ವಿಮಾನ ಕುಸಿಯುತ್ತಿತ್ತು, ಕ್ಯಾಪ್ಟನ್​ ತಲೆ ಸೀಳಿತ್ತು, ಮೈತುಂಬಾ ಗಾಯವಾಗಿತ್ತು: ಫ್ಲೈದುಬೈ ವಿಮಾನದ ಭಯಾನಕ ಕ್ಷಣ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ ವೈದ್ಯ! Fly dubai Flight

ಫ್ಲೈದುಬೈ ವಿಮಾನ ದುರಂತದ ಭಯಾನಕ ಕ್ಷಣಗಳನ್ನು ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ ವೈದ್ಯ! ಕ್ಯಾಪ್ಟನ್ ತಲೆ ಸೀಳಿ, ಮೈತುಂಬಾ ಗಾಯಗಳಾಗಿ ಜೊತೆಗೆ ವಿಮಾನ ಕುಸಿಯುತ್ತಿದ್ದ ರೋಚಕ ವಿವರ ಇಲ್ಲಿದೆ.
"As the plane was crashing, the captain's head was split open and his body was covered in injuries" – An eyewitness doctor describes the Flydubai plane crash.
ವಿಮಾನ ಕುಸಿಯುತ್ತಿದ್ದಾಗ ಕ್ಯಾಪ್ಟನ್ ತಲೆ ಸೀಳಿ, ಮೈತುಂಬಾ ಗಾಯಗಳಾಗಿತ್ತು" - ಫ್ಲೈದುಬೈ ವಿಮಾನ ದುರಂತವನ್ನು ವಿವರಿಸಿದ ಪ್ರತ್ಯಕ್ಷದರ್ಶಿ ವೈದ್ಯ
Published on: 

ಟೆಲ್ ಅವಿವ್: ಬುಧವಾರ (ಸೆ.30) ದುಬೈನಿಂದ ಇಸ್ರೇಲ್​ ರಾಜಧಾನಿ ಟೆಲ್ ಅವಿವ್​ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದಿರುವ ಘಟನೆ ಎಲ್ಲರ ಎದೆ ನಡುಗಿಸಿದೆ. ವಿಮಾನದ ಕ್ಯಾಪ್ಟನ್​ ಸ್ಮಿತ್ ಮಚ್ಚಾರ್ ಮೇಲೆ ಸಹ ಪೈಲಟ್​ ಚಾಕುವಿನಿಂದ ಹಲ್ಲೆ ನಡೆಸಿ ವಿಮಾನವನ್ನು ಪತನ ಮಾಡಲು ಮುಂದಾದ ವಿಫಲ ಘಟನೆ ಸದ್ಯ ಜಗತ್ತಿನಾದ್ಯಂತ ಚರ್ಚೆಯಾಗುತ್ತಿದೆ.

ಈಗ, ಈ ಘಟನೆ ಬಗ್ಗೆ ವಿಮಾನದಲ್ಲಿ ಹಾಜರಿದ್ದ ಇಸ್ರೇಲಿ ವೈದ್ಯರೊಬ್ಬರು ತಾವು ಪ್ರತ್ಯಕ್ಷವಾಗಿ ಕಂಡಿದ್ದನ್ನು ಹಂಚಿಕೊಂಡಿದ್ದು, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದರೂ ಕ್ಯಾಪ್ಟನ್​ ಸ್ಮಿತ್ ಮಚ್ಚಾರ್ ಪ್ರಯಾಣಿಕರ ಜೀವವನ್ನು ಹೇಗೆ ಕಾಪಾಡಿದರೆನ್ನವ ಸಾಹಸ ಗಾತೆಯನ್ನು ಬಿಚ್ಚಿಟ್ಟಿದ್ದಾರೆ.

ಕ್ಯಾಪ್ಟನ್​ ರಕ್ತಸಿಕ್ತನಾಗಿದ್ದ!

ದುಬೈನಿಂದ ಟೆಲ್ ಅವಿವ್ ಕಡೆಗೆ ಪ್ರಯಾಣ ಬೆಳೆಸಿದ್ದ ಫ್ಲೈದುಬೈ ವಿಮಾನದಲ್ಲಿ, ಡಾ. ಶೋಟಾ ಮೊಸೇವ್ ಎಂಬ ಇಸ್ರೇಲಿ ದಂತವೈದ್ಯರು ಪ್ರಯಾಣಿಕರಾಗಿದ್ದರು. ವಿಮಾನದಲ್ಲಿದ್ದ ಏಕೈಕ ವೈದ್ಯರಾಗಿ ಇವರೇ ಇದ್ದರು. ಡಾ. ಶೋಟಾ ಹೇಳುವ ಪ್ರಕಾರ, ವಿಮಾನ ಸಹಜವಾಗಿಯೇ ತನ್ನ ಪ್ರಯಾಣವನ್ನು ಬೆಳೆಸಿತ್ತು. ಆದರೆ, ಕೆಲ ಸಮಯದ ನಂತರ ಕಾಕ್​ಪಿಟ್​​ನಿಂದ ಕಿರುಚಿದ ಶಬ್ದಗಳು ಕೇಳಿ ಬಂದವು. ನಂತರ ವಿಮಾನ ಒಂದೇ ಸಲ ಕುಸಿಯ ತೊಡಗಿತು, ಆಗ ತಮ್ಮನ್ನು ಸೇರಿದಂತೆ ಎಲ್ಲಾ ಪ್ರಯಾಣಿಕರು ಭಯಗ್ರಸ್ತರಾದೆವು.

ಆಮೇಲೆ, ಕಾಕ್​ಪಿಟ್​ ಬಾಗಿಲು ತೆರೆಯಿತು. ನಾನು ಕಾಕ್​ಪಿಟ್​ ಹತ್ತಿರ ಹೋದಾಗ, ಕ್ಯಾಪ್ಟನ್​ ಸ್ಮಿತ್ ಮಚ್ಚಾರ್ ರಕ್ತಸಿಕ್ತವಾಗಿದ್ದು, ಅವರ ತಲೆ, ಕೈಗಳಿಂದ ರಕ್ತ ಸೋರುತ್ತಿತ್ತು. ಅವರ ಮೈತುಂಬಾ ಗಾಯಗಳಾದಂತೆ ಕಾಣಿಸಿತು ಎಂದಿದ್ದಾರೆ. ದೇಹದಿಂದ ರಕ್ತ ನೀರಿನಂತೆ ಸೋರುತ್ತಿದ್ದ ಕಾರಣ ಅವರು ಪ್ರಜ್ಞೆ ಕಳೆದುಕೊಳ್ಳುತ್ತಿದ್ದಾರೆಂದು ಅನ್ನಿಸಿತು ಎಂದಿದ್ದಾರೆ.

Also Read
ಪ್ಯಾರಿಸ್​ನಲ್ಲಿ ಐಶ್ವರ್ಯ ರೈ ಬಚ್ಚನ್​! Aishwarya Rai Bachchan
"As the plane was crashing, the captain's head was split open and his body was covered in injuries" – An eyewitness doctor describes the Flydubai plane crash.

ಪ್ರಾಣ ಉಳಿಸಲು ವೈದ್ಯರ ಹೋರಾಟ!

ಒಂದೆಡೆ ವಿಮಾನವು ಕುಸಿತ ಕಾಣುತ್ತಿದ್ದರೆ, ಮತ್ತೊಂದೆಡೆ ಕ್ಯಾಪ್ಟನ್ ಮಚ್ಚಾರ್​ ಪ್ರಾಣಾಪಾಯದಲ್ಲಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಡಾ. ಮೊಸೇವ್, ವಿಮಾನದಲ್ಲಿದ್ದ ಲಭ್ಯವಿರುವ ವಸ್ತುಗಳನ್ನೇ ಬಳಸಿ ಕ್ಯಾಪ್ಟನ್ ಮಚ್ಚಾರ್ ಅವರ ತಲೆ ಹಾಗೂ ಕೈಗಳ ರಕ್ತಸ್ರಾವವನ್ನು ತಡೆಯಲು ಹರಸಾಹಸ ಪಟ್ಟರು. ಅವರ ಸಮಯಪ್ರಜ್ಞೆ ಮತ್ತು ಚಿಕಿತ್ಸೆಯಿಂದಾಗಿ ಕ್ಯಾಪ್ಟನ್ ರಕ್ತದೊತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ, ವಿಮಾನ ಲ್ಯಾಂಡ್​ ಆದ ಬಳಿಕ ಸೌದಿಯ ಆಸ್ಪತ್ರೆಗೆ ದಾಖಲಾಗಲು ಸಹಕಾರಿಯಾಯಿತು.

ನಾವು ಭಯೋತ್ಪಾದಕನನ್ನೂ ಕಟ್ಟಿಹಾಕಿದೆವು!

ಕ್ಯಾಪ್ಟನ್‌ಗೆ ಚಿಕಿತ್ಸೆ ನೀಡುತ್ತಿದ್ದಂತೆಯೇ, ವಿಮಾನದಲ್ಲಿದ್ದ ಕೆಲ ಧೈರ್ಯಶಾಲಿ ಪ್ರಯಾಣಿಕರು ಒಟ್ಟಾಗಿ ಹಲ್ಲೆ ನಡೆಸಿದ ಸಹ ಪೈಲಟ್​ ಮೇಲೆ ಮುಗಿಬಿದ್ದು, ಅವನನ್ನು ಗಟ್ಟಿಯಾಗಿ ಹಿಡಿದು ವಿಮಾನದ ಸೀಟ್​ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ನಂತರ ಪೈಲಟ್​ಗಳ ಇನ್ನೊಂದು ತಂಡ, ವಿಮಾನವನ್ನು ತಮ್ಮ ಹತೋಟಿಗೆ ತೆಗೆದುಕೊಂಡು, ಸೌದಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದರು ಎಂದು ಡಾ. ಶೋಟಾ ಮೊಸೇವ್ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಶ್ಲಾಘನೆ!

ಎಕ್ಸ್ (X) ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಅತ್ಯಂತ ಗಂಭೀರ ಅಪಾಯದ ಪರಿಸ್ಥಿತಿಯಲ್ಲಿ ಮತ್ತು ತೀವ್ರವಾಗಿ ಗಾಯಗೊಂಡಿದ್ದರೂ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅಪಾರ ಧೈರ್ಯವನ್ನು ಹಾಗೂ ಇತರರ ಪ್ರಾಣ ರಕ್ಷಿಸುವ ದೃಢ ಸಂಕಲ್ಪವನ್ನು ಪ್ರದರ್ಶಿಸಿದ್ದಾರೆ. ಅವರ ಶೌರ್ಯವು ನೂರಾರು ಜೀವಗಳನ್ನು ಉಳಿಸಲು ಮತ್ತು ದೊಡ್ಡ ದುರಂತವನ್ನು ತಪ್ಪಿಸಲು ಸಹಾಯ ಮಾಡಿದೆ.

ಕ್ಯಾಪ್ಟನ್ ಮಚ್ಚಾರ್ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಮಚ್ಚಾರ್ ಅವರ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net