ನಗರದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ವಲಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಜರುಗಿತು. ಪಿ. ಆರ್. ಅಡವಿ, ಪ್ರೊ. ಎಸ್. ಕೆ. ಪವಾರ, ಎ. ಡಿ. ಗೋಡೆಖಂಡಿ, ಆನಂದ ಪೋತ್ನಿಸ, ಕೆ. ವಿ. ಕುಷ್ಟಗಿ, ಡಾ. ವಿ. ಟಿ. ನಾಯ್ಕರ, ಪ್ರೊ. ಲಿಂಗರಾಜ ರಶ್ಮಿ, ಪ್ರೊ. ಆರ್. ಆರ್. ಕುಲಕಣಿರ್, ಪ್ರೊ. ಬಿ. ಪಿ. ಜೈನರ ಇತರರು ಇದ್ದರು.
ಯುವಜನೋತ್ಸವ ಸೃಜನಶೀಲತೆಯನ್ನು ಬೆಳೆಸುವ ಪ್ರಮುಖ ವೇದಿಕೆ: ಪಿ.ಆರ್. ಅಡವಿ
ವಿಜಯವಾಣಿ ಸುದ್ದಿಜಾಲ ಗದಗ
ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹಾಗೂ ಆದರ್ಶ ಶಿಕ್ಷಣ ಸಮಿತಿಯ ವಿ. ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಸಹಯೋಗದಲ್ಲಿ ಸೋಮವಾರ 2025ನೇ ಸಾಲಿನ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ- ಕಾರ್ಯಕ್ರಮ ಜರುಗಿತು.
ಆದರ್ಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪಿ. ಆರ್. ಅಡವಿ ಮಾತನಾಡಿ, ಯುವಜನೋತ್ಸವವು ಯುವಕರ ಪ್ರತಿಭೆ, ಸಂಸತಿ ಮತ್ತು ಸೃಜನಶೀಲತೆಯನ್ನು ಬೆಳೆಸುವ ಅತ್ಯಂತ ಪ್ರಮುಖ ಕಾರ್ಯಕ್ರಮ. ಯುವಕರಲ್ಲಿರುವ ಹಾಡು, ನೃತ್ಯ, ನಾಟಕ, ಸಾಹಿತ್ಯ, ಚಿತ್ರಕಲೆ ಮುಂತಾದ ವಿವಿಧ ಪ್ರತಿಭೆಗಳ ಅನಾವರಣ ಮಾಡುವ ವೇದಿಕೆಗೆ ಇದಾಗಿದೆ. ನಮ್ಮ ದೇಶದ ವೈವಿಧ್ಯಮಯ ಸಂಸತಿ, ಪರಂಪರೆ ಮತ್ತು ಜನಪದ ಕಲೆಗಳನ್ನು ಅರಿಯಲು ಅವಕಾಶ ದೊರೆಯುತ್ತದೆ. ಅದರೊಂದಿಗೆ ಸಾಂಸತಿಕ ಅರಿವನ್ನು ಮೂಡಿಸುತ್ತದೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯ ವಿದ್ಯಾಥಿರ್ ಕಲ್ಯಾಣ ವಿಭಾಗದ ನಿರ್ದೇಶಕ ಪ್ರೊ. ಎಸ್. ಕೆ. ಪವಾರ ಮಾತನಾಡಿ, ಪ್ರಮುಖ ವೇದಿಕೆಯಲ್ಲಿ ವಿದ್ಯಾಥಿರ್ಗಳು ಭಾಗವಹಿಸುವುದರಿಂದ ಯುವಕರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಬೇರೆ ಮಹಾವಿದ್ಯಾಲಯಗಳಿಂದ ವಿದ್ಯಾಥಿರ್ಗಳು ವಿದ್ಯಾಥಿರ್ನಿಯರು ಒಟ್ಟಾಗಿ ಭಾಗವಹಿಸುವುದರಿಂದ ಸ್ನೇಹ, ಸಹಕಾರ ಮತ್ತು ರಾಷ್ಟ್ರೀಯ ಏಕತೆ ಬೆಳೆಸುತ್ತದೆ. ಅಷ್ಟೇ ಅಲ್ಲದೆ ಶಿಸ್ತು ಮತ್ತು ಹೊಣೆಗಾರಿಕೆಗಳ ಮೂಲಕ ನಾಯಕತ್ವ ಗುಣಗಳು ಬೆಳೆಯುತ್ತವೆ. ಜೊತೆಗೆ ಪಠ್ಯಭಾರದಿಂದ ದೂರವಾಗಿ ಮನರಂಜನೆ ಮತ್ತು ಉತ್ಸಾಹ ಪಡೆಯಲು ಯುವಜನೋತ್ಸವ ಸಾಂಸತಿಕ ಸ್ಪರ್ಧೆಗಳು ಸಹಾಯಕವಾಗುತ್ತದೆ ಎಂದರು.
ಸಂಸ್ಥೆಯ ಕಾರ್ಯದಶಿರ್ ಎ. ಡಿ. ಗೋಡೆಖಂಡಿ ಮಾತನಾಡಿ, ಯುವಕರು ದೇಶದ ಶಕ್ತಿ ಮತ್ತು ಭವಿಷ್ಯದ ಆಧಾರಸ್ತಂಭ. ಹೀಗಾಗಿ ಅವರ ಶ್ರಮ, ಬುದ್ಧಿವಂತಿಕೆ ಮತ್ತು ಉತ್ಸಾಹವೇ ರಾಷ್ಟ್ರದ ಪ್ರಗತಿಗೆ ಪ್ರಮುಖ ಕಾರಣ. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಯುವಜನೋತ್ಸವ ಸಾಂಸತಿಕ ಸ್ಪರ್ಧೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಒಳಪಡುವ ಜಿಲ್ಲಾ ಪದವಿ ಕಾಲೇಜುಗಳ 500 ಕ್ಕೂ ಹೆಚ್ಚು ವಿದ್ಯಾಥಿರ್ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಟ್ಟು 27 ವಿಭಾಗಗಳಲ್ಲಿ ಸ್ಪರ್ಧೆ ಜರುಗಿದವು.
ಸಂಸ್ಥೆಯ ಚೇರ್ಮನ್ ಆನಂದ ಪೋತ್ನಿಸ, ಕೆ. ವಿ. ಕುಷ್ಟಗಿ, ಡಾ. ವಿ. ಟಿ. ನಾಯ್ಕರ, ಪ್ರೊ. ಲಿಂಗರಾಜ ರಶ್ಮಿ, ಪ್ರೊ. ಆರ್. ಆರ್. ಕುಲಕಣಿರ್, ಪ್ರೊ. ಬಿ. ಪಿ. ಜೈನರ ಇತರರು ಇದ್ದರು.