ಕಾನೂನಿನ ಉಚಿತ ಸೇವೆ ಪಡೆಯಿರಿ / HOSAKOTE

ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು&ನೆರವು ಕಾರ್ಯಕ್ರಮವನ್ನು ನ್ಯಾಯಾಧೀಶ ವಿಜಯ್​ ದೇವರಾಜ್​ ಅರಸ್​ ಉದ್ಘಾಟಿಸಿದರು. ಜಿಲ್ಲಾ ಹಿರಿಯ ಸಿವಿಲ್​ ನ್ಯಾಯಾಧೀಶ ಶ್ರೀಶೈಲ ಬಾಗಡಿ, ೇತ್ರ ಶಿಕ್ಷಣಾಧಿಕಾರಿ ಪದ್ಮನಾಭ, ಅರೆಕಾಲಿಕ ಕಾನೂನು ಸ್ವಯಂ ಸೇವಕ ರವಿ ಹಾಗೂ ಕೃಷ್ಣ ಪ್ರಸಾದ್​, ವಕೀಲರ ಸಂದ ಅಧ್ಯಕ್ಷ ವೈ.ವಿ.ರಾಧಾ ಕೃಷ್ಣ ಇದ್ದರು.
ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು&ನೆರವು ಕಾರ್ಯಕ್ರಮವನ್ನು ನ್ಯಾಯಾಧೀಶ ವಿಜಯ್​ ದೇವರಾಜ್​ ಅರಸ್​ ಉದ್ಘಾಟಿಸಿದರು. ಜಿಲ್ಲಾ ಹಿರಿಯ ಸಿವಿಲ್​ ನ್ಯಾಯಾಧೀಶ ಶ್ರೀಶೈಲ ಬಾಗಡಿ, ೇತ್ರ ಶಿಕ್ಷಣಾಧಿಕಾರಿ ಪದ್ಮನಾಭ, ಅರೆಕಾಲಿಕ ಕಾನೂನು ಸ್ವಯಂ ಸೇವಕ ರವಿ ಹಾಗೂ ಕೃಷ್ಣ ಪ್ರಸಾದ್​, ವಕೀಲರ ಸಂದ ಅಧ್ಯಕ್ಷ ವೈ.ವಿ.ರಾಧಾ ಕೃಷ್ಣ ಇದ್ದರು.
Published on
ಹೊಸಕೋಟೆ : ದೇಶದ ಪ್ರತಿ ಪ್ರಜೆಯೂ ಕಾನೂನಿನ ಅರಿವು, ಸೌಲಭ್ಯ ಪಡೆಯುವ ಹಕ್ಕನ್ನು ಸಂವಿಧಾನದಡಿ ಹೊಂದಿದ್ದಾನೆ. ಹಾಗೆಯೇ ಅವುಗಳ ಪಾಲನೆಯೂ ಅವಶ್ಯ ಎಂದು ಬೆಂಗಳೂರು ಜಿಲ್ಲಾ 18ನೇ ಹೆಚ್ಚುವರಿ ಸಿವಿಲ್​ ಹಾಗೂ ಸೆಷನ್​ ನ್ಯಾಯಾಧೀಶ ವಿಜಯ್​ ದೇವರಾಜ್​ ಅರಸ್​ ತಿಳಿಸಿದರು.
ನಗರದ ಸರ್ಕಾರಿ ಬಾಲಕರ ಪ್ರೌಢಶಾಲಾ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾಯಂ ಜನತಾ ನ್ಯಾಯಾಲಯದ ಉಪಯೋಗ, ಪೋಕ್ಸೋ ಹಾಗೂ ಮಾದಕ ದ್ರವ್ಯಸೇವನೆಯ ದುಷ್ಪರಿಣಾಮಗಳ ಬಗ್ಗೆ ಕಾನೂನು ಅರಿವು&ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿ ಹಳ್ಳಿಯಲ್ಲೂ ಕಾನೂನು ಅರಿವು&ನೆರವು ಮಾಹಿತಿ ನೀಡಲು ಕಾನೂನು ಸೇವಾ ಪ್ರಾಧಿಕಾರದಿಂದ ವಿವಿಧ ಕಾರ್ಯಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಎಲ್ಲ ಪ್ರಕರಣಕ್ಕೂ ನ್ಯಾಯಾಲಯದ ಬಾಗಿಲು ಬಡಿಯುವುದನ್ನು ತಪ್ಪಿಸಲು ಕಾಯಂ ಜನತಾ ನ್ಯಾಯಾಲಯಗಳನ್ನು ತೆರೆಯಲಾಗಿದೆ. ಇದರಲ್ಲಿ ಹಿಂದುಳಿದವರಿಗೆ, ಹೆಣ್ಣು ಮಕ್ಕಳು, ವಾರ್ಷಿಕ 3 ಲಕ್ಷ ರೂ.ಕ್ಕಿಂತ ಕಡಿಮೆ ಆದಾಯ ಇರುವವರಿಗೆ ಹಾಗೂ ಜೈಲು ವಾಸಿಗಳಿಗೆ ಈ ಸೌಲಭ್ಯಗಳನ್ನು ನೀಡಲಾಗಿದ್ದು, ನ್ಯಾಯಾಲಯದಲ್ಲಿ ಯಾವುದೇ ಶುಲ್ಕವಿರುವುದಿಲ್ಲ. ವಕೀಲರ ಅವಶ್ಯಕತೆಯೂ ಇರುವುದಿಲ್ಲ. ಆದರೆ ಪ್ರಕರಣ ಇತ್ಯರ್ಥವಾದ ನಂತರ ಯಾವುದೇ ಮೇಲ್ಮನವಿಗೆ ಅವಕಾಶಗಳಿರುವುದಿಲ್ಲ. ಆದುದರಿಂದ ಸಾಮಾನ್ಯ ಜಮೀನು ಪ್ರಕರಣಗಳು ರೈತರು ಹಾಗೂ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಕಾಯಂ ಜನತಾ ನ್ಯಾಯಾಲಯದಲ್ಲಿ ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದರು.
ಸಂವಿಧಾನದಲ್ಲಿ ಮಕ್ಕಳಿಗೆ ವಿಶೇಷ ಹಕ್ಕುಗಳನ್ನು ನೀಡಿದ್ದು, ಅದರಲ್ಲಿ ಶಿಕ್ಷಣ ಮೊದಲ ಸ್ಥಾನದಲ್ಲಿದ್ದು, ಮಕ್ಕಳ ಆರೋಗ್ಯ, ಬಿಸಿಯೂಟ, ಸಮಾನತೆ ಸಾರಲು ಶಾಲೆಗಳಲ್ಲಿ ಸಮವಸ, ಪಠ್ಯ ಪರಿಕರಗಳನ್ನು ಸರ್ಕಾರಗಳು ಕಾಲ ಕಾಲಕ್ಕೆ ನೀಡುತ್ತಾ ಬಂದಿದೆ, ಸೌಲಭ್ಯಗಳೊಂದಿಗೆ ಮಕ್ಕಳಿಗೆ ಶಾಲಾಹಂತದಲ್ಲಿ ಕಾನೂನು ಅರಿವು ಮೂಡಿಸಬೇಕಿದೆ ಎಂದರು.
ಮಾದಕವಸ್ತುಗಳಿಂದ ದೂರವಿರಿ : ಕಾನೂನು ಸೇವಾ ಪ್ರಾಧಿಕಾರದ ಅಧಿಕಾರೇತರ ಸದಸ್ಯ ವೆಂಕಟೇಶ್​ ಮಾತನಾಡಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಮಕ್ಕಳು ಎಂದು ಪರಿಗಣಿಸುವ ಸಂಬಂಧ ವಿಶ್ವಸಂಸ್ಥೆ 180ಕ್ಕೂ ಹೆಚ್ಚು ದೇಶಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಮಕ್ಕಳಿಗೆ ಬದುಕುವ, ರಕ್ಷಣೆ, ಅಭಿವೃದ್ಧಿ ಹೊಂದುವ ಹಾಗೂ ಭಾಗವಹಿಸುವ ಹಕ್ಕುಗಳನ್ನು ನೀಡಲಾಗಿದೆ. ಶಾಲಾ&ಕಾಲೇಜು ಹಂತದಲ್ಲಿ ಮಕ್ಕಳು ಹೆಚ್ಚು ಮಾದಕ ವ್ಯಸನಗಳತ್ತ ಆಕರ್ಷಿತರಾಗಿ ಜೀವನ ಹಾಳು ಮಾಡಿಕೊಳ್ಳುತಿದ್ದಾರೆ. ಕೆಲ ಮಕ್ಕಳು ಬಾಲಕಾರ್ಮಿಕರಾಗಿ ಹೋಟಲ್​, ಅಂಗಡಿ, ಇಟ್ಟಿಗೆ ಕಾರ್ಖಾನೆಗಳಲ್ಲಿ ಕೆಲಸ ಮಾಡುತಿದ್ದಾರೆ. ಇನ್ನು ಕೆಲ ಮಕ್ಕಳು ಬಾಲ್ಯವಿವಾಹಕ್ಕೆ ತುತ್ತಾಗುತ್ತಿದ್ದಾರೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಶಾಲಾ ಶಿಕ್ಷಕರಿಗೆ ಅಥವಾ ಪೊಲೀಸರಿಗೆ ತಿಳಿಸಬೇಕು. ಇಲ್ಲವೇ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಿದರೆ ಕಷ್ಟದಲ್ಲಿರುವ ಮಕ್ಕಳನ್ನು ರಸಲಾಗುವುದು ಎಂದು ತಿಳಿಸಿದರಲ್ಲದೇ ಮಕ್ಕಳು ಮೊಬೈಲ್​ ಬಳಕೆ ಹಾಗೂ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ವಿಕಿಮಾತು ಹೇಳಿದರು.
ಉತ್ತಮ ಪ್ರಜೆಗಳಾಗಿ : ಮಕ್ಕಳು ಸಣ್ಣ ಸಸಿಗಳಿದ್ದಹಾಗೆ, ಅವರಿಗೆ ನೀರು, ಪೌಷ್ಟಿಕ ಗೊಬ್ಬರಗಳಾಗಿ ಪಾಲಕರು, ಶಿಕ್ಷಕರು ಹಾಗೂ ಸಮಾಜ ಆಸರೆಯಾಗಿರಬೇಕು. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರ ಸದ್ಬಳಕೆ ಪಡೆಯಬೇಕು. ಉತ್ತಮ ಸಮಾಜ ರೂಪಿಸುವ ಕನಸನ್ನು ಮಹನೀಯರ ಆದರ್ಶಗಳನ್ನು ಇಂದಿನಿಂದಲೇ ಪಾಲಿಸಿ, ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಹೊಸಕೋಟೆ ತಾಲೂಕು ವಕೀಲರ ಸಂದ ಅಧ್ಯಕ್ಷ ವೈ.ವಿ.ರಾಧಾಕೃಷ್ಣ ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net