ಬ್ರಹ್ಮ ಕುಮಾರಿ ಸಾವಿತ್ರಿ ಅಕ್ಕ ಯೋಗ ಶಿಬಿರ ನಡೆಸಿ ಮಾತನಾಡಿ, ಯೋಗವು ಪ್ರಾಚಿನ ಭಾರತದ ಅಮೂಲ್ಯ ಕೊಡುಗೆ ಆಗಿದೆ. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸಲು ಯೋಗದ ಪಾತ್ರ ಮಹತ್ವದ್ದಾಗಿದೆ. ಪ್ರತಿವರ್ಷ ಒಂದೊಂದು ವಿಷಯದಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬ ವಿಷಯ ಆರಿಸಿಕೊಳ್ಳಲಾಗಿದೆ. ಹಾಗಾಗಿ ಯೋಗದಿಂದ ಆರೋಗ್ಯ, ಪ್ರಾಣಾಯಾಮದಿಂದ ಮನಶಾಂತಿ, ಜ್ಞಾನದಿಂದ ಜೀವನದ ಸಾರ್ಥಕತೆ ದೊರೆಯುತ್ತದೆ. ಯೋಗವನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಪಡೆಯಲು ಪ್ರತಿಯೊಬ್ಬರು ಸಂಕಲ್ಪ ತೋರಬೇಕು ಎಂದರು.