ಧಾರ್ಮಿಕ ಜಾಗೃತಿಗೆ ಘನಲಿಂಗ ಶ್ರೀ ಕೊಡುಗೆ ದೊಡ್ಡದು

ಶ್ರಾವಣ ಮಾಸ ನಿಮಿತ್ತ  ಬಸವಕಲ್ಯಾಣ ಸಂಸ್ಥಾನ ಗವಿಮಠದಲ್ಲಿ ಆಯೋಜಿಸಿದ್ದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂದೇಶ ಕುರಿತ ಉಪನ್ಯಾಸ ಮಾಲೆ ಕಾರ್ಯಕ್ರಮದದಲ್ಲಿ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು. ಪ್ರಾಚಾರ್ಯ ಸೂರ್ಯಕಾಂತ ಶೀಲವಂತ, ಲೋಕೇಶ ಸ್ವಾಮಿ, ರಾಮಶೆಟ್ಟಿ ಬಿರಾದಾರ, ಸಂಜುಕುಮಾರ ಜಾಧವ ಇದ್ದರು.
ಶ್ರಾವಣ ಮಾಸ ನಿಮಿತ್ತ ಬಸವಕಲ್ಯಾಣ ಸಂಸ್ಥಾನ ಗವಿಮಠದಲ್ಲಿ ಆಯೋಜಿಸಿದ್ದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂದೇಶ ಕುರಿತ ಉಪನ್ಯಾಸ ಮಾಲೆ ಕಾರ್ಯಕ್ರಮದದಲ್ಲಿ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು. ಪ್ರಾಚಾರ್ಯ ಸೂರ್ಯಕಾಂತ ಶೀಲವಂತ, ಲೋಕೇಶ ಸ್ವಾಮಿ, ರಾಮಶೆಟ್ಟಿ ಬಿರಾದಾರ, ಸಂಜುಕುಮಾರ ಜಾಧವ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಸೂರ್ಯಕಾಂತ ಶೀಲವಂತ ಅಭಿಮತ
  • ಗವಿಮಠದಲ್ಲಿ ಉಪನ್ಯಾಸ ಮಾಲೆ
ಬಸವಕಲ್ಯಾಣ: ಸಮಾಜದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಜಾಗೃತಿಗೆ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರು ನೀಡಿದ ಕೊಡುಗೆ ದೊಡ್ಡದು ಎಂದು ಪುಣ್ಯಕೋಟಿ ಪಿಯು ಕಾಲೇಜು ಪ್ರಾಚಾರ್ಯ ಸೂರ್ಯಕಾಂತ ಶೀಲವಂತ ಹೇಳಿದರು.
ಶ್ರಾವಣ ಮಾಸ ನಿಮಿತ್ತ ನಗರದ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್​ ವತಿಯಿಂದ ಸೋಮವಾರ ಸಂಜೆ ಆಯೋಜಿಸಿದ್ದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂದೇಶ ಕುರಿತ ಉಪನ್ಯಾಸ ಮಾಲೆ ಕಾರ್ಯಕ್ರಮದ ವಿಶೇಷ ಉಪನ್ಯಾಸ ನೀಡಿದ ಅವರು, ಹನ್ನೆರಡನೇ ಶತಮಾನದಲ್ಲಿ ಶಿವಶರಣರಲ್ಲಿ ಒಬ್ಬರಾದ ಹಾವಿನಹಾಳ ಕಲ್ಲಯ್ಯನಿಗೆ ಗವಿಮಠದ ಪಟ್ಟದೇವರಾದ ಗುರುರುದ್ರಮುನಿ ಶಿವಾಚಾರ್ಯರು ಶಿವ ದೀಕ್ಷೆಯನ್ನು ನೀಡಿದ್ದರು ಎಂದರು.
ಜಗಜ್ಯೋತಿ ಬಸವೇಶ್ವರರು ನೇತೃತ್ವದಲ್ಲಿ ಅಂದು ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆ ಆಗಿತ್ತು. ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಶಿವಶರಣರು ಕಲ್ಯಾಣ ಪಟ್ಟಣವನ್ನು ಬಿಟ್ಟು ಉಳವಿ, ಶ್ರೀಶೈಲ ಮೊದಲಾದ ಕಡೆಗೆ ತೆರಳಿದರು. ಆದರೆ ಕೆಲ ಶಿವಶರಣರು ಕಲ್ಯಾಣದಲ್ಲಿಯೇ ಉಳಿಯುವ ಸನ್ನಿವೇಶ ಬಂದಾಗ ಅವರಿಗೆ ಗುರು ರುದ್ರಮುನಿ ಶಿವಾಚಾರ್ಯರು ಸಹಾಯಕರಾಗಿ ನಿಂತು ರಕ್ಷಣೆ ಮಾಡಿದ್ದರು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ಲೋಕೇಶ ಸ್ವಾಮಿ, ನಿವೃತ್ತ ಶಿಕ್ಷಕ ರಾಮಶೆಟ್ಟಿ ಬಿರಾದಾರ, ಸಂಜುಕುಮಾರ ಜಾಧವ, ಎ.ಜಿ ಪಾಟೀಲ, ರುದ್ರೇಶ್ವರ ಗೋರ್ಟಾ, ರಾಕೇಶ ಪುರವಂತ, ಗೋವಿಂದರಡ್ಡಿ ಕೋತಂಪಲ್ಲಿ, ಬಾಬುರಾವ ಚಳಕಾಪುರೆ, ಜಯರಾಜ ಕಮ್ಮಾ, ಗೋವಿಂದ ಅಯ್ಯಣ್ಣೋರ, ಭೀಮರಾಯಿ ಅಯ್ಯಣ್ಣೋರ್​, ಪ್ರಭು ಗಾದಾ, ನರಸಮ್ಮ ತಮ್ಮಣಿ, ಸರಸ್ವತಿ ಬೆಂಬಳೆ, ಸವಿತಾ ಸ್ವಾಮಿ, ವಿಮಲಾಬಾಯಿ ಬಿರಾದಾರ ಇದ್ದರು. ನಿವೃತ್ತ ಕೃಷಿ ಅಧಿಕಾರಿ ಬಸವಂತಪ್ಪಾ ಲವಾರೆ ಸ್ವಾಗತಿಸಿದರು. ಅಭಿಷೇಕ ರಾಮಣ್ಣನವರ ನಿರೂಪಣೆ ಮಾಡಿದರು. ರೇಣುಕಾ ರಾಮಣ್ಣನವರ ಪ್ರಾರ್ಥನೆಗೀತೆ ಹಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net