ಅನೀಶ್ ಗಿರಿಯ ಜೊತೆಗೆ ಅಲ್ಪೈನ್ SG ಪೈಪರ್ಸ್ ತಂಡದಲ್ಲಿ ವಿಶ್ವ ನಂ. 3 ಬಿಯಾನೋ ಕರುನಾ ಮತ್ತು ಹೊ ಯಿಫಾನ್ ಸೇರಿದಂತೆ ಉನ್ನತ ಅಂತರರಾಷ್ಟ್ರೀಯ ಆಟಗಾರರು ಇದ್ದಾರೆ. ಜೊತೆಗೆ ಭಾರತದ ಪ್ರಮುಖ ಚದುರಂಗ ಪ್ರತಿಭೆಗಳಾದ ಆರ್. ಪ್ರಗ್ನಾನಂದ ಮತ್ತು ಲಿಯೋನ್ ಲೂಕ್ ಮೆಂಡೋಂಸಾ ತಂಡವನ್ನು ಇನ್ನಷ್ಟು ಬಲಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅನೀಶ್ ನಮ್ಮ ತಂಡ ಅತ್ಯಂತ ಶಕ್ತಿಶಾಲಿ ಹಾಗೂ ಸಮತೋಲನ ಹೊಂದಿದ್ದು, ತಂಡದ ಜೊತೆಗೆ ಆಡುವುದು ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದರು.