ಗಣೇಶೋತ್ಸವಕ್ಕೆ ಖರೀದಿ ಜೋರು
ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ಗಣೇಶ ಚುತುರ್ಥಿ ಆಚರಣೆಗೆ ಒಂದೆ ದಿನ ಬಾಕಿ ಉಳಿದಿದೆ, ನಗರ ಹಾಗೂ ಜಿಲ್ಲೆಯಾದ್ಯಂತ ಪ್ರಥಮ ಪೂಜಿತನ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಳೆ ಕೊರತೆಯಿಂದ ಉಂಟಾದ ಬರದ ಛಾಯೇ ನಡುವೇಯೂ ಹಬ್ಬದ ಸಡಗರ ಮನೆ ಮಾಡಿದೆ.
ಕುಂದಾನಗರಿ ಖಡೆ ಬಜಾರ,ಪಾಂಗುಳ ಗಲ್ಲಿ ಸೇರಿ ಪ್ರಮುಖ ಮಾರುಕಟ್ಟೆಯಲ್ಲಿ ಗಣೇಶ ಹಬ್ಬಕ್ಕೆ ಬೇಕಾಗುವ ವಿದ್ಯುತ್ ಅಲಂಕಾರಿಕ ವಸ್ತುಗಳು, ತೋರಣ ಹಾಗೂ ಪ್ಲಾ÷್ಯಸ್ಟಿಕ್ ಹೂವುಗಳ ಮಾರಾಟದಲ್ಲಿ ಜನರು ಉತ್ಸಾಹದಿಂದ ಖರೀದಿಸುವುದು ಕಂಡು ಬಂತು. ಕಳೆದ ಬಾರಿಗಿಂತ ಈ ಬಾರಿ ಶೆ.೧೦-೨೦ ರಷ್ಟು ಬೆಲೆಗಳು ವಿದ್ಯುತ್ ಸಾಮಾಗ್ರಿಗಳಲ್ಲಿ ಏರಿಕೆಯಾದರೂ ಜನರಲ್ಲಿ ಉತ್ಸಾಹ ಮಾತ್ರ ಕಡಿಮೆ ಆಗಿಲ್ಲ.
ಮನೆಯಲ್ಲಿ ಪೂಜಿಸುವ ಗಣೇಶ-ಗೌರಿ ಪೂಜೆಗೆ ಬೇಕಾಗುವ ಪೂಜಾ ಸಾಮಾಗ್ರಿಗಳಾದ ಹಣ್ಣುಗಳು ಬೆಲೆ ಏರಿಕೆಯಾಗಿದೆ. ಸೇಬು ಹಣ್ಣು ಕೆಜಿಗೆ ೧೫೦-೨೦೦ ವರೆಗೆ ಮಾರಾಟ ಮಾಡಲಾಗುತ್ತಿದೆ.
ಗಣೇಶ ಮೂರ್ತಿ ಬೆಲೆಗಳು ಏರಿಕೆ:
ಮನೆಯಲ್ಲಿ ಪೂಜಿಸುವ ಚಿಕ್ಕ ಗಣೇಶ ಮೂರ್ತಿಗಳಿಗೆ (ಪಿಒಪಿ) ಅಳತೆಯ ಆಧಾರ ಮೇಲೆ ಕನಿಷ್ಠ ೩೦೦ ರೂ.ದಿಂದ ೨೦೦೦ ರೂ. ವರೆಗೆ ಹಾಗೂ ಸಾರ್ವಜನಿಕ ಗಣೇಶ ಮೂರ್ತಿಗಳಿಗೆ ೧೦ ಅಡಿಯಿಂದ ೧೫ ಅಡಿಯಷ್ಟು ಅಳತೆ ಮೂರ್ತಿಗಳಿಗೆ ೫೦ ಸಾವಿರ ರೂ.ವರಗೆ ಮೂರ್ತಿಕಾರರು ದರ ನಿಗದಿ ಮಾಡಿದ್ದಾರೆ. ತಯಾರಿಕಾ ವೆಚ್ಚ,ಕೂಲಿ ಕಾರ್ಮಿಕರ ವೇತನ ಹೆಚ್ಚಳವಾಗಿರುವುದರಿಂದ ಕಳೆದ ಬಾರಿಗಿಂತ ಈ ಬಾರಿ ಶೆ.೧೦ ರಷ್ಟು ಮೂರ್ತಿಗಳ ಬೆಲೆ ಹೆಚ್ಚಿಸಲಾಗಿದೆ.