ಹೆಂಡತಿಯ ಮೇಲಿನ ಅನುಮಾನಕ್ಕೆ ಜಿಲೆಟಿನ್ ಕಡ್ಡಿ ಸ್ಫೋಟ: ತಂದೆ–ಮಗಳು ಸಾವು, ನಾಲ್ವರಿಗೆ ಗಾಯ

,
,
Published on
ಕಲಬುರಗಿ: ಹೆಂಡತಿಯ ಮೇಲಿನ ಅನುಮಾನಕ್ಕೆ ಪತಿಯೊಬ್ಬ ಜಿಲೆಟಿನ್ ಕಡ್ಡಿ ಸ್ಫೋಟಿಸಿದ ಪರಿಣಾಮ ತಂದೆ ಹಾಗೂ 15 ವರ್ಷದ ಮಗಳು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಟಕಿ ತಾಂಡಾದಲ್ಲಿ ನಡೆದಿದೆ.
ಮೃತರನ್ನು ಶಿವಲಾಲ್ ಬಲಿರಾಮ್ ರಾಠೋಡ್ (50) ಹಾಗೂ ಅವರ ಪುತ್ರಿ ಮೀರಾ (15) ಎಂದು ಗುರುತಿಸಲಾಗಿದೆ.
ಶಿವಲಾಲ್ ಅವರು ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಅಲ್ಲಿಂದ ಜಿಲೆಟಿನ್ ಕಡ್ಡಿಯನ್ನು ಮನೆಗೆ ತಂದಿದ್ದರು. ಪತ್ನಿ ಸವಿತಾ ಅವರ ಮೇಲೆ ಅನುಮಾನ ಹೊಂದಿದ್ದ ಶಿವಲಾಲ್, ಮಂಗಳವಾರ ಬೆಳಗ್ಗೆ ಮನೆಯಲ್ಲಿದ್ದ ಕುಟುಂಬ ಸದಸ್ಯರ ಸಮ್ಮುಖದಲ್ಲೇ ಜಿಲೆಟಿನ್ ಕಡ್ಡಿಯನ್ನು ಸ್ಫೋಟಿಸಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಪತ್ನಿಯ ಮೇಲಿನ ಅನುಮಾನದಿಂದಾಗಿ ಮನೆಯಲ್ಲೇ ಜಿಲೆಟಿನ್ ಕಡ್ಡಿ ಸ್ಫೋಟಿಸಿರುವ ಘಟನೆ ಮಟಕಿ ತಾಂಡಾದಲ್ಲಿ ಆತಂಕಕ್ಕೆ ಕಾರಣವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net