ಸಂಘಟನೆಯಲ್ಲಿ ಘನಲಿಂಗ ಶ್ರೀ ಪಾತ್ರ ದೊಡ್ಡದು

 ಶ್ರಾವಣ ಮಾಸದ ನಿಮಿತ್ತ ಬಸವಕಲ್ಯಾಣದ ತ್ರಿಪುರಾಂತ ಸಂಸ್ಥಾನ ಗವಿಮಠದಲ್ಲಿ ಆಯೋಜಿಸಿದ್ದ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು. ಶರಣಪ್ಪ ಬಿರಾದಾರ, ಅಶೋಕ ರಡ್ಡಿ,  ರಾಜಕುಮಾರ ಇರಲೆ, ಸೋಮನಾಥ ರಾಜೋಳೆ ಇದ್ದರು.
ಶ್ರಾವಣ ಮಾಸದ ನಿಮಿತ್ತ ಬಸವಕಲ್ಯಾಣದ ತ್ರಿಪುರಾಂತ ಸಂಸ್ಥಾನ ಗವಿಮಠದಲ್ಲಿ ಆಯೋಜಿಸಿದ್ದ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು. ಶರಣಪ್ಪ ಬಿರಾದಾರ, ಅಶೋಕ ರಡ್ಡಿ, ರಾಜಕುಮಾರ ಇರಲೆ, ಸೋಮನಾಥ ರಾಜೋಳೆ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಭಿನವ ಶ್ರೀ ಬಣ್ಣನೆ
  • ಸಂಸ್ಥಾನ ಗವಿಮಠದಲ್ಲಿ ಉಪನ್ಯಾಸ ಮಾಲೆಯ
ಬಸವಕಲ್ಯಾಣ: ಶರಣರ ಸಂಘಟನೆ ಎಂದರೆ ಕೇವಲ ಭಕ್ತರ ಸಮೂಹವಲ್ಲ. ಅದು ಸಮಾನತೆ, ಸತ್ಯ, ಕಾಯಕ ಮತ್ತು ದಾಸೋಹದ ಮೌಲ್ಯಗಳ ಮೇಲೆ ನಿಮಾರ್ಣವಾದ ಸಾಮಾಜಿಕ ಚಳುವಳಿಯ ಮೂಲಕ ಸಮಾಜವನ್ನು ಸಂಘಟಿಸಿದ್ದು, ಇದರಲ್ಲಿ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಪಾತ್ರ ಬಹಳ ದೊಡ್ಡದು ಎಂದು ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಬಣ್ಣಿಸಿದರು.
ಶ್ರಾವಣ ಮಾಸದ ನಿಮಿತ್ತ ತ್ರಿಪುರಾಂತ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್​ನಿಂದ ಸೋಮವಾರ ಸಂಜೆ ಆಯೋಜಿಸಿದ್ದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂದೇಶ ಕುರಿತು ಉಪನ್ಯಾಸ ಮಾಲೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಶರಣರ ಧಾರ್ಮಿಕ ಚಿಂತನೆ ಮತ್ತು ಸಾಮಾಜಿಕ ಜಾಗೃತಿಯನ್ನು ಸಂಘಟಿಸುವಲ್ಲಿ ರುದ್ರಮುನಿ ಶಿವಾಚಾರ್ಯರ ಮಹತ್ವದ್ದಾಗಿದೆ. ಶರಣರ ಚಿಂತನೆಗಳನ್ನು ಕೇವಲ ಆಧ್ಯಾತ್ಮಿಕ ಸಾಧನೆಗೆ ಸೀಮಿತಗೊಳಿಸದೆ ಸಮಾಜದ ಸಾಮಾನ್ಯ ಜನರಿಗೂ ತಲುಪಿಸುವ ಕಾರ್ಯಕ್ಕೆ ಅವರು ಒತ್ತು ನೀಡಿದ್ದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಧಾರ್ಮಿಕ ಮೌಲ್ಯಗಳು ತಲುಪಲಿ ಎನ್ನುವ ಉದ್ದೇಶದಿಂದ 12ನೇ ಶತಮಾನದಲ್ಲಿಯೇ ಎಲ್ಲ ಸಮುದಾಯದವರನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದರು ಎಂದು ಹೇಳಿದರು.
ಗವಿಮಠ ಟ್ರಸ್ಟ್​ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ ಮಾತನಾಡಿ, ಪಂಚಾಚಾರ್ಯರ ಹಾಗೂ ಶರಣರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಈ ಕಾರ್ಯಕ್ರಮದ ಮೂಲ ಆಶಯವಾಗಿದೆ. ಗವಿಮಠದ ಸ್ಥಿರ ಆಸ್ತಿ ಮತ್ತು ಚರ ಆಸ್ತಿ ಕುರಿತು ಸರ್ಕಾರದಿಂದ ದಾಖಲೆ ಪಡೆದಿರುವ ಕುರಿತು ಸಂಪೂರ್ಣವಾದ ಮಾಹಿತಿ ನೀಡಿದರು.
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸವಕಲ್ಯಾಣ ಘಟಕದ ಸಹಕಾರಿ ಸಂಘದ ನಿರ್ದೇಶಕ ಅಶೋಕ ರಡ್ಡಿ ಮಾತನಾಡಿ, ಪೂಜ್ಯ ಗುರುಗಳ ಸಂಕಲ್ಪ ದೊಡ್ಡದು. ಸರಳತೆ ಮತ್ತು ಅವರ ನಡೆ ನುಡಿ ಒಂದಾಗಿರುವುದು ಬಹಳ ಸಂತೋಷದ ಸಂಗತಿ ಎಂದರು.
ಮಾಜಿ ಸೈನಿಕ ರಾಜಕುಮಾರ ಇರಲೆ, ಸೋಮನಾಥ ರಾಜೋಳೆ, ಶ್ರೀಶೈಲ ವಾತಡೆ, ಶಿವಲಿಂಗ ಸ್ವಾಮಿ, ವಿಠ್ಠಲ ರಾಜೋಳೆ, ಸಿದ್ದು ಉಳ್ಳೆ, ಗೋವಿಂದರೆಡ್ಡಿ ಕೊತಂಪಲ್ಲಿ, ಪ್ರಾಚಾರ್ಯ ಸೂರ್ಯಕಾಂತ ಶೀಲವಂತ, ಉಮೇಶ ಶೀಲವಂತ, ಅಭಿಷೇಕ ರಾಮಣ್ಣನವರು, ಸರಸ್ವತಿ ಬೆಂಬಲಗೆ, ಸುರೇಖಾ ಸಜ್ಜನಶೆಟ್ಟಿ, ಸಾಗರ ಮಾಲಗರ, ಪ್ರಶಾಂತ ಸ್ವಾಮಿ ಇತರರಿದ್ದರು. ನಿವೃತ್ತ ಕೃಷಿ ಅಧಿಕಾರಿ ಬಸವಂತಪ್ಪ ಲವಾರೆ ಸ್ವಾಗತಿಸಿದರು. ಮಲ್ಲಿಕಾರ್ಜುನ ಅಲಗುಡೆ ನಿರೂಪಣೆ ಮಾಡಿದರು. ರೇಣುಕಾ ಶಿವಶಂಕರ ರಾಮಣ್ಣನವರ ಪ್ರಾರ್ಥನೆ ಗೀತೆ ಹಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net