ಸ್ಥಳಿಯ ಕಾಲೇಜುಗಳಲ್ಲೇ ಪ್ರವೇಶ ಪಡೆಯಿರಿ

Get admission in local colleges
Get admission in local colleges
Published on
ಚಿಕ್ಕನಾಯಕನಹಳ್ಳಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಲಿತಾಂಶ ಉತ್ತಮವಾಗಿದ್ದು, ನಮ್ಮ ತಾಲೂಕಿನಲ್ಲೇ ಇರುವಂತಹ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ಕಾಲೇಜುಗಳಿಗೆ ಸೇರ್ಪಡೆಯಾಗುವ ಮೂಲಕ ನಿಮ್ಮ ಪ್ರತಿಭೆಯನ್ನು ಇಲ್ಲೇ ತೋರಿಸಿ ನಮ್ಮ ತಾಲೂಕಿಗೆ ಕೀರ್ತಿ ತರಬೇಕು ಎಂದು ಶಾಸಕ ಸಿ.ಬಿ.ಸುರೇಶ್​ಬಾಬು ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಲ್ಲ ಶಾಲಾ&ಕಾಲೇಜುಗಳ ಪ್ರಾಂಶುಪಾಲರು, ಮುಖ್ಯಶಿಕ್ಷಕರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಶೇ.94.25ರಷ್ಟು ಲಿತಾಂಶ ಬಂದಿದ್ದು, 34 ಜನ ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕಗಳಿಸಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳನ್ನು ನಮ್ಮ ತಾಲೂಕಿನಲ್ಲೇ ಇರುವಂತಹ 7 ಕಾಲೇಜುಗಳಲ್ಲಿ ಯಾವುದಾದರು ಒಂದು ಕಾಲೇಜಿಗೆ ಸೇರುವಂತೆ ತಿಳಿಸಲಾಗಿದೆ ಎಂದರು.
ಬಿಇಒ ಕಾಂತರಾಜು ಮಾತನಾಡಿ, ನಮ್ಮ ತಾಲೂಕಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುವಂತಹ ಶಿಕ್ಷಕರಿದ್ದು, ವಿದ್ಯಾರ್ಥಿಗಳು ಇರುವಂತಹ ಸೌಲಭ್ಯ ಬಳಸಿಕೊಂಡು ಸಾಧನೆ ಮಾಡಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net