ಕನ್ನಡ ವಿರೋಧಿ ನಿಲುವು ಕೈಬಿಡಿ / ANEKAL

ಬೆಂಗಳೂರು&ಹೊಸೂರು ರಾಷ್ಟ್ರೀಯ ಹೆದ್ದಾರಿಯ ಅತ್ತಿಬೆಲೆ ಗಡಿಯಲ್ಲಿ ಖಾಲಿ ಸಿಲಿಂಡರ್​ಗಳನಿಟ್ಟು ಕನ್ನಡಪರ ಸಂಟನೆಗಳಿಂದ ಪ್ರತಿಭಟಿಸಲಾಯಿತು. ಕನ್ನಡ ಚಳವಳಿ ವಾಟಾಳ್​ ಪದ ಅಧ್ಯ ವಾಟಾಳ್​ ನಾಗರಾಜ್​, ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯ ಮಂಜುನಾಥ್​ ದೇವು, ಕನ್ನಡ ಸೇನೆ ಕರ್ನಾಟಕ ಸಂಟನೆಯ ಅಧ್ಯ ಕೆ.ಆರ್​. ಕುಮಾರ್​, ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯ ಕೆ.ನಾಗರಾಜ್​, ಯುವ ಟಕದ ಜಿಲ್ಲಾಧ್ಯ ಆರ್​. ಮದುಕುಮಾರ್​ ಇದ್ದರು.
ಬೆಂಗಳೂರು&ಹೊಸೂರು ರಾಷ್ಟ್ರೀಯ ಹೆದ್ದಾರಿಯ ಅತ್ತಿಬೆಲೆ ಗಡಿಯಲ್ಲಿ ಖಾಲಿ ಸಿಲಿಂಡರ್​ಗಳನಿಟ್ಟು ಕನ್ನಡಪರ ಸಂಟನೆಗಳಿಂದ ಪ್ರತಿಭಟಿಸಲಾಯಿತು. ಕನ್ನಡ ಚಳವಳಿ ವಾಟಾಳ್​ ಪದ ಅಧ್ಯ ವಾಟಾಳ್​ ನಾಗರಾಜ್​, ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯ ಮಂಜುನಾಥ್​ ದೇವು, ಕನ್ನಡ ಸೇನೆ ಕರ್ನಾಟಕ ಸಂಟನೆಯ ಅಧ್ಯ ಕೆ.ಆರ್​. ಕುಮಾರ್​, ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯ ಕೆ.ನಾಗರಾಜ್​, ಯುವ ಟಕದ ಜಿಲ್ಲಾಧ್ಯ ಆರ್​. ಮದುಕುಮಾರ್​ ಇದ್ದರು.
Published on
ಆನೇಕಲ್​ : ಅಡುಗೆ ಅನಿಲ, ತೈಲ ಪೂರೈಕೆಯಲ್ಲಿನ ತೊಂದರೆ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ಸಮಗ್ರ ಕರ್ನಾಟಕ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿ ಬೆಂಗಳೂರು&ಹೊಸೂರು ರಾಷ್ಟ್ರೀಯ ಹೆದ್ದಾರಿಯ ಅತ್ತಿಬೆಲೆ ಗಡಿಯಲ್ಲಿ ಖಾಲಿ ಸಿಲಿಂಡರ್​ಗಳನಿಟ್ಟು ಕನ್ನಡಪರ ಸಂಟನೆಗಳಿಂದ ಪ್ರತಿಭಟಿಸಲಾಯಿತು.
ಹೆದ್ದಾರಿ ತಡೆಯಲು ಯತ್ನಿಸಿದ ಹೋರಾಟಗಾರರನ್ನು ಅತ್ತಿಬೆಲೆ ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.
ಕನ್ನಡ ಚಳವಳಿ ವಾಟಾಳ್​ ಪದ ಅಧ್ಯ ವಾಟಾಳ್​ ನಾಗರಾಜ್​ ಮಾತನಾಡಿ, ಯುದ್ಧ ಬೇಡ ಗ್ಯಾಸ್​ ಬೇಕು, ಹಿಂದಿ ಬೇಡ ಕನ್ನಡ ಬೇಕು, ಇಲ್ಲವಾದರೆ ಸಿಎಂ ಮನೆ ಮುಂದೆ ಹಗಲಿರುಳು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸರ್ಕಾರಗಳ ಕನ್ನಡ ವಿರೋಧಿ ನಿಲುವುಗಳಿಂದ ಕರ್ನಾಟಕದಲ್ಲಿ ಕನ್ನಡಿಗರು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ. ಬಜೆಟ್​ನಲ್ಲಿ ಈಗಾಗಲೇ 800 ಆಂಗ್ಲ ಶಾಲೆಗಳನ್ನು ತೆರೆಯಲು 3900 ಕೋಟಿ ರೂ. ೂಷಿಸಿದೆ. ಆದರೆ, 30 ವರ್ಷಗಳಿಂದ ಹೊರನಾಡ ಕನ್ನಡ ಶಾಲೆಗಳಿಗೆ ಯಾವ ಸರ್ಕಾರಗಳೂ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಹೀಗಾಗಿ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಮುಂದಿನ ಬಜೆಟ್​ನಲ್ಲಿ 500 ಕೋಟಿ ರೂಪಾಯಿಯನ್ನು ಕಾಸರಗೂಡು, ಹೊಸೂರು, ತಾಳವಾಡಿ, ಸೊಲ್ಲಾಪುರ ಮತ್ತು ಮಡಕಶಿರಾಗಳಿಗೆ ಬಿಡುಗಡೆ ಮಾಡಲೇಬೇಕು ಎಂದು ಪಟ್ಟು ಹಿಡಿದರು. ಕನ್ನಡ ವಿರೋಧಿ ನಿಲುವುಗಳನ್ನು ಕೈಬಿಡದಿದ್ದರೆ ಮುಖ್ಯಮಂತ್ರಿ ಮನೆ ಮುಂದೆ ಮಾ.23ರಂದು ಹಗಲಿರುಳು ಪ್ರತಿಭಟನೆ ನಡೆಸಲು ಕನ್ನಡಪರ ಚಳವಳಿಗಳು ತೀರ್ಮಾನಿಸಲಿವೆ ಎಂದು ಎಚ್ಚರಿಸಿದರು.
ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯ ಮಂಜುನಾಥ್​ ದೇವು ಮಾತನಾಡಿ, ರೈಲ್ವೆ, ಬ್ಯಾಂಕ್​ ಇನ್ನಿತರ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಲಾಖಾ ಪರೀೆಗಳಲ್ಲಿ ಕನ್ನಡವನ್ನು ಕಡೆಗಣಿಸಿ ಹಿಂದಿ ಹೇರಿಕೆ ಕೈಗೊಳ್ಳಲಾಗುತ್ತಿದೆ. ಇತ್ತ ರಾಜ್ಯ ಸರ್ಕಾರ ಕನ್ನಡಕ್ಕೆ ಆದ್ಯತೆ ನೀಡುತ್ತಿಲ್ಲ. ಅತ್ತ ಕೇಂದ್ರ ಹಿಂದಿ ಹೇರಿಕೆಯಿಂದ ಕನ್ನಡ ಕೊಲ್ಲಲ್ಪಡುತ್ತಿದೆ. ಹೀಗಾಗಿ ಮಾರ್ಚ್​ 28 ರಂದು ಬೆಂಗಳೂರು ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ತಡೆಯಲು ತೀರ್ಮಾನಿಸಿದ್ದೇವೆ ಎಂದರು.
ಮುಂದಿನ ತಿಂಗಳು ಚಿತ್ರದುರ್ಗ, ದಾವಣಗೆರೆ ರಸ್ತೆಗಳನ್ನು ಗುರಿಯಾಗಿಸಲಾಗುವುದು. ಅಲ್ಲಿಗೂ ಸರ್ಕಾರ ಮಣಿಯದಿದ್ದರೆ ದೇವನಹಳ್ಳಿ ಅಂತಾರಾಷ್ಟ್ರೀಯ ರಸ್ತೆಯನ್ನು ಬಂದ್​ ಮಾಡಲಾಗುವುದೆಂದರು.ಗ್ಯಾಸ್​ ಸಮಸ್ಯೆ ಕೂಡಲೇ ಬಗೆ ಹರಿಯಬೇಕು, ಮಹದಾಯಿ, ಮೇಕೆದಾಟು, ಕೃಷ್ಣ ಮೇಲ್ದಂಡೆ ಯೋಜನೆಗಳ ವಿಚಾರದಲ್ಲಿ ರಾಜ್ಯ ಕೋರಿದ ಹಾಗೆ ನಡೆದುಕೊಳ್ಳಬೇಕು, ಕನ್ನಡ ಶಾಲೆಗಳನ್ನು ಮುಚ್ಚಬಾರದು ಎಂದರು.
ವಿದ್ಯಾರ್ಥಿ ಟಕದ ಜಿಲ್ಲಾಧ್ಯ ಆರ್​. ಸತೀಶ್​, ರಾಜ್​, ಆನೇಕಲ್​ ತಾಲೂಕು ಕಜಾವೇ ಕಾರ್ಮಿಕ ಟಕದ ಅಧ್ಯ ಗುಡ್ಡಹಟ್ಟಿ ಮಂಜು, ಖಜಾಂಚಿ ಕೋದಂಡರಾಮ, ಮಹಿಳಾ ಟಕದ ಉಪಾಧ್ಯೆ ಸರಸ್ವತಿ, ಸಂಟನಾ ಕಾರ್ಯದರ್ಶಿ ಶಶಿಕುಮಾರಿ, ತಾಲೂಕು ಪ್ರಧಾನ ಕಾರ್ಯದರ್ಶಿ ಇಚ್ಚಂಗೂರು ರವಿಕುಮಾರ್​, ಮುಖಂಡ ಬಳಗೆರೆ ವೆಂಕಟೇಶ್​, ತಾಲೂಕು ಉಪಾಧ್ಯ ಜಾವೀದ್​ ಖಾನ್​, ತಾಲೂಕು ಮುಖಂಡರಾದ ಮೆಹಬೂಬ್​ ಪಾಷ, ಬಿದರಗುಪ್ಪೆ ಸುರೇಶ್​, ಎಂ.ಮಹಂತ್​, ಅರುಣ್​ಕುಮಾರ್​, ಅಂಕುಶ್​, ಕನ್ನಡಸೇನೆ ಮಹಂತೇಶ್​, ಡಾ.ರಾಜ್​ ಕುಮಾರ್​ ಅಭಿಮಾನಿ ಸಂದ ಅಧ್ಯ ಕುಮಾರ್​, ಮುನಿರಾಜು ಅತ್ತಿಬೆಲೆ ವಿಮಲ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net