ಕೆAಭಾವಿ ಪುರಸಭೆಗೆ ಗಿರಿಜಾ ಅಧ್ಯಕ್ಷೆ

ಕೆಂಭಾವಿ ಪುರಸಭೆಗೆ ಬುಧವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದ ಗಿರಿಜÁ ರಮೇಶ ಕೊಡಗಾನೂರ ಅವರನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೃಹತ್ ಹೂಮಾಲೆ ಅಭಿನಂದಿಸಿದರು. ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ಸಿದ್ಧನಗೌಡ ಪೊಲೀಸ್ ಪಾಟೀಲ್, ಬಸನಗೌಡ ಯಾಳಗಿ, ಬಾಪುಗೌಡ ಪಾಟೀಲ್ ಇದ್ದರು.
ಕೆಂಭಾವಿ ಪುರಸಭೆಗೆ ಬುಧವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದ ಗಿರಿಜÁ ರಮೇಶ ಕೊಡಗಾನೂರ ಅವರನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೃಹತ್ ಹೂಮಾಲೆ ಅಭಿನಂದಿಸಿದರು. ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ಸಿದ್ಧನಗೌಡ ಪೊಲೀಸ್ ಪಾಟೀಲ್, ಬಸನಗೌಡ ಯಾಳಗಿ, ಬಾಪುಗೌಡ ಪಾಟೀಲ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚುನಾವಣಾಽಕಾರಿ ಶ್ರೀಧರ ಗೊಟೂರ ಘೋಷಣೆ
  • ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಕೆಂಭಾವಿ : ಪಟ್ಟಣದ ಪುರಸಭೆಯಲ್ಲಿ ಬುಧವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ನಿರೀಕ್ಷೆಯಂತೆ ವಾರ್ಡ್೧ರ ಗಿರಿಜÁ ರಮೇಶ ಕೊಡಗಾನೂರ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷೆಯಾಗಿದ್ದ ಪ್ರಿಯಾ ರಾಮನಗೌಡ ಪೊಲಿಸ್ ಪಾಟೀಲ್ ವಿರುದ್ಧ ಆಡಳಿತ ಪಕ್ಷದ ಸದಸ್ಯರೇ ಮಂಡಿಸಿದ್ದ ಅವಿಶ್ವಾಸ ನಿರ್ಣಯದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಬೆಳಗ್ಗೆ ೧೦ಕ್ಕೆ ಚುನಾವಣೆ ಪ್ರಕ್ರಿಯೆ ಆರಂಭವಾಗಿ ಮಧ್ಯಾಹ್ನ ೧೨ರವರೆಗೆ ಪೂರ್ಣಗೊಂಡಿತು.
ಒಟ್ಟು ೨೩ ಸದಸ್ಯ ಬಲದ ಪುರಸಭೆಯಲ್ಲಿ ೧೯ ಕಾಂಗ್ರೆಸ್ ಸದಸ್ಯರಿದ್ದರೆ ೪ ಜನ ಸದಸ್ಯರು ಬಿಜೆಪಿ ಪಕ್ಷದವರಿದ್ದು, ಬುಧವಾರ ನಡೆದ ಈ ಚುನಾವಣೆಯಲ್ಲಿ ಒಟ್ಟು ೧೮ ಜನ ಸದಸ್ಯರು ಹಾಜರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಒಂದೇ ಒಂದು ನಾಮಪತ್ರ ಸಲ್ಲಿಸಿದ್ದರಿಂದ ಗಿರಿಜÁ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಽಕಾರಿಯೂ ಆದ ಉಪ ವಿಭಾಗಾಽಕಾರಿ ಶ್ರೀಧರ ಗೊಟೂರ ತಿಳಿಸಿದರು.
ಈ ವೇಳೆ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಗಿರಿಜÁ ಅವರನ್ನು ಚುನಾವಣಾಽಕಾರಿ ಶ್ರೀಧರ ಗೊಟೂರ ಹೂಗುಚ್ಚ ನೀಡಿ ಅಭಿನಂದಿಸಿದರು. ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ತಹಸೀಲ್ದಾರ್ ಎಸ್.ಎ. ಸರಕಾವಸ್, ಮುಖ್ಯಾಽಕಾರಿ ಪ್ರಕಾಶ ಬಾಗಲಿ ಇದ್ದರು. ಪಿಎಸ್‌ಐ ಅಮೋಜ ಕಾಂಬಳೆ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಸಂಭ್ರಮಾಚರಣೆ: ನೂತನ ಅಧ್ಯಕ್ಷೆಯಾಗಿ ಗಿರಿಜÁ ರಮೇಶ ಕೊಡಗಾನೂರ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಇತ್ತ ಹೊರಗೆ ಅಪಾರ ಸಂಖ್ಯೆ ಕಾಂಗ್ರೆಸ್ ಕಾರ್ಯಕರ್ತರು ನೂತನ ಅಧ್ಯಕ್ಷರಿಗೆ ಬೃಹತ್ ಹೂಮಾಲೆ ಹಾಕಿ ಸನ್ಮಾನಿಸಿದರು. ನಂತರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಬಸನಗೌಡ ಹೊಸಮನಿ ಯಾಳಗಿ, ಡಿಸಿಸಿ ಬ್ಯಾಂಕ್ ನಿದೇರ್ಶಕ ಬಸವರಾಜ ಚಿಂಚೋಳಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ, ರಮೇಶ ಕೊಡಗಾನೂರ, ಖಾಜಾಪಟೇಲ್ ಕಾಚೂರ, ಸಾಹೇಬಲಾಲ್ ಆಂದೇಲಿ, ಶಿವಪ್ಪ ಕಂಬಾರ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net