

ಹೊಸಕೋಟೆ :
ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು ಸರ್ಕಾರದ ಆದ್ಯತೆ. ಗ್ರಾಮಗಳು ಸಮಗ್ರ ಅಭಿವೃದ್ಧಿಯಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯಲ್ಲಿ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಹಾರೋಹಳ್ಳಿ&ಕೋಟೂರು&ಮುತ್ಸಂದ್ರ ರಸ್ತೆ, ಮುತ್ಸಂದ್ರ ಕೆರೆ, ನಾಗನಾಯಕನಕೋಟೆ&ಸಮೇತನಹಳ್ಳಿ ಕೆರೆಕೋಡಿ ರಸ್ತೆ, ಮುತ್ತುಕದಹಳ್ಳಿ ಚರಂಡಿ ನಿಮಾರ್ಣ ಹಾಗೂ ಅರೇಹಳ್ಳಿ ಕ್ರಾಸ್ವರೆಗೆ ರಸ್ತೆ ಕಾಮಗಾರಿ ಜತೆಗೆ ಅರೇಹಳ್ಳಿ, ಡಿ.ಹೊಸಹಳ್ಳಿ ಹಾಗೂ ಓಬಳಾಪುರ ಗ್ರಾಮಗಳ ರಸ್ತೆ, ಹಂದೇನಹಳ್ಳಿ ಕೆರೆ ಮತ್ತು ಹಂದೇನಹಳ್ಳಿಯಿಂದ ಬಾಣಾರಹಳ್ಳಿವರೆಗೆ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ರಾಧಾಕೃಷ್ಣ, ಮುತ್ಸಂದ್ರ ಗ್ರಾಪಂ ಪಿಡಿಒ ಮೆಹಬೂಬ್ ಪಾಷಾ, ದೇವನಗೊಂದಿ ಪಿಡಿಒ ಹರೀಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಯುನೈಟೆಡ್ ವೇ ಸಂಸ್ಥೆಯ ಸಿಎಸ್ಆರ್ ಅನುದಾನದಡಿ ತಾಲೂಕಿನ ಸುಮಾರು 10 ಕೆರೆಗಳ ಅಭಿವೃದ್ಧಿ ಹಾಗೂ ವಿವಿಧ ಶಾಲಾ ಕಟ್ಟಡಗಳ ನಿಮಾರ್ಣಕ್ಕೆ ಸಹಕಾರ ನೀಡಿರುವುದು ಶ್ಲಾಘನೀಯ. ಅನುಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ಧಿಗೂ ಸಂಸ್ಥೆ ಸಿಎಸ್ಆರ್ ಅನುದಾನದ ಮೂಲಕ ಸಹಕಾರ ನೀಡಿದಲ್ಲಿ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲು ಸಹಕಾರಿಯಾಗಲಿದೆ. ಆರೋಗ್ಯ ಕೇಂದ್ರದ ಮೂಲಸೌಕರ್ಯ ಬಲಪಡಿಸುವ ಅಗತ್ಯವಿದ್ದು, ಸ್ಥಳಿಯರ ಸಹಕಾರವೂ ಅಗತ್ಯವಿದೆ.
— > ಶರತ್ ಬಚ್ಚೇಗೌಡ, ಶಾಸಕ