ಬಣಜಿಗ ಸಮಾಜಕ್ಕೆ ಮೀಸಲಾತಿ ನೀಡಿ

ಹುನಗುಂದ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರ ಪ್ರದೀಪ ಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು. ಅಧ್ಯಕ್ಷ ಅರುಣೋದಯ ದುದ್ಗಿ, ಕಾರ್ಯದರ್ಶಿ ಬಿ.ಸಿ. ಅಂಗಡಿ, ಅಂದಾನೆಪ್ಪ ಹವಾಲ್ದಾರ, ಎಸ್.ಎಸ್. ಚಿನಿವಾಲರ, ನಾಗಪ್ಪ ತ್ಯಾಪಿ, ಸಿ.ಎಸ್. ಹೊನವಾಡ, ಬಿ.ಎಸ್. ಕೆಂದೂರ, ಎಂ.ಬಿ. ಸಿಮಿಕೇರಿ ಇತರರಿದ್ದರು.
ಹುನಗುಂದ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರ ಪ್ರದೀಪ ಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು. ಅಧ್ಯಕ್ಷ ಅರುಣೋದಯ ದುದ್ಗಿ, ಕಾರ್ಯದರ್ಶಿ ಬಿ.ಸಿ. ಅಂಗಡಿ, ಅಂದಾನೆಪ್ಪ ಹವಾಲ್ದಾರ, ಎಸ್.ಎಸ್. ಚಿನಿವಾಲರ, ನಾಗಪ್ಪ ತ್ಯಾಪಿ, ಸಿ.ಎಸ್. ಹೊನವಾಡ, ಬಿ.ಎಸ್. ಕೆಂದೂರ, ಎಂ.ಬಿ. ಸಿಮಿಕೇರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ
ಹುನಗುಂದ: ಬಣಜಿಗ ಜಾತಿ ಉದ್ಯೋಗ ಮೀಸಲಾತಿಯಲ್ಲಿ ಪ್ರವರ್ಗ-2ಎ ಅಡಿಯಲ್ಲಿ ಪರಿಗಣಿಸಿ ತಕ್ಷಣ ಆದೇಶ ಹೊರಡಿಸಬೇಕೆಂದು ಹುನಗುಂದ ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಅರುಣೋದಯ ದುದ್ಗಿ ಮಾತನಾಡಿ, ಕರ್ನಾಟಕ ಉಚ್ಛ ನ್ಯಾಯಾಲಯ ತೀರ್ಪಿನಲ್ಲಿ ಬಣಜಿಗ ಸಮುದಾಯವನ್ನು ಉದ್ಯೋಗದ ಉದ್ದೇಶಕ್ಕೆ ಪ್ರವರ್ಗ-ಡಿ ಮತ್ತು ಶಿಕ್ಷಣ ಉದ್ದೇಶಕ್ಕೆ ಪ್ರವರ್ಗ-ಬಿ ಅಡಿಯಲ್ಲಿ ವರ್ಗೀಕರಿಸಿದ್ದು, ಸಂವಿಧಾನ ಆಶಯಗಳಿಗೆ ವಿರುದ್ಧವಾಗಿದೆ ಎಂದು ತೀರ್ಪು ನೀಡಿರುತ್ತಾರೆ.
ಆದ್ದರಿಂದ ಬಣಜಿಗ ಸಮುದಾಯವನ್ನು ಪರಿಷ್ಕೃತ 16 (4)ರ ಅಡಿಯಲ್ಲಿ ಪ್ರವರ್ಗ-ಡಿ ಬದಲಾಗಿ ಪ್ರವರ್ಗ-ಬಿ ಅಡಿಯಲ್ಲಿ ಮರು ವರ್ಗೀಕರಿಸಬೇಕು ಎಂದು ಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ. ಆದ್ದರಿಂದ ಕೂಡಲೇ ಸರ್ಕಾರದಿಂದ ಸ್ಪಷ್ಟ ಆದೇಶವಿಲ್ಲದಿರುವುದರಿಂದ ಬಣಜಿಗ ಸಮುದಾಯದ ಜನರಿಗೆ ಜಾತಿ ಪ್ರಮಾಣ ಪತ್ರ ವಿತರಣೆಯಲ್ಲಿ ಹಾಗೂ ಉದ್ಯೋಗಾಕಾಂಕ್ಷಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ತಿಳಿಸಿದರು.
ನಮ್ಮ ಸಮುದಾಯವು ಶೈಕ್ಷಣಿಕವಾಗಿ ಅತಿ ಹಿಂದುಳಿದಿರುವುದರಿಂದ ಸರ್ಕಾರಿ ನೇಮಕಾತಿಗಳಲ್ಲಿ ಅವಕಾಶಗಳಿಂದ ವಂಚಿತರಾಗುತ್ತಿದ್ದೇವೆ. ಇದು ಸಂವಿಧಾನದ ಸದಾಶಯಕ್ಕೆ ವ್ಯತಿರಿಕ್ತವಾಗಿದೆ. ನ್ಯಾಯಾಲಯದ ಆದೇಶದಂತೆ ಬಣಜಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಕೂಡಲೇ ಇಲಾಖೆಗೆ ಸೂಕ್ತ ಆದೇಶವನ್ನು ಸರ್ಕಾರ ಹೊರಡಿಸುವಂತೆ ಒತ್ತಾಯಿಸಿದರು.
ಕಾರ್ಯದರ್ಶಿ ಬಿ.ಸಿ. ಅಂಗಡಿ, ಅಂದಾನೆಪ್ಪ ಹವಾಲ್ದಾರ, ಎಸ್.ಎಸ್. ಚಿನಿವಾಲರ, ನಾಗಪ್ಪ ತ್ಯಾಪಿ, ಸಿ.ಎಸ್. ಹೊನವಾಡ, ಬಿ.ಎಸ್. ಕೆಂದೂರ, ಎಂ.ಬಿ. ಸೀಮಿಕೇರಿ, ಬಸವರಾಜ ಬಡ್ಡಿ, ಎಂ.ಬಿ. ಲಾಯದಗುಂದಿ, ಸಂಗವ್ವ ಜಿಗಳೂರ, ರಾಜು ಅಮರಾವತಿ, ಶರಣಪ್ಪ ಅಮರಾವತಿ, ಸಿ.ಎಸ್.ಪಾಟೀಲ, ಸಂತೋಷ ರಾಜಮನಿ, ಶರಣಪ್ಪ ಮರೋಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net