ಬಿಎಲ್ಡಿಇ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲ ಕ್ಯಾನ್ಸರ್‌ಗಳಂತೆ ಜಠರದ ಕ್ಯಾನ್ಸರ್ ಸಹ ತಂಬಾಕು, ಸಿಗರೇಟು, ಸಾರಾಯಿ ಸೇವನೆ ಅಂತಹ ದುಶ್ಟಟಗಳು, ಹೆಚ್ಚು ಹೊತ್ತಿಸಿದ ಎಣ್ಣೆ, ಮಸಾಲೆ ಆಹಾರ ಸೇವನೆ ಹಾಗೂ ಅನುವಂಶಿಕವಾಗಿಯೂ ಬರಬಹುದು. ದೀರ್ಘಕಾಲದ ಗ್ಯಾಸ್ಟ್ರಿಕ್ ಸಮಸ್ಯೆಯೆಂದು ಸುಮ್ಮನಿರದೆ, ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.