ಜನರನ್ನು ಒಗ್ಗೂಡಿಸಲಿದೆ ಗಣೇಶ ಚತುರ್ಥಿ

ಚೆನ್ನರಾಯಪಟ್ಟಣದ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಆಯೋಜಿಸಿದ್ದ ಗಣಪತಿ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಸಿ.ಎನ್.ಬಾಲಕೃಷ್ಣ, ಲೋಕೇಶ್, ಜೈದೀಪ್ ಬಾಲಕೃಷ್ಣ, ಸತೀಶ್, ನಂಜುಂಡ ಮೈಮ್, ಚ.ನಾ.ಅಶೋಕ್ ಇತರರಿದ್ದರು.
ಚೆನ್ನರಾಯಪಟ್ಟಣದ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಆಯೋಜಿಸಿದ್ದ ಗಣಪತಿ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಸಿ.ಎನ್.ಬಾಲಕೃಷ್ಣ, ಲೋಕೇಶ್, ಜೈದೀಪ್ ಬಾಲಕೃಷ್ಣ, ಸತೀಶ್, ನಂಜುಂಡ ಮೈಮ್, ಚ.ನಾ.ಅಶೋಕ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎನ್.ಬಾಲಕೃಷ್ಣ
  • ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ
ಚನ್ನರಾಯಪಟ್ಟಣ: ಗಣೇಶೋತ್ಸವ ಧಾರ್ಮಿಕ ಆಚರಣೆಯಲ್ಲ. ಬದಲಾಗಿ ಅದು ನಮ್ಮ ದೇಶದ ಭಾವನಾತ್ಮಕ ಮತ್ತು ರಾಷ್ಟ್ರೀಯ ಒಗ್ಗಟ್ಟಿನ ಸಂಕೇತ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯಿಂದ ಆಸ್ಥಾನ ಮಂಟಪದಲ್ಲಿ ಆಯೋಜಿಸಿದ್ದ ಗಣೇಶ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮಾತನಾಡಿ, ಭಿನ್ನತೆಯಲ್ಲಿ ಏಕತೆ ಸಾರುವ ಭಾರತದಲ್ಲಿ, ಗಣೇಶ ಚತುರ್ಥಿ ಜನರನ್ನು ಒಗ್ಗೂಡಿಸಲಿದೆ ಎಂದರು.
ಸೇವಾ ಸಮಿತಿ ಅಧ್ಯಕ್ಷ ಚ.ನಾ.ಅಶೋಕ್ ಮಾತನಾಡಿ, ಒಂದು ಮಂಡಲಗಳ ಕಾಲ ಗಣಪನಿಗೆ ಪೂಜಾ ಕೈಂಕರ್ಯ ನಡೆಯಲಿದೆ. ನಿತ್ಯ ಅನ್ನಸಂತರ್ಪಣೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದರು.
ಗಣಪತಿ ಪೆಂಡಲಿನಲ್ಲಿ ಸಂಜೆ ಮಹದೇವ್ ಮತ್ತು ತಂಡದವರಿಂದ ಭಕ್ತಿಗೀತೆ ಮತ್ತು ಬಾವಗೀತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪುರಸಭಾ ಮಾಜಿ ಸದಸ್ಯರಾದ ಎಸ್.ಎ.ಗಣೇಶ್, ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಎ.ವಿ.ಜಯಪಾಲ್, ಗುತ್ತಿಗೆದಾರ ಸಿ.ಬಿ.ಗಂಗಾಧರ್, ಪುರಿಬಟ್ಟಿ ಮಂಜಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಆರ್.ವೆಂಕಟೇಶಮೂರ್ತಿ ಯುವ ಮುಖಂಡ ಜೈದೀಪ್ ಬಾಲಕೃಷ್ಣ, ಬಿಜೆಪಿ ಯುವ ಮುಖಂಡ ಚಿದಾನಂದ್, ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೇನಹಳ್ಳಿ ಇತರರಿದ್ದರು.
ಗಣೇಶೋತ್ಸವದ ಉದ್ದೇಶವೇ ಜನರನ್ನು ಒಗ್ಗೂಡಿಸುವುದು. ದೇಶದ ಸ್ವಾತಂತ್ರೃ ಹೋರಾಟಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ ಗಣೇಶೋತ್ಸವದ ಮೂಲ ಆಶಯವನ್ನು ಅರಿತು, ಯಾವುದೇ ಭೇದ ಭಾವಗಳಿಲ್ಲದೆ ವೈಯಕ್ತಿಕ ಹಿತಾಸಕ್ತಿಗಳನ್ನು ದೂರವಿಟ್ಟು ಗಣೇಶ ಚತುರ್ಥಿ ಆಚರಿಸಬೇಕು.
ಜಿ.ಆರ್.ಶಿವಮೂರ್ತಿ ಪೊಲೀಸ್ ಉಪ ಅಧೀಕ್ಷಕ, ಚನ್ನರಾಯಪಟ್ಟಣ ಉಪ ವಿಭಾಗ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net