ಸಾಧನೆಯೊಂದಿಗೆ ಉತ್ತಮ ಚಾರಿತ್ರಯವೂ ಮುಖ್ಯ Felicitation

Felicitation ತಿಪಟೂರು ಗುರುಲೀಲಾ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಸನ್ಮಾನಕಾರ್ಯಕ್ರಮವನ್ನು ತುಮಕೂರಿನ ರಾಮಕೃಷ್ಣವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ಎಜುಕೇಶನ್​ ಟ್ರಸ್ಟ್​ ಅಧ್ಯಕ್ಷ ಕೆ.ಶಂಕರಲಿಂಗಪ್ಪ,ಕಾರ್ಯದರ್ಶಿ ಎ.ಆರ್​.ಯಮುನಾ,ಪ್ರಾಂಶುಪಾಲೆ ಡಿ.ವೀಣಾ ಇದ್ದರು.
Felicitation ತಿಪಟೂರು ಗುರುಲೀಲಾ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಸನ್ಮಾನಕಾರ್ಯಕ್ರಮವನ್ನು ತುಮಕೂರಿನ ರಾಮಕೃಷ್ಣವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ಎಜುಕೇಶನ್​ ಟ್ರಸ್ಟ್​ ಅಧ್ಯಕ್ಷ ಕೆ.ಶಂಕರಲಿಂಗಪ್ಪ,ಕಾರ್ಯದರ್ಶಿ ಎ.ಆರ್​.ಯಮುನಾ,ಪ್ರಾಂಶುಪಾಲೆ ಡಿ.ವೀಣಾ ಇದ್ದರು.
Published on
ತಿಪಟೂರು: ತಪ್ಪು ಹೆಜ್ಜೆಗಳು ಅಂತಿಮವಲ್ಲ, ಹಾಗೆಯೇ ಯಶಸ್ಸೂ ಅಂತಿಮವಲ್ಲ. ಶಿಕ್ಷಣದ ಜತೆಗೆ Felicitation ಚಾರಿತ್ರ್ಯವೂ ಅಷ್ಟೇ ಮುಖ್ಯ ಎಂದು ತುಮಕೂರಿನ ರಾಮಕೃಷ್ಣವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ನಗರದ ಗುರುಲೀಲಾ ಕಲ್ಯಾಣಮಂಟಪದಲ್ಲಿ ಶನಿವಾರ ಎಸ್​ಎಸ್​ ಪಿಯು ಕಾಲೇಜಿನಿಂದ ಆಯೋಜಿಸಿದ್ದ ದ್ವೀತಿಯ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸತ್ಯನಿಷ್ಠೆ ಮೌಲ್ಯಗಳು, ಸಂಸ್ಕಾರ ಹಾಗೂ ನಿರಂತರ ಪರಿಶ್ರಮವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸಿನೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಮೌಲ್ಯಯುತ ಜೀವನವೇ ವ್ಯಕ್ತಿಗೆ ನಿಜವಾದ ಗೌರವವನ್ನು ತಂದುಕೊಡುತ್ತದೆ. ವ್ಯಕ್ತಿಯ ಅರ್ಹತೆ ಮತ್ತು ಸಾಧನೆಯ ಜತೆಗೆ ಉತ್ತಮ ಚಾರಿತ್ರ್ಯವೂ ಅಷ್ಟೇ ಮುಖ್ಯ. ಶಿಕ್ಷಣವು ಕೇವಲ ಅಕ್ಷರಜ್ಞಾನಕ್ಕೆ ಸೀಮಿತವಾಗದೆ, ಮೌಲ್ಯಾಧಾರಿತ ಶಿಕ್ಷಣ, ಸಂಸ್ಕಾರ, ಶಿಸ್ತು, ಮಾನವೀಯತೆ ಹಾಗೂ ಉತ್ತಮ ನಡವಳಿಕೆಯನ್ನು ಬೆಳೆಸಬೇಕು ಎಂದರು.
ತುರುವೇಕೆರೆ ಬದರಿಕಾಶ್ರಮದ ರಾಮಕೃಷ್ಣ ಮಠದ ಅಧ್ಯಕ್ಷ ತದ್ಯುಕ್ತಾನಂದ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸತಿ,ಪರಂಪರೆ ಮತ್ತು ನಾಗರಿಕತೆ ವಿಶ್ವದಲ್ಲೇ ತನ್ನದೇ ಆದ ಶ್ರೇಷ್ಠತೆಯನ್ನು ಹೊಂದಿದ್ದು, ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಒಬ್ಬ ವ್ಯಕ್ತಿಯ ತಪ್ಪಿನಿಂದ ಇಡೀ ರಾಷ್ಟ್ರವೇ ತಲೆ ತಗ್ಗಿಸುವಂತಹ ಪರಿಸ್ಥಿತಿಗಳು ನಿಮಾರ್ಣವಾಗುತ್ತಿವೆ. ಇಂತಹ ಘಟನೆಗಳು ದೇಶದ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮಾಹಿತಿಯ ಸತ್ಯಾಸತ್ಯತೆ ಪರಿಶೀಲಿಸಿ, ಯಾವುದೇ ವಿಷಯವನ್ನು ಹಂಚಿಕೊಳ್ಳುವ ಮುನ್ನ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಿಯುಸಿ, ಸಿಇಟಿ ಹಾಗೂ ನೀಟ್​ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಸನ್ಮಾನಿಸಲಾಯಿತು. ಕಾಲೇಜಿಗೆ ಸೇರ್ಪಡೆಯಾದ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.
ಸುವರ್ಣ ಶಂಕರಲಿಂಗಪ್ಪ, ಎಜುಕೇಶನ್​ ಟ್ರಸ್ಟ್​ ಅಧ್ಯಕ್ಷ ಕೆ.ಶಂಕರಲಿಂಗಪ್ಪ,ಕಾರ್ಯದರ್ಶಿ ಎ.ಆರ್​.ಯಮುನಾ,ಪ್ರಾಂಶುಪಾಲೆ ಡಿ.ವೀಣಾ, ಉಪನ್ಯಾಸಕರಾದ ಎ.ಎಂ.ಶಿವಣ್ಣ, ಜಿ.ಸುಬ್ರಹ್ಮಣ್ಯ, ಹರೀಶ್​, ನಗರಸಭೆ ಮಾಜಿ ಅಧ್ಯಕ್ಷ ರಾಮ್​ಮೋಹನ್​, ಮಾಜಿ ಸದಸ್ಯ ಸಂಗಮೇಶ್​ ಕಳ್ಳಿಹಾಳ್​, ನಾಗರಾಜು, ನಂದಿನಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net