

ಬೆಂಗಳೂರು: ದುಬೈನಿಂದ ಭಾರತಕ್ಕೆ ಚಿನ್ನ ಕಳ್ಳ ಸಾಗಾಣಿಕೆ ಮಾಡಿ ಸಿಕ್ಕಿ ಬಿದ್ದ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್‌ಗೆ ಕಸ್ಟಮ್ಸ್ ಇಲಾಖೆ ಭಾರಿ ದಂಡ ವಿಧಿಸಿ ಶಾಕ್ ನೀಡಿದೆ. ದುಬೈನಿಂದ ಸುಮಾರು 14 ಕೆ.ಜಿ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ನಟಿ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದು, ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿತ್ತು.
ಈಗ, ಈ ಪ್ರಕರಣದಲ್ಲಿ ನಟಿ ರನ್ಯಾ ರಾವ್ ತಪ್ಪಿತಸ್ಥಳೆಂದು ಪರಿಗಣಿಸಿರುವ ಕಸ್ಟಮ್ ಇಲಾಖೆ ಸುಮಾರು 399 ಪುಟಗಳ ಆದೇಶವನ್ನು ಹೊರಡಿಸಿ, ಭರ್ತಿ 89 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಿದೆ ಎಂದು ತಿಳಿದು ಬಂದಿದೆ.
ಮಾಹಿತಿ ಪ್ರಕಾರ, ನಟಿ ರನ್ಯಾ ರಾವ್ ಇತರ ಸಹ ಆರೋಪಿಗಳಾದ ತರುಣ್, ಸಾಹಿಲ್ ಮತ್ತು ಇತತರೊಂದಿಗೆ ಸೇರಿಕೊಂಡು, 07-03-2024 ರಿಂದ 18-02-2025 ರ ವರೆಗೆ ಸುಮಾರು 113 ಕೆಜಿ ಚಿನ್ನವನ್ನು ದೇಶದೊಳಗೆ ಕಳ್ಳ ಸಾಗಾಣಿಕೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಇತರೆ ಸಹ ಆರೋಪಿಗಳ ಜೊತೆಗೆ ಸೇರಿಕೊಂಡು, ಚಿನ್ನವನ್ನು ಅಕ್ರಮವಾಗಿ ದೇಶಕ್ಕೆ ಪ್ರವೇಶಿಸುವಂತೆ ಮಾಡುತ್ತಿದ್ದ ನಟಿ ರನ್ಯಾ ರಾವ್, ಮಾಡಿರುವುದು ಶಿಕ್ಷರ್ಹ ಅಪರಾಧವೆಂದು ಭಾವಿಸಿರುವ ಕಸ್ಟಮ್ ಇಲಾಖೆ 89 ಕೋಟಿಗಳ ಭಾರಿ ಮೊತ್ತದೆ ದಂಡವನ್ನು ವಿಧಿಸಿದೆ. ಈ ಆದೇಶವನ್ನು ಕಸ್ಟಮ್ಸ್ ಜಂಟಿ ನಿರ್ದೇಶಕ ಸಂದೀಪ್ ಹೊರಡಿಸಿದ್ದಾರೆ.
ನಟಿ ರನ್ಯಾ ರಾವ್ (89 ಕೋಟಿ) ಜೊತೆಗೆ ಇಕೆಯ ಗ್ಯಾಂಗ್ನಲ್ಲಿದ್ದ ತರುಣ್ ಕೊಂಡಾರು ರಾಜು (49.51 ಕೋಟಿ), ಸಾಹಿಲ್ ಜೈನ್ (53 ಕೋಟಿ) ಹಾಗೂ ಭರತ್ ಕುಮಾರ್ ಜೈನ್ (53.06 ಕೋಟಿ) ಸೇರಿದಂತೆ ಒಟ್ಟು 244 ಕೋಟಿ ದಂಡವನ್ನು ಕಸ್ಟಮ್ ಇಲಾಖೆ ವಿಧಿಸಿದೆ. ಈ ಗೋಲ್ಡ್ ಸ್ಮಗ್ಲಿಂಗ್ ದಂಧೆಯಲ್ಲಿ ತೊಡಗಿದ್ದ ಪ್ರತಿಯೊಬ್ಬರ ಪಾತ್ರವೂ ಪ್ರಮುಖವಾಗಿದ್ದು, ಈ ಹಿನ್ನಲೆ ಗ್ಯಾಂಗ್ನಲ್ಲಿದ್ದ ಎಲ್ಲಾ ಸದಸ್ಯರ ಮೇಲೆ ಭಾರಿ ದಂಡವನ್ನು ಇಲಾಖೆ ವಿಧಿಸಿದೆ.
ಮಾರ್ಚ್ 3ರಂದು 2025 ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹರ್ಷವರ್ಧಿನಿ ಅಲಿಯಾಸ್ ರನ್ಯಾ ರಾವ್ರನ್ನು ಬಂಧಿಸಿದ್ದ ಡಿಆರ್‌ಐ (DRI) ಅಧಿಕಾರಿಗಳು ಆಕೆಯಿಂದ ಸುಮಾರು 12.86 ಕೋಟಿ ಮೌಲ್ಯದ 14.2 ಕೆ ಜಿ ಚಿನ್ನವನ್ನು ಜಫ್ತಿ ಮಾಡಿದ್ದರು.
ಕಸ್ಟಮ್ ಅಧಿಕಾರಿಗಳ ತಪಾಸಣೆ ತಪ್ಪಿಸಿಕೊಳ್ಳಲು ಚಿನ್ನವನ್ನು ಬೆಲ್ಟ್ ಮತ್ತು ಜಾಕೆಟ್‌ಗಳಲ್ಲಿ ಇಟ್ಟುಕೊಂಡು ಬಂದಿದ್ದರು ಎಂಬ ಆರೋಪ ಕೇಳಿಬಂದುತ್ತು. ರಾಜ್ಯದ ಡಿಜಿಪಿ ಶ್ರೇಣಿ ಅಧಿಕಾರಿಯೊಬ್ಬರ ಸಾಕು ಮಗಳಾದ ರನ್ಯಾ ಅತಿ ಗಣ್ಯ ವ್ಯಕ್ತಿ (VVIP) ಗಳಿಗೆ ಮೀಸಲಿರುವ ಮಾರ್ಗದ ಮೂಲಕ ವಿಮಾನ ನಿಲ್ದಾಣದಿಂದ ಸರಾಗವಾಗಿ ಹೊರಬರುತ್ತಿದ್ದರು ಎನ್ನಲಾಗಿತ್ತು, (ಏಜೆನ್ಸೀಸ್).