_1787840847871.webp?w=480&auto=format%2Ccompress&fit=max)
_1787840847871.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ರಸ್ತೆಬದಿಗಳಲ್ಲಿರುವಮರಗಳ ಒಣಗಿದ ಕೊಂಬೆಗಳಿಂದಉಂಟಾಗಬಹುದಾದ ಅಪಾಯದ ಕುರಿತುವಿಜಯವಾಣಿ "ಒಣಕೊಂಬೆಗಳಿಂದ ಪಾದಚಾರಿಗಳ ಜೀವಕ್ಕೆಆಪತ್ತು" ಎಂಬಶೀರ್ಷಿಕೆಯಲ್ಲಿ ಪ್ರಕಟಿಸಿದ್ದವಿಶೇಷ ವರದಿಯಿಂದ ಎಚ್ಚೆತ್ತುಕೊಂಡಿರುವಜಿಬಿಎ ಅರಣ್ಯ ಘಟಕ ಅಪಾಯದಲ್ಲಿರುವಒಣಗಿದ ಕೊಂಬೆಗಳನ್ನು ತೆರವುಮಾಡಲು ಮುಂದಾಗಿದೆ.
ನಗರದಲ್ಲಿಕಳೆದ ಕೆಲ ದಿನಗಳಿಂದ ಮಳೆಸುರಿಯುತ್ತಿದ್ದು,ರಸ್ತೆಬದಿಯಮರಗಳಲ್ಲಿರುವ ಒಣಗಿದ ಕೊಂಬೆಗಳುಪಾದಚಾರಿಗಳ ಹಾಗೂ ರಸ್ತೆ ಮೇಲೆಸಂಚರಿಸುವ ವಾಹನಗಳ ಮೇಲೆ ಬೀಳುವಅಪಾಯವಿರುವ ಕುರಿತು ವಿಜಯವಾಣಿರಿಯಾಲಿಟಿ ಚೆಕ್ ನಡೆಸಿತ್ತು.ಈ ಕುರಿತ ವಿಶೇಷವರದಿ ಆ.24 (ಸೋಮವಾರ)ಪ್ರಕಟವಾಗಿತ್ತು.ವರದಿಯಿಂದಎಚ್ಚೆತ್ತುಕೊಂಡ ಜಿಬಿಎ ಅರಣ್ಯಘಟಕದ ಅಧಿಕಾರಿಗಳು ನಗರದಲ್ಲಿಅಪಾಯಕ್ಕೆ ಆಹ್ವಾನ ನೀಡುತ್ತಿರುವಮರಗಳ ಒಣಗಿದ ಕೊಂಬೆಗಳನ್ನುಪರಿಶೀಲನೆ ನಡೆಸಿ ಕತ್ತರಿಸುವಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಚಾಮರಾಜಪೇಟೆಯರಾಯನ್ ಸರ್ಕಲ್ ಬಳಿ ದೇವದಾರುಮರದ ಬೃಹತ್ ಕೊಂಬೆಗಳನ್ನು ಬುಧವಾರಸಿಬ್ಬಂದಿಗಳು ತೆರವುಗೊಳಿಸಿದ್ದಾರೆ.ಸಾವಿರಾರುವಿದ್ಯಾರ್ಥಿಗಳು ನಿತ್ಯ ಸಂಚರಿಸುವಈ ರಸ್ತೆಯಲ್ಲಿ ಒಣಗಿದ ಕೊಂಬೆಗಳನ್ನುಕತ್ತರಿಸಿರುವುದರಿಂದ ಪೋಷಕರು,ರಸ್ತೆ ಬದಿಯಅಂಗಡಿಯವರು ನಿಟ್ಟುಸಿರುಬಿಟ್ಟಿದ್ದಾರೆ.
ವಿಜಯವಾಣಿಯೊಂದಿಗೆಮಾತನಾಡಿದ ಸ್ಥಳೀಯರು,ಪತ್ರಿಕೆಯಲ್ಲಿವರದಿ ಬಂದಿದ್ದರಿಂದ ಅಧಿಕಾರಿಗಳುಕೂಡಲೇ ಕಾರ್ಯಪ್ರವೃತ್ತರಾಗಿದ್ದು,ಸಾರ್ವಜನಿಕರಸಮಸ್ಯೆ ನಿವಾರಣೆಯಾಗಿದೆ ಎಂದುಕೃತಜ್ಞತೆ ತಿಳಿಸಿದ್ದಾರೆ.