ಉತ್ತಮ ಆರೋಗ್ಯಕ್ಕೆ ಕಾಳಜಿ ಅವಶ್ಯ

Good healGood health requires careth requires care
Good healGood health requires careth requires care
Published on
ತುರುವೇಕೆರೆ: ಮನುಷ್ಯ ನಿತ್ಯ ಒತ್ತಡದ ಬದುಕಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಕಲ್ಪತರು ಲಯನ್ಸ್​ ಚಾರಿಟಬಲ್​ ಟ್ರಸ್ಟ್​ನ ಅಧ್ಯಕ್ಷ ಡಾ.ಚೌದ್ರಿ ನಾಗೇಶ್​ ತಿಳಿಸಿದರು.
ತಾಲೂಕಿನ ದಂಡಿನಶಿವರ ಹೋಬಳಿ ಹೆಗ್ಗೆರೆಯ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ವೆಂಕಟೇಶ್ವರ ಸೇವಾ ಟ್ರಸ್ಟ್​, ಲಯನ್ಸ್​ ಕ್ಲಬ್​, ಕಲ್ಪತರು ಚಾರಿಟಬಲ್​ ಟ್ರಸ್ಟ್​, ಬಿಡಬ್ಲ್ಯು ಲಯನ್ಸ್​ ಹಾಸ್ಪಿಟಲ್​ ಬೆಂಗಳೂರು, ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರ, ತಾಲೂಕು ಆರೋಗ್ಯ ಇಲಾಖೆಯ ಆಶ್ರಯದಲ್ಲಿ ಜವರಪ್ಪಸ್ವಾಮಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ, ರಕ್ತದೊತ್ತಡ, ಶುಗರ್​ ಎಚ್​.ಬಿಎ1ಸಿ, ಬೋನ್​ ಮಿನರಲ್​ ಡೆನ್ಸಿಟಿ, ಪಿ.ಎಫ್​.ಟಿ, ಥೈರಾಯಿಡ್​ ಸೇರಿದಂತೆ ವಿವಿಧ ರೋಗಗಳಿಗೆ ಸಂಬಂಧಿಸಿದಂತೆ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಪ್ರತಿ ಮನುಷ್ಯನು ಆರೋಗ್ಯದ ಕಡೆ ಗಮನ ಹರಿಸಬೇಕಿದೆ. ಇಂದಿನ ಆಹಾರ ಶೈಲಿಯಿಂದ ಬಿಪಿ, ಶುಗರ್​ ನಂತಹ ಕಾಯಿಲೆಗಳಿಗೆ ಮನುಷ್ಯರು ತುತ್ತಾಗುತ್ತಿದ್ದಾರೆ. ಗ್ರಾಮೀಣ ಭಾಗ ರೈತರು ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗದವರು ಸಂಘಗಳು ಆಯೋಜಿಸುವ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೆಂಕಟೇಶ್ವರ ಸೇವಾ ಟ್ರಸ್ಟ್​ನ ಅಧ್ಯಕ್ಷ ಎಚ್​.ಎನ್​.ಗಂಗಾಧರಯ್ಯ ಮಾತನಾಡಿ, ವೆಂಕಟೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿಗೆ ದಿ.ಜವರಪ್ಪಸ್ವಾಮಿ ಅವರು ಶ್ರಮಿಸಿದ್ದರು. ಅವರ ಸ್ಮರಣಾರ್ಥ ಈ ದೇವಾಲಯ ಆವರಣದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಸೇವಾ ಟ್ರಸ್ಟ್​ನಿಂದ ಹಲವು ಸೇವಾಕಾರ್ಯಗಳನ್ನು ನಡೆಸಲಾಗುವುದು. ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್​ ಕ್ಲಬ್​ ನ ಅಧ್ಯಕ್ಷ ಎಚ್​.ಎನ್​.ಪರಮೇಶ್ವರಯ್ಯ ವಹಿಸಿದ್ದರು. ವೆಂಕಟೇಶ್ವರ ಸೇವಾ ಟ್ರಸ್ಟ್​ ಉಪಾಧ್ಯಕ್ಷ ಡಾ.ಹರ್ಷಿತ್​, ಪ್ರಧಾನ ಕಾರ್ಯದರ್ಶಿ ಎಚ್​.ಅರ್​.ಜಯರಾಮ್​, ಕಲ್ಪತರು ಟ್ರಸ್​ ಕಾರ್ಯದರ್ಶಿ ಎಚ್​.ಆರ್​.ರಂಗನಾಥ್​, ವೈದ್ಯ ಡಾ.ಎ.ನಾಗರಾಜು, ಕೀಲು ಮತ್ತು ಮೂಳೆ ತಜ್ಞ ಡಾ.ಸುನಿಲ್​ ಕುಮಾರ್​, ಮಾರ್ಕೇಟಿಂಗ್​ ಆಫೀಸರ್ಸ್​ ಸುನಿಲ್​ ಕುಮಾರ್​ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net