ಕೃಷಿ ಇಲಾಖೆಯ ಕೇಂದ್ರ ಪುರಸತ ಆತ್ಮ ಯೋಜನೆಯಡಿ "ಖೇತ್ ಬಚಾವೋ ಆಂದೋಲನ' ಪ್ರಯುಕ್ತ ಸಮತೋಲನ ರಸಗೊಬ್ಬರಗಳ ಬಳಕೆ ಕುರಿತು ತಾಲೂಕಿನ ಸಾಸಲು ರೈತ ಸಂಪರ್ಕ ಕೇಂದ್ರದ ಬಳಿ ಬುಧವಾರ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಸಾರಜನಕ, ರಂಜಕ, ಪೊಟ್ಯಾಷ್ ಹಾಗೂ ಲಘು ಪೋಷಕಾಂಶವನ್ನು ಸೂಕ್ತ ಪ್ರಮಾಣದಲ್ಲಿ ಬೆಳೆಗಳಿಗೆ ಒದಗಿಸುವುದೇ ಸಮತೋಲನ ರಸಗೊಬ್ಬರದ ಬಳಕೆ. ರೈತರು ಯಾವುದೇ ರಸಗೊಬ್ಬರ ಬಳಸುವ ಮೊದಲು ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಮಣ್ಣಿನ ಪರೀಕ್ಷಾ ವರದಿಯ ಆಧಾರದ ಮೇಲೆ ಗೊಬ್ಬರಗಳ ಪ್ರಮಾಣ ನಿಗದಿಪಡಿಸಿದರೆ ಅನಗತ್ಯ ವೆಚ್ಚ ಕಡಿಮೆ ಆಗುವ ಜತೆಗೆ ಮಣ್ಣಿನ ಫಲವತ್ತತೆ ಉಳಿಯುತ್ತದೆ. ರಾಸಾಯನಿಕ ಗೊಬ್ಬರಗಳ ಅತಿಯಾಗಿ ಬಳಸುವುದರಿಂದ ಮಣ್ಣಿನ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಆದ್ದರಿಂದ ರೈತರು ಜೈವಿಕ ಗೊಬ್ಬರಗಳ ಬಳಕೆಗೆ ಆದ್ಯತೆ ನೀಡಬೇಕು. ಜೈವಿಕ ಗೊಬ್ಬರ ಹಾಗೂ ಸಾವಯವ ಪದಾರ್ಥಗಳ ಬಳಕೆಯಿಂದ ಸತ್ವ ಹೆಚ್ಚಾಗಿ, ದೀರ್ಘಾವಧಿಯಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.