ಗೊಗಡಿಹಾಳ ಶಾಲೆಗೆ ಒಬ್ಬರೇ ಶಿಕ್ಷಕರು

ಸುರಪುರ ತಾಲೂಕಿನ ಗೊಗಡಿಹಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಣ ಹೆಚ್ಚುವರಿ ಶಿಕರನ್ನು ನೇಮಿಸಬೇಕೆಂದು ಆಗ್ರಹಿಸಿ ಆಗ್ರಹಿಸಿ ಯಾದಗಿರಿ ಡಿಡಿಪಿಐ ಕಚೇರಿ ಎದುರು ಸೋಮವಾರ ಎಐಡಿಎಸ್​ಒ ನೇತೃತ್ವದಲ್ಲಿ ಧರಣಿ ನಡೆಯಿತು. ಶಿಲ್ಪಾ ಬಿ. ಕೆ., ಲಕ್ಷಿ$್ಮಬಾಯಿ, ದೇವಮ್ಮ, ರೇಣುಕಾ, ಶಾಂತಮ್ಮ, ಶೋಭಾ, ಮಲ್ಲಮ್ಮ, ಯಲ್ಲಮ್ಮ, ಭೀಮಣ್ಣ, ರಾಯಪ್ಪ, ವೆಂಕಟೇಶ, ದೇವಿಂದ್ರ ಇತರರಿದ್ದರು.
ಸುರಪುರ ತಾಲೂಕಿನ ಗೊಗಡಿಹಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಣ ಹೆಚ್ಚುವರಿ ಶಿಕರನ್ನು ನೇಮಿಸಬೇಕೆಂದು ಆಗ್ರಹಿಸಿ ಆಗ್ರಹಿಸಿ ಯಾದಗಿರಿ ಡಿಡಿಪಿಐ ಕಚೇರಿ ಎದುರು ಸೋಮವಾರ ಎಐಡಿಎಸ್​ಒ ನೇತೃತ್ವದಲ್ಲಿ ಧರಣಿ ನಡೆಯಿತು. ಶಿಲ್ಪಾ ಬಿ. ಕೆ., ಲಕ್ಷಿ$್ಮಬಾಯಿ, ದೇವಮ್ಮ, ರೇಣುಕಾ, ಶಾಂತಮ್ಮ, ಶೋಭಾ, ಮಲ್ಲಮ್ಮ, ಯಲ್ಲಮ್ಮ, ಭೀಮಣ್ಣ, ರಾಯಪ್ಪ, ವೆಂಕಟೇಶ, ದೇವಿಂದ್ರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೆಚ್ಚುವರಿ ಗುರುಗಳ ನೇಮಕಕ್ಕೆ ಎಐಡಿಎಸ್​ಒ ಆಗ್ರಹ
  • ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ
ಯಾದಗಿರಿ: ಸುರಪುರ ತಾಲೂಕಿನ ಗೊಗಡಿಹಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಣ ಹೆಚ್ಚುವರಿ ಶಿಕರನ್ನು ನೇಮಿಸಬೇಕು ಮತ್ತು ಮೂಲಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಶಾಲಾ ಶಿಣ ಇಲಾಖೆಯ ಉಪನಿರ್ದೇಶಕರ (ಡಿಡಿಪಿಐ) ಕಚೇರಿ ಮುಂದೆ ಸೋಮವಾರ ಆಲ್​ ಇಂಡಿಯಾ ಡೆಮಾಕ್ರಟಿಕ್​ ಸ್ಟೂಡೆಂಟ್ಸ್​ ಆರ್ಗನೈಸೇಷನ್​ (ಎಐಡಿಎಸ್​ಒ) ನೇತೃತ್ವದಲ್ಲಿ ಶಾಲಾ ಮಕ್ಕಳು ಹಾಗೂ ಪಾಲಕರು ಪ್ರತಿಭಟನೆ ನಡೆಸಿದರು.
ಗೊಗಡಿಹಾಳದ ಈ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ಒಟ್ಟು 75ಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಇಡೀ ಶಾಲೆಗೆ ಕೇವಲ ಒಬ್ಬರೇ ಕಾಯಂ ಶಿಕರಿದ್ದಾರೆ. ಇಲ್ಲಿನ ಏಕೈಕ ಶಿಕರು ಐದೂ ತರಗತಿಗಳನ್ನು ಒಟ್ಟಿಗೆ ನಿಭಾಯಿಸುತ್ತಿರುವುದರಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಗುಣಮಟ್ಟದ ಶಿಣದಿಂದ ವಂಚಿತರಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೋಧಕ ಸಿಬ್ಬಂದಿ ಕೊರತೆಯಷ್ಟೇ ಅಲ್ಲದೆ, ಶಾಲೆಗೆ ಕನಿಷ್ಠ ಮೂಲಸೌಕರ್ಯಗಳೂ ಇಲ್ಲ. ಶುದ್ಧ ಕುಡಿಯುವ ನೀರು, ವಿದ್ಯುತ್​ ಸಂಪರ್ಕ, ಸುಸಜ್ಜಿತ ಶೌಚಗೃಹ ಹಾಗೂ ಆಟದ ಮೈದಾನದ ಸೌಲಭ್ಯವಿಲ್ಲದೆ ಮಕ್ಕಳು ಪ್ರತಿದಿನ ಪರದಾಡುವಂತಾಗಿದೆ ಎಂದು ಪಾಲಕರು ದೂರಿದರು.
ಪ್ರತಿಭಟನೆಯಲ್ಲಿ ಗೊಗಡಿಹಾಳ ಗ್ರಾಮದ ಲಕ್ಷಿ$್ಮಬಾಯಿ, ದೇವಮ್ಮ, ರೇಣುಕಾ, ಶಾಂತಮ್ಮ, ಶೋಭಾ, ಮಲ್ಲಮ್ಮ, ಯಲ್ಲಮ್ಮ, ಭೀಮಣ್ಣ, ರಾಯಪ್ಪ, ವೆಂಕಟೇಶ, ದೇವಿಂದ್ರ, ಸುಭಾಷ್​ ಪೂಜಾರಿ, ಜಮಾಲಸಾಬ್​, ಶರಣಗೌಡ, ಸೋಮಣಗೌಡ, ಪೋಷಕರು, ವಿದ್ಯಾರ್ಥಿಗಳು ಹಾಗೂ ಸಂಟನೆಯ ಪದಾಧಿಕಾರಿಗಳು ಇತರರಿದ್ದರು.
ನಿರ್ಲಕ್ಷಿಸಿದರೆ ಉಗ್ರ ಹೋರಾಟ
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್​ಒ ಜಿಲ್ಲಾ ಸಂಚಾಲಕರಾದ ಶಿಲ್ಪಾ ಬಿ. ಕೆ. ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಮತ್ತು ಅಲ್ಲಿನ ವಿದ್ಯಾರ್ಥಿಗಳ ಭವಿಷ್ಯ ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಅಧಿಕಾರಿಗಳು ಕೇವಲ ಭರವಸೆ ನೀಡದೆ, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಹೋರಾಟ ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪಟ್ಟುಬಿಡದ ಪ್ರತಿಭಟನಾಕಾರು
ಮನವಿಪತ್ರ ಸ್ವೀಕರಿಸಲು ಎರಡು ಬಾರಿ ಅಧಿಕಾರಿಗಳು ಬಂದರೂ ಸೂಕ್ತ ಭರವಸೆ ದೊರೆಯದ ಕಾರಣ ಪಾಲಕರು ಮತ್ತು ವಿದ್ಯಾರ್ಥಿಗಳು ಪಟ್ಟು ಬಿಡದೇ ಡಿಡಿಪಿಐ ಕಚೇರಿಯ ಬಾಗಿಲ ಮುಂದೆ ಕುಳಿತು ಮಧ್ಯಾಹ್ನದ ಊಟ ಮುಗಿಸಿ, ಪುನ@ ಪ್ರತಿಭಟನೆಯನ್ನು ಮುಂದುವರಿಸಿದರು. ಅಂತಿಮ ಸುತ್ತಿನ ಮಾತುಕಥೆಗಾಗಿ ಧಾವಿಸಿ ಬಂದ ಡಿಡಿಪಿಐ ಅವರು ಮನವಿಪತ್ರ ಸ್ವೀಕರಿಸಿ, ಒಂದು ವಾರದದೊಳಗೆ ಶಿಕರನ್ನು ನಿಯೋಜನೆ ಮಾಡುವುದಾಗಿ ಭರವಸೆ ನೀಡಿದ ನಂತರವೇ ಈ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net