ಚನ್ನಕೇಶವ ಪುರ ಮತ್ತು ಹರಿಹರಪುರ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಕಳೆದ ಎರಡು ದಿನಗಳಿಂದ ಗ್ಯಾಸ್ ಸಿಲಿಂಡರ್ ಖಾಲಿಯಾಗಿದೆ. ಹೊಸ ಸಿಲಿಂಡರ್ ಸರಬರಾಜಾಗದ ಕಾರಣ, ಬಿಸಿಯೂಟದ ಸಿಬ್ಬಂದಿ ಅನಿವಾರ್ಯವಾಗಿ ಶಾಲೆಯ ಆವರಣದಲ್ಲಿ ಸೌದೆ ಒಲೆ ಹಚ್ಚಿ ಅಡುಗೆ ಮಾಡುತ್ತಿದ್ದಾರೆ. ಚನ್ನಕೇಶವ ಪುರ ಶಾಲೆಯಲ್ಲಿ 81 ಜನ ಮತ್ತು ಹರಿಹರಪುರ ಶಾಲೆಯಲ್ಲಿ 57 ವಿದ್ಯಾರ್ಥಿಗಳಿದ್ದು, ಅವರೆಲ್ಲರಿಗೂ ಸೌದೆ ಒಲೆಯಲ್ಲಿ ಅಡುಗೆ ಸಿದ್ಧಪಡಿಸುವುದು ಸಿಬ್ಬಂದಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.