ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಹರ್ ಘರ್ ಜಲ್ ಘೋಷಣೆ ಮಾಡುವ ಕುರಿತು ಮಾತನಾಡಿದ ಸಿಇಒ, ಹರ್ ಘರ್ ಜಲ್ ಪ್ರಗತಿ ತುಂಬಾ ಕಡಿಮೆಯಾಗಿದ್ದು, ಎಲ್ಲ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರು, ಸಹಾಯಕ ಇಂಜಿನಿಯರರು ಹಾಗೂ ಕಿರಿಯ ಇಂಜಿನಿಯರ್ ಅವರು ಸಂಬಂಧಪಟ್ಟ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ನೀಡಿ, ಸಮಸ್ಯೆಗಳನ್ನು ಬಗೆಹರಿಸಬೇಕು. ಪ್ರತಿ ಸಹಾಯಕ ಇಂಜಿನಿಯರರು ಮತ್ತು ಕಿರಿಯ ಇಂಜಿನಿಯರ್‌ಗಳಿಗೆ 5 ಗ್ರಾಮಗಳನ್ನು ಹರ್ ಘರ್ ಜಲ್ ಘೋಷಿಸಲು ಗುರಿ ನಿಗದಿಪಡಿಸಿ ಮೇ 18ರೊಳಗೆ ಕನಿಷ್ಠ 100 ಗ್ರಾಮಗಳನ್ನು ಹರ್ ಘರ್ ಜಲ್ ಯೋಜನೆಯಡಿ ಘೋಷಿಸಲು ಸೂಚಿಸಿದರು.