ಚಾಕು ತೋರಿಸಿ ಚಿನ್ನಾಭರಣ ಕಳವು

Gold jewellery stolen at knifepoint
Gold jewellery stolen at knifepoint
Published on
ಚಿಂತಾಮಣಿ: ಕುರುಬೂರು ಕೆರೆ ಬಳಿ ಕುರಿಗಳನ್ನು ಮೇಯಿಸುತ್ತಿದ್ದ ಮಹಿಳೆಗೆ ಚಾಕು ತೋರಿಸಿದ ದುಷ್ಕರ್ಮಿ ಚಿನ್ನದ ಓಲೆ ಮತ್ತು ತಾಳಿ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಕುರುಬೂರು ಪದ್ಮಾ (48) ಚಿನ್ನಾಭರಣ ಕಳೆದುಕೊಂಡವರು. ಮಂಗಳವಾರ ಕುರಿಗಳನ್ನು ಮೇಯಿಸಲು ಹೋಗಿದ್ದಾಗ ಬೈಕ್​ ಸವಾರ ನನ್ನ ಬಳಿ ಬಂದು ಚಾಕು ತೋರಿಸಿ ಬೆದರಿಸಿ ಒಡವೆ ಕೊಡು, ಇಲ್ಲವೇ ಕುರಿಗಳನ್ನು ಕೊಡು ಎಂದು ಬೆದರಿಸಿದ್ದಾನೆ. ಪ್ರತಿರೋಧ ಮಾಡಿದಾಗ ಓಲೆ, ತಾಳಿ ಕಿತ್ತುಕೊಂಡಿದ್ದಾನೆ. ಓಲೆಗಳನ್ನು ಕಿತ್ತುಕೊಂಡಾಗ ಎರಡೂ ಕಿವಿಗಳಿಗೆ ಗಾಯವಾಗಿದ್ದು, ಪಕ್ಕಕ್ಕೆ ತಳ್ಳಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net