ಬ್ಯಾಂಕ್ 11 ಶಾಖೆಗಳನ್ನು ಹೊಂದಿದೆ; ಮೈಸೂರು, ಬೆಂಗಳೂರು, ಕಲಬುರಗಿಯಲ್ಲಿ ನೂತನ ಶಾಖೆ ತೆರೆಯಲಾಗುವುದು. 16 ಸಾವಿರ ಸದಸ್ಯರನ್ನು ಹೊಂದಿದ್ದು, ಯಾವುದೇ ಮಧ್ಯವರ್ತಿ ಇಲ್ಲದೆ ಗ್ರಾಹಕರಿಗೆ ನೇರವಾಗಿ ವಾಹನ, ವಿದ್ಯಾಭ್ಯಾಸ, ವ್ಯಾಪಾರಕ್ಕಾಗಿ ಸಾಲ ನೀಡಲಾಗುತ್ತಿದೆ. ಇಡೀ ಕರ್ನಾಟಕದಲ್ಲೇ ಉತ್ತಮ ಸಹಕಾರಿ ಬ್ಯಾಂಕ್ ಎಂದು ಗುರುತಿಸಿಕೊಂಡಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ.ತಿಮ್ಮೇಗೌಡ ಮಾಹಿತಿ ನೀಡಿದರು.