

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಮಕರ ಸಂಕ್ರಾಂತಿಯಂದುನಡೆಯುವ ಪ್ರಕೃತಿ ವಿಸ್ಮಯಕ್ಕೆಬೆಂಗಳೂರಿನ ಗವಿಗಂಗಾಧರೇಶ್ವರದೇವಾಲಯ ಮತ್ತೊಮ್ಮೆ ಸಾಕ್ಷಿಯಾಯಿತು.ಗುರುವಾರ ಸಂಜೆ5.10ರಸುಮಾರಿಗೆ ಸೂರ್ಯ ರಶ್ಮಿಯುತ್ರಿಶೂಲ ಮತ್ತು ದ್ವಾರದ ಮೂಲಕಕಿಟಕಿಯಿಂದ ಹಾದು,ನಂದಿದ್ವಾರದಮೂಲಕ ದ್ವಾರಪಾಲಕರ ಅನುಜ್ಞೆಪಡೆದು, ಗರ್ಭಗುಡಿಯನ್ನುಪ್ರವೇಶಿಸಿ ಪಾರ್ವತಿಯನ್ನುದರ್ಶಿಸಿ,ಸೋಮಸೂತ್ರದಮೂಲಕ ನಿಧಾನವಾಗಿ ಶಿವಲಿಂಗದಮೇಲೆ ಪಸರಿಸಿ ಮಹಾದೇವನಿಗೆನೈಸರ್ಗಿಕ ಅಭಿಷೇಕವಾಯಿತು.ಶಿವಲಿಂಗದ ಮೇಲೆ6 ಸೆಕೆಂಡ್‌ಗಳಕಾಲವಿದ್ದ ಸೂರ್ಯನು,ಭಗವಂತನಿಗೆತನ್ನ ಪೂಜೆಯನ್ನು ಸಲ್ಲಿಸಿಉತ್ತರಾಯಣದತ್ತ ಚಲಿಸಿದನು.
ಈಕೌತುಕದ ಕ್ಷಣವನ್ನು ಕಣ್ತುಂಬಿಕೊಳ್ಳಲುಸಾವಿರಾರು ಭಕ್ತರು ಕಿಕ್ಕಿರಿದುಸೇರಿದ್ದರು.ಗುಹಾಂತರ ದೇವಾಲಯದಒಳಗೆ ಜನರು ಹೆಚ್ಚಿನ ಪ್ರಮಾಣದಲ್ಲಿನಿಲ್ಲುವುದಕ್ಕೆ ಅವಕಾಶವಿಲ್ಲದಿರುವುದರಿಂದ,ಟಿವಿ ಪರದೆಗಳಮೂಲಕ ನೇರ ಪ್ರಸಾರಕ್ಕೆ ಅವಕಾಶಕಲ್ಪಿಸಲಾಗಿತ್ತು.ಹಬ್ಬದ ಹಿನ್ನೆಲೆಯಲ್ಲಿಬೆಳಗ್ಗೆಯಿಂದಲೇ ಭಕ್ತರು ದೇವಾಲಯಕ್ಕೆಬಂದು ದೇವರ ದರ್ಶನ ಪಡೆಯುತ್ತಿದ್ದರು.
ಕಳೆದೆರಡುದಿನದಿಂದ ವಾಯುಭಾರ ಕುಸಿತದಹಿನ್ನೆಲೆಯಲ್ಲಿ ಬೆಂಗಳೂರುಸೇರಿದಂತೆ ರಾಜ್ಯದಲ್ಲಿ ಮೋಡಕವಿದ ವಾತಾವರಣ ಉಂಟಾಗಿತ್ತು.ಈ ಹಿಂದೆ ಇದೇರೀತಿ ವಾತಾವರಣ ಉಂಟಾದಾಗ ಸೂರ್ಯರಶ್ಮಿಶಿವಲಿಂಗದ ಮೇಲೆ ಬಿದ್ದಿರಲಿಲ್ಲ.ಅದೇ ರೀತಿಯ ಆತಂಕಈ ವರ್ಷವೂ ಎದುರಾಗಿತ್ತು.ಆದರೆ ಗುರುವಾರಬೆಳಗ್ಗಿನಿಂದಲೇ ವಾತಾವರಣತಿಳಿಯಾದ್ದರಿಂದ ಸೂರ್ಯರಶ್ಮಿಸಂಪೂರ್ಣವಾಗಿ ಶಿವಲಿಂಗವನ್ನುಸ್ಮರ್ಶಿಸಿದ್ದು,ಭಕ್ತರು ಹರ್ಷೋದ್ಗಾರವ್ಯಕ್ತಪಡಿಸಿದ್ದಾರೆ.
ಸೂರ್ಯರಶ್ಮಿ ಅಭಿಷೇಕದ ಶುಭಲ
ಗವಿಗಂಗಾಧರೇಶ್ವರದೇವಾಲಯದಲ್ಲಿ ಮಕರ ಸಂಕ್ರಾಂತಿಯಂದುಸೂರ್ಯರಶ್ಮಿ ಯಾವ ಸಮಯಕ್ಕೆ,ಎಷ್ಟು ಹೊತ್ತುಶಿವಲಿಂಗದ ಮೇಲೆ ಬೀಳಲಿದೆ ಎಂಬುದನ್ನುಆಧರಿಸಿ ಲಾಲವನ್ನು ವಿಶ್ಲೇಷಿಸಲಾಗುತ್ತದೆ.
ಈ ವರ್ಷ5.10 ರಿಂದ5.20ರನಡುವೆ ಸೂರ್ಯರಶ್ಮಿ ದೇವಾಲಯದೊಳಗೆಪಸರಿಸಿದ್ದು,ಸುಮಾರು 6ಸೆಕೆಂಡ್ ಸೂರ್ಯಕಿರಣಗಳು ಶಿವಲಿಂಗದ ಮೇಲೆನಿಂತಿದ್ದು, ಈವೇಳೆ ನಡೆದ ಕ್ಷೀರಾಭಿಷೇಕದಲ್ಲಿಎಲ್ಲಿಯೂ ಶಿವಲಿಂಗದ ಕಪ್ಪು ಬಣ್ಣಗೋಚರಿಸದೆ ಪೂರ್ಣ ಬಿಳಿಯಾಗಿಕಂಗೊಳಿಸಿದ್ದು,ನಾಡಿಗೆಶುಭದಾಯಕವೆನ್ನಲಾಗಿದೆ.
ಸೂರ್ಯ ದೇವನ ಸೇವೆಯಿಂದ ಗವಿಗಂಗಾಧರ ಪ್ರಸನ್ನನಾಗಿದ್ದಾನೆ. ಸೂರ್ಯ ನಿರಂತರವಾಗಿ ಚಲಿಸುವವನು. ಆದರೂ 6 ಸೆಕೆಂಡ್ ಶಿವಲಿಂಗದ ಮೇಲೆ ತನ್ನ ಬೆಳಕನ್ನು ಚೆಲ್ಲಿ ಭಗವಂತನನ್ನು ಪ್ರಸನ್ನಗೊಳಿಸಿದ್ದು, ಇದು ದೇಶಕ್ಕೆ ಶುಭವನ್ನು ತರಲಿದೆ. ಈ ವೇಳೆ ಭಗವಂತನ ಬಿಂಬ ಪೂರ್ಣ ಕ್ಷೀರಮಯವಾಗಿದ್ದು, ಒಂದು ಸಣ್ಣ ಕಪ್ಪು ಚುಕ್ಕೆಯೂ ಕಾಣದ್ದರಿಂದ ಯಾವುದೇ ಆತಂಕವಿಲ್ಲ.