ಖಾಸಗಿ ಕಂಪನಿಯೊಂದರ ಡೆಲಿವರಿ ಬಾಯ್ ಆಗಿದ್ದ ಮೋಹನ್ ಕುಮಾರ್ ಎಂಬುವರು ನೀಡಿದ ದೂರು ಆಧರಿಸಿ ಹುಸ್ಕೂರು ಬಳಿಯ ಗುಟ್ಟಹಳ್ಳಿ ನಿವಾಸಿ ಅಜಯ್ ಕುಮಾರ್, ಅಕ್ಷಯ್ ಕುಮಾರ್, ಲೋಹಿತ್, ಆಕಾಶ್ ಗುಪ್ತ ಹಾಗೂ ಮಾರುತಿ ಬಂಧಿತರು. ದರೋಡೆಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 8 ಮೊಬೈಲ್, ಕೃತ್ಯಕ್ಕೆ ಬಳಸಿದ್ದ 2 ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.