ಸಂಕುಚಿತ ಮನಸ್ಥಿತಿ ಬಿಟ್ಟು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ / HOSAKOTE

ಹೊಸಕೋಟೆಯ ಜಿಕೆಬಿಎಂಎಸ್​ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಡಾ. ಶೈಲಜಾ ರೆಡ್ಡಿ, ಡಾ.ವರಧರಾಜ್​, ಬೆಂ.ಗ್ರಾಮಾಂತರ ಹಾಗೂ ಕೋಲಾರ ರೋಟರಿ ಸಂಸ್ಥೆಯ ಸಹಾಯಲ ಪಾಲಕ ಡಿ.ಎಸ್​. ರಾಜ್​ಕುಮಾರ್​ ಇತರರು ಇದ್ದರು.
ಹೊಸಕೋಟೆಯ ಜಿಕೆಬಿಎಂಎಸ್​ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಡಾ. ಶೈಲಜಾ ರೆಡ್ಡಿ, ಡಾ.ವರಧರಾಜ್​, ಬೆಂ.ಗ್ರಾಮಾಂತರ ಹಾಗೂ ಕೋಲಾರ ರೋಟರಿ ಸಂಸ್ಥೆಯ ಸಹಾಯಲ ಪಾಲಕ ಡಿ.ಎಸ್​. ರಾಜ್​ಕುಮಾರ್​ ಇತರರು ಇದ್ದರು.
Published on
ಹೊಸಕೋಟೆ : ಗ್ರಾಮೀಣ ಜನರು ಸಂಕುಚಿತ ಮನಸ್ಥಿತಿ ಬಿಟ್ಟು ಆರೋಗ್ಯ ಪರೀಕ್ಷೆಗಳ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ರೋಟರಿ ಸೆಂಟ್ರಲ್​ನ ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ವಿಭಾಗದ ಸಹಾಯಕ ಪಾಲಕ ಡಿ.ಎಸ್​. ರಾಜ್​ ಕುಮಾರ್​ ತಿಳಿಸಿದರು.
ನಗರದ ಜಿಕೆಬಿಎಂಎಸ್​ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೊಸಕೋಟೆ ರೋಟರಿ ಸೆಂಟ್ರಲ್​, ರೋಟರಿ ಕಬ್ಬನ್​ ಪಾರ್ಕ್​ ಘಟಕ ಹಾಗೂ ಬೆಂಗಳೂರು ಗ್ಯಾಸ್ಟ್ರೊ ಸೆಂಟರ್​ ಆಸ್ಪತ್ರೆಯಿಂದ ಜೀರ್ಣಾಂಗ ತಪಾಸಣಾ ಶಿಬಿರ, ಉಚಿತ ಔಷಧ ವಿತರಣೆ ಹಾಗೂ ಎಂಡೋಸ್ಕೋಪಿ ಪರೀಕ್ಷಾ ಶಿಬಿರದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಮೊದಲು ಎಂಡೊಸ್ಕೋಪಿ ಆನ್​ ವೀಲ್​ ವಾಹನವನ್ನು ರೋಟರಿ ಸಂಸ್ಥೆಯಿಂದ ನೀಡಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಮೂಲೆ ಮೂಲೆಗೆ ತಲುಪಿ ಗ್ಯಾಸ್ಟ್ರೊ ಸಮಸ್ಯೆ ಅಥವಾ ಜೀರ್ಣಾಂಗ ಸಮಸ್ಯೆ ಸಂಬಂಧ ಸ್ಥಳದಲ್ಲಿಯೇ ತಪಾಸಣೆ ಮಾಡಬಹುದು ಎಂದರು.
250ಕ್ಕೂ ಹೆಚ್ಚು ಜನ ಶಿಬಿರದಲ್ಲಿ ಭಾಗಿಯಾಗಿ ತಪಾಸಣೆ ಮಾಡಿಸಿಕೊಂಡರು. ಶಿಬಿರದಲ್ಲಿ ಹುಬ್ಬಳ್ಳಿ, ಹಾಸನ ಸೇರಿ ಹಲವು ಜಿಲ್ಲೆಗಳಿಂದ ಗ್ಯಾಸ್ಟ್ರಿಕ್​ ಸಮಸ್ಯೆ ಬಾಧಿತರು ಶಿಬಿರದ ಪ್ರಯೋಜನ ಪಡೆದಿರುವುದು ಸಂತಸ ತಂದಿದೆ ಎಂದರು.
ಗ್ಯಾಸ್ಟ್ರೊ ಆಸ್ಪತ್ರೆಯ ಮುಖ್ಯಸ್ಥ ಡಾ. ಯೋಗಾನಂದ ರೆಡ್ಡಿ ಮಾತನಾಡಿ, ಗ್ಯಾಸ್ಟ್ರಿಕ್​ ಸಮಸ್ಯೆ ಮಾರಣಾಂತಿಕ ಕಾಯಿಲೆಯಲ್ಲ. ದೇಹದಲ್ಲಿ ಆರೋಗ್ಯ ಸಮಸ್ಯೆಯುಂಟಾಗುವುದೇ ಜೀರ್ಣಾಂಗ ವ್ಯವಸ್ಥೆಯಿಂದ ಮೊದಲು ಶುರುವಾಗುವುದೇ ಗ್ಯಾಸ್ಟ್ರಿಕ್​ ಸಮಸ್ಯೆ. ಆದುದರಿಂದ ಜೀರ್ಣಾಂಗ ಸಮಸ್ಯೆ ಬಗ್ಗೆ ರ್ನಿಲಕ್ಷ$್ಯ ತೋರದೆ ಮೊದಲ ಹಂತದಲ್ಲೇ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆದಲ್ಲಿ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎಂದರು. ರೋಟರಿ ಸಂಸ್ಥೆಯ ವೈ.ಸಿ.ರಾಯ್​, ಸುಬ್ರಮಣಿ, ಗೌರಿ ಶಂಕರ್​, ಉಪಾ ವೆಂಕಟೇಶ್​, ಶಾಮಲಾ ವಿದ್ಯಾರಣ್ಯ, ಕಾರ್ಯದರ್ಶಿ ಬಚ್ಚಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net