ಬಲಗೈ ಸಮುದಾಯಕ್ಕೆ ನ್ಯಾಯ ಕೊಡಿ /ANEKAL

ಆನೇಕಲ್​ನ ಕಾವಲಹೊಸಹಳ್ಳಿಯಲ್ಲಿ ತಾಲೂಕು ಬಲಗೈ ಸಮುದಾಯಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಲಗೈ ಸಮುದಾಯದ ಹಿರಿಯ ಮುಖಂಡ ಬಳ್ಳೂರು ಮುನಿವೀರಪ್ಪ ಮಾತನಾಡಿದರು.ಛಲವಾದಿ ಮಹಾಸಭಾ ರಾಜ್ಯ ಖಜಾಂಚಿ ಮೈಕೋ ನಾಗರಾಜು, ಬಲಗೈ ಸಮುದಾಯದ ಮುಖಂಡರಾದ ರಾವಣ, ವೆಂಕಟೇಶ್​ ಮೂರ್ತಿ, ಹೋರಾಟಗಾರದ ಸುರೇಶ್​ ಪೋತಾ, ವೆಂಕಟೇಶ್​ಮೂರ್ತಿ ಇದ್ದರು.
ಆನೇಕಲ್​ನ ಕಾವಲಹೊಸಹಳ್ಳಿಯಲ್ಲಿ ತಾಲೂಕು ಬಲಗೈ ಸಮುದಾಯಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಲಗೈ ಸಮುದಾಯದ ಹಿರಿಯ ಮುಖಂಡ ಬಳ್ಳೂರು ಮುನಿವೀರಪ್ಪ ಮಾತನಾಡಿದರು.ಛಲವಾದಿ ಮಹಾಸಭಾ ರಾಜ್ಯ ಖಜಾಂಚಿ ಮೈಕೋ ನಾಗರಾಜು, ಬಲಗೈ ಸಮುದಾಯದ ಮುಖಂಡರಾದ ರಾವಣ, ವೆಂಕಟೇಶ್​ ಮೂರ್ತಿ, ಹೋರಾಟಗಾರದ ಸುರೇಶ್​ ಪೋತಾ, ವೆಂಕಟೇಶ್​ಮೂರ್ತಿ ಇದ್ದರು.
Published on
ಆನೇಕಲ್​ : ಒಳ ಮೀಸಲಾತಿಗೆ ಅನ್ವಯಿಸುವ ರೋಸ್ಟರ್​ ಬಿಂದು ಪರಿಷ್ಕರಿಸಿ ಸಮುದಾಯಕ್ಕೆ ನ್ಯಾಯ ಕೊಡಬೇಕು. ಇಲ್ಲದಿದ್ದರೆ ಬಲಗೈ ಸಮುದಾಯದವರು ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದು ಬಲಗೈ ಸಮುದಾಯದ ಮುಖಂಡ ಬಳ್ಳೂರು ಮುನಿವೀರಪ್ಪ ಎಚ್ಚರಿಕೆ ನೀಡಿದರು.
ಕಾವಲಹೊಸಹಳ್ಳಿಯ ಡಾ.ಬಿ.ಆರ್​.ಅಂಬೇಡ್ಕರ್​ ಭವನದಲ್ಲಿ ತಾಲೂಕು ಬಲಗೈ ಸಮುದಾಯಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿವೃತ್ತ ನ್ಯಾಯಾಧೀಶ ನಾಗಮೋಹನದಾಸ್​ ವರದಿಯಲ್ಲಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಜಾರಿ ಮಾಡಿರುವ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಬಲಗೈ ಸಮುದಾಯವನ್ನು ಬಿ ಗುಂಪಿಗೆ ಸೇರಿಸಿ ರೋಸ್ಟರ್​ ಬಿಂದುವಿನಲ್ಲಿ 9 ಸ್ಥಾನಕ್ಕೆ ಇಳಿಸಲಾಗಿದೆ. ಇದರಿಂದ ಬಲಗೈ ಸಂಬಂಧಿತ ಜಾತಿಗಳಿಗೆ ಸರ್ಕಾರಿ ನೇಮಕಾತಿಯಲ್ಲಿ ಉದ್ಯೋಗ, ವೃತ್ತಿ ಶಿಕ್ಷಣದಲ್ಲಿ ಕಾಲೇಜುಗಳಲ್ಲಿ ಸೀಟು ಹಾಗೂ ನೌಕರರಿಗೆ ಬಡ್ತಿಯಲ್ಲಿಯೂ ಅವಕಾಶ ಸಿಗುವುದಿಲ್ಲ. ಹಾಗಾಗಿ ಸರ್ಕಾರ ಇಂತಹ ಅವೈಜ್ಞಾನಿಕ ವರದಿಯನ್ನು ಮರು ಪರಿಶೀಲನೆ ಮಾಡಿ ಬಲಗೈ ಸಮುದಾಯದವರಿಗೆ ಸಾಮಾಜಿಕ ನ್ಯಾಯ ನೀಡಬೇಕು ಎಂದರು.
ಮುಖಂಡ ವೆಂಕಟೇಶ್​ ಗುರು ಮಾತನಾಡಿ, ಒಳ ಮೀಸಲಾತಿಯಲ್ಲಿ ಅನ್ಯಾಯ ಮಾಡಿದ್ದಕ್ಕೆ ಸಮುದಾಯದ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಸರ್ಕಾರಿ ಹುದ್ದೆ ಹಾಗೂ ಕಾಲೇಜುಗಳಲ್ಲಿ ಸೀಟುಗಳಲ್ಲಿ ದೊರೆಯುವುದಿಲ್ಲ, ಹೀಗಾಗಿ ನ್ಯಾಯ ಕೊಡಬೇಕು ಎಂದರು. ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್​ಟಿಡಿ ರಮೇಶ್​, ಮುಖಂಡರಾದ ಪುಷ್ಪರಾಜು, ಪಿಳ್ಳಪ್ಪ, ಲೋಕೇಶ್​,ಬಳ್ಳೂರು ಮುನಿಯಪ್ಪ, ನಾರಾಯಣಪ್ಪ, ವಕೀಲರಾದ ಆನಂದ್​ ಚಕ್ರವರ್ತಿ,ರುದ್ರಪ್ಪ ಇಗ್ಗಲೂರು ಪೀಳ್ಳಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net