ನಿಪ್ಪಾಣಿ: ಸೀರೆಯಿಂದ ಜೋಕಾಲಿ ಕಟ್ಟಿ ಆಟ ಆಡುತ್ತಿದ್ದಾಗ ಸೀರೆ ಕುತ್ತಿಗೆಗೆ ಬಿಗಿದು ತಾಲೂಕಿನ ಕೋಡಣಿ ಗ್ರಾಮದ 8ನೇ ತರಗತಿ ವಿದ್ಯಾರ್ಥಿನಿ ಶುಭ್ರಾ ಯುವರಾಜ ರಾವುತಪಾಟೀಲ(14) ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಶ್ರೀಪೇವಾಡಿ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಶುಭ್ರಾ ಓದುತ್ತಿದ್ದಳು.
ಮಳೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಶಾಲೆಗೆ ರಜೆ ಘೋಷಿಸಿದ ಕಾರಣ ತಂಗಿಯರ ಜತೆಗೂಡಿ ಜೋಕಾಲಿ ಆಟವಾಡುತ್ತಿದ್ದಾಗ ಸೀರೆ ಕುತ್ತಿಗೆಗೆ ಬಿಗಿದಿದೆ. ಬಳಿಕ ನೋಡಿದ ಅಜ್ಜ ಅಕ್ಕಪಕ್ಕದ ಮನೆಯವರು ಸೇರಿ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರು.
ಅಷ್ಟರಲ್ಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.