರ್ಶನವಾಗಿ ಮಹತ್ವ ಪಡೆದಿದೆ ಎಂದು ವಿವರಿಸಿದರು.
ಪ್ರಸ್ತುತ ಕಲಾ ಪ್ರದರ್ಶನದಲ್ಲಿ ಶಿವಾನಿ ರಾವತ್, ಸಿತಾಂಶು ಮುಖರ್ಜಿ, ಗೀತಾ ಲೆಂಕೆ, ಬಿ.ಜಿ.ಲೈಂಗಡೊ ಮೊಪಲಾಂಗ್, ದತಾ ಲಾಂಜೆವರ, ಡಿ.ಶ್ವೇತಾ, ಕುಮಾರ ಮುರಳಿ, ನಯನಾ. ಬಿ., ಪ್ರಸಾಂತ ಕುವರ, ಅಶ್ವಿನಿ ಕಲ್ಯಾಣಿ, ರಮೇಶ್ ಮೋಥುಕುರಿ, ವಿನಯಕುಮಾರ ರುದ್ರಸ್ವಾಮಿಮಠ ಅವರ ವರ್ಣಚಿತ್ರಗಳು ಹಾಗೂ ಶಿವಾನಂದ ಬಂಟನೂರ ಅವರ ಶಿಲ್ಪಕಲಾಕೃತಿಗಳು ಪ್ರದರ್ಶನಗೊಂಡಿವೆ.