ನೆಲಮಂಗಲದ ಲೋಹಿತನಗರದಲ್ಲಿ ಆಯೋಜಿಸಿದ್ದ ಮಕ್ಕಳ ಶಿಬಿರದಲ್ಲಿ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್, ಲೋಹಿತ ನಗರ ನಾಯಕಿ ಪ್ರಕೃತಿ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಸದಸ್ಯೆ ಸುಜಾತಾ, ಕುಮಾರ್, ಭೂಮಿಕಾ ಇತರರು ಇದ್ದರು.
Published on:
Copied
Follow Us
ನೆಲಮಂಗಲ : ಮಕ್ಕಳು ಮಹನೀಯರಿಂದ ಸ್ಫೂರ್ತಿಗೊಂಡು ನೂತನ ಸಮಾಜದ ನಿರ್ಮಾಣಕ್ಕೆ ಮುಂದಾಬೇಕು ಎಂದು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಸದಸ್ಯ ಚೆನ್ನರಾಯಪ್ಪ ಹೇಳಿದರು.
ನಗರದ ಲೋಹಿತನಗರ ಸರ್ಕಾರಿ ಶಾಲೆಯಲ್ಲಿ ಜ್ಯೋತಿಬಾುಲೆ ದ್ವಿಶತಮಾನೋತ್ಸವ ಪ್ರಯುಕ್ತ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್, ನಮ್ಮೂರ ಸರ್ಕಾರಿ ಶಾಲೆ ಉಳಿಸಿ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಳ್ಳಿಹಳ್ಳಿಗಳಲ್ಲಿ ಮಕ್ಕಳ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆಗಳಲ್ಲಿದ ಸಮಾಜದಲ್ಲಿ ಜನ್ಮತಾಳಿದ ಜ್ಯೋತಿಬಾುಲೆ, ಸಮಾಜದ ಒಳಿತು ಮತ್ತು ಶಿಕ್ಷಣಕ್ಕಾಗಿ ಬದುಕನ್ನೇ ಮುಡುಪಾಗಿಟ್ಟ ಅವರು ಯುವಪೀಳಿಗೆಗೆ ದಾರಿದೀಪವಾಗಬೇಕಿದೆ ಎಂದರು.
ಎಐಡಿಎಸ್ಒ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ನೇತಾಜಿ ಸುಭಾಷ್ ಚಂದ್ರಬೋಸ್ ಅವರು ಸ್ವತಂತ್ರ ಸೇನಾನಿಯಾಗಿದ್ದವರು. ಅವರ ನಿಸ್ವಾರ್ಥ ಸೇವೆ ಹೋರಾಟದ ಕಿಚ್ಚನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು. ಸಾಮಾಜಿಕ ಬದ್ಧತೆ ಮತ್ತು ಉನ್ನತ ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕಿ ಕಲಾವತಿ ಮಾತನಾಡಿ, ುಲೆ ದಂಪತಿಗಳು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಮಾಡಿದ ಹೋರಾಟದ ಫಲವಾಗಿ ಅನುಭವಿಸಿದ ಸಂಕಷ್ಠಗಳು ಕುರಿತಾದ ಕಥೆಗಳನ್ನು ಮಕ್ಕಳಿಗೆ ತಿಳಿಸಿದರು. ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಕಲೆ, ಸಾಂಸತಿಕ ಚಟುವಟಿಕೆ ನಡೆಸಿ ಮನರಂಜನೆ ನೀಡಲಾಯಿತು.