ಮೂಢನಂಬಿಕೆ ಕೈಬಿಟ್ಟು ಚಿಕಿತ್ಸೆ ಪಡೆಯಿರಿ

ಬಂಡಿಹಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹಾವು ಕಡಿತ ತಡೆಗಟ್ಟುವಿಕೆ ಕಾರ್ಯಕ್ರಮದಲ್ಲಿ ಡಾ. ವಿದ್ಯಾ ನಾಗರಡ್ಡಿ ಮಾತನಾಡಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಜ್ಯೋತಿ, ಇಮಾಮ್ ಹಸೇನ ತೆಗ್ಗಿನಮನಿ, ರಾಜಶೇಖರ, ಆಶಾ ಕಾರ್ಯಕರ್ತೆಯರಾದ ಕಸ್ತೂರೆಮ್ಮ ಬಂಡ್ರಿ, ಕಳಕಮ್ಮ ಪೂಜಾರ, ಸುನಂದಾ ಗೋಣಿ, ಶರಣಮ್ಮ, ಗಂಗಮ್ಮ ಇತರರಿದ್ದರು.

Published on
ಯಲಬುರ್ಗಾ: ಹಾವು ಕಡಿತದಿಂದ ಉಂಟಾಗುವ ಅಪಾಯಗಳನ್ನು ತಡೆಗಟ್ಟಲು ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಡಾ. ವಿದ್ಯಾ ನಾಗರಡ್ಡಿ ಹೇಳಿದರು.
ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲ ಸಂದರ್ಭದಲ್ಲಿ ಹಾವುಗಳ ಓಡಾಟ ಹೆಚ್ಚಾಗುವುದರಿಂದ ಜನರು ಎಚ್ಚರಿಕೆ ವಹಿಸಬೇಕು.
 ರಾತ್ರಿ ವೇಳೆ ಟಾರ್ಚ್ ಬಳಸಿ ಸಂಚರಿಸಬೇಕು.  ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವಾಗ ಪಾದರಕ್ಷೆ ಧರಿಸುವುದು, ಮನೆ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದರು.  
ಹಾವು ಕಡಿತಕ್ಕೊಳಗಾದ ವ್ಯಕ್ತಿ ಮೂಢನಂಬಿಕೆಗೆ ಮೊರೆ ಹೋಗದೇ, ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಬೇಕು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ಪ್ರಾಣಾಪಾಯ ತಪ್ಪಿಸಬಹುದೆಂದು ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net