ಮಕ್ಕಳಲ್ಲಿ ಯೋಗಾಸಕ್ತಿ ಬೆಳೆದರೆ ಸಶಕ್ತ ಸಮಾಜ ನಿರ್ಮಾಣ: ರುದ್ರಣ್ಣ ಗುಳಗುಳಿ

  ಗದಗ ತೊಂಟದಾರ್ಯ ಮಠದಲ್ಲಿ ಏರ್ಪಡಿಸಿದ್ದ ಯೋಗಾಸನ ಕ್ರೀಡೆ ಪ್ರಸಾರ, ಪ್ರಚಾರ ಪ್ರಯುಕ್ತ ಸಮಾಲೋಚನೆ ಸಭೆಯಲ್ಲಿ ರುದ್ರಣ್ಣ ಗುಳಗುಳಿ ಮಾತನಾಡಿದರು. ಎ. ನಟರಾಜ, ಎಂ. ಎಸ್​. ಶಿರಿಯಣ್ಣವರ, ಡಾ. ಎನ್​. ಎಸ್​. ಹದ್ಲಿ, ಪ್ರಭು ಜಕ್ಕನಗೌಡ್ರ, ಷಡಕ್ಷರಿ ಮೆಣಸಿನಕಾಯಿ, ಸಂಜೀವಕುಮಾರ ಹಡಗಲಿ, ಆನಂದ ಸರಗಾವಿ, ವೆಂಕಟೇಶ ಜಿತೂರಿ, ಗಂಗಾಧರ ಕೆಂಗಾರ, ಬಸವರಾಜ ವಾರಿ, ಜಯಶ್ರೀ ಡಾವಣಗೇರಿ, ಸುಮಂಗಲಾ ಹದ್ಲಿ, ಎಂ. ವಿ. ಕಲಹಾಳ, ಡಾ. ಎಸ್​. ಎಸ್​. ಹಿರೇಮಠ, ಕೆ. ಎಸ್​. ಪಲ್ಲೆದ, ಶಿವಲೀಲಾ ಅಕ್ಕಿ ಇತರರು ಹೇಳಿದರು.

Published on
ವಿಜಯವಾಣಿ ಸುದ್ದಿಜಾಲ ಗದಗ
ಯೋಗವು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ತುಂಬಾ ಸಹಕಾರಿ ಆಗಿದೆ. ಇಂದಿನ ಮಕ್ಕಳು ಕಲೆ, ಸಾಹಿತ್ಯ, ಕ್ರೀಡೆ, ವಿಾನ, ವೈದ್ಯಕಿಯ, ತಾಂತ್ರಿಕ ವಿಷಯಾಸಕ್ತಿಗಳ ಜೊತೆಯಲ್ಲಿ ಯೋಗಾಸಕ್ತಿಯನ್ನು ಬೆಳೆಸಿಕೊಂಡರೆ ಅವರಲ್ಲಿ ಸದ್ವಿಚಾರ, ಸದ್ವರ್ತನೆ, ಸದ್ಗುಣಗಳು ಬೆಳೆಯುತ್ತವೆ ಎಂದು ಭಾರತ ಸ್ವಾಭಿಮಾನ ಟ್ರಸ್ಟ್​ ಅಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.
ಜಿಲ್ಲಾ ಅಮೆಚೂರ್​ ಯೋಗಾಸನ ಸ್ಪೋರ್ಟ್ಸ್​ ಅಸೋಸಿಯೇಶನ್​ ಸಂಸ್ಥೆಯು ಯೋಗಾಸನ ಕ್ರೀಡಾ ಪ್ರಸಾರ, ಪ್ರಚಾರ ಕಾರ್ಯ ಪ್ರಯುಕ್ತ ತೋಂಟದಾರ್ಯ ಮಠದ ಆವರಣದಲ್ಲಿನ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೊಡ್ಡವರಾದ ಮೇಲೆ ಮಕ್ಕಳಲ್ಲಿ ಸದ್ವಿಚಾರ, ಸದ್ವರ್ತನೆ, ಸದ್ಗುಣಗಳು ಕ್ರಿಯಾಶೀಲಗೊಂಡು ಅವರು ನವ ಸಮಾಜ ನಿರ್ಮಾಣಕ್ಕೆ ಅಣಿ ಆಗುತ್ತಾರೆ. ಇದರಿಂದ ಸುಂದರ ಸಮಾಜ ನಿರ್ಮಾಣಗೊಳ್ಳಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಮಕ್ಕಳಲ್ಲಿ ಯೋಗಾಸಕ್ತಿ ಬೆಳೆದರೆ ಸಶಕ್ತ ಸಮಾಜ ನಿರ್ಮಾಣ ಆಗುತ್ತದೆ ಎಂದರು.
ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಹೆಚ್ಚುತ್ತಿದೆ. ಯುವ ಜನತೆಯಲ್ಲಿ ಆಶಾಭಾವ ಣಿಸುತ್ತಿದೆ. ಈ ಎಲ್ಲ ಸಮಸ್ಯೆಗಳ ನಿವಾರಣೆಗಾಗಿ ಮಕ್ಕಳ ಮತ್ತು ಯುವ ಜನತೆಯ ದೈಹಿಕ, ಮಾನಸಿಕ ಶಕ್ತಿಯನ್ನು ಒಗ್ಗೂಡಿಸಬೇಕಾಗಿದೆ. ಇದಕ್ಕಾಗಿ ಯೋಗಾಸನ ಕ್ರೀಡೆಗಳು ಹೆಚ್ಚು ಸಹಕಾರಿ ಆಗಿವೆ ಎಂದು ರುದ್ರಣ್ಣ ಗುಳಗುಳಿ ಹೇಳಿದರು.
ರಾಜ್ಯ ಅಮೆಚೂರ್​ ಯೋಗಾಸನ ಸ್ಪೋರ್ಟ್ಸ್​ ಅಸೋಸಿಯೇಶನ್​ ಡಾ. ಪಿ. ಎನ್​. ಗಣೇಶಕುಮಾರ ಮಾತನಾಡಿ ಕೇವಲ ಭಾಷಣ ಮಾಡಿದರೆ ಸಾಲದು, ಸ್ವತಃ ಸಾಧನೆ ಮಾಡಿ ಅದರ ಮಹತ್ವ ತಿಳಿಸಿದರೆ ಪರಿಣಾಮಕಾರಿ ಆಗುತ್ತದೆ. ಯೋಗದ ಸಾಂಘಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಾನ ಪಡೆಯಬೇಕು. ಯೋಗಾಸನ ರಾಷ್ಟ್ರೀಯ ಕ್ರೀಡೆಯಾಗಿದೆ. ಯೋಗಾಸನ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಅವುಗಳ ಸದುಪಯೋಗ ಪಡೆಯಬೇಕು ಎಂದರು.
ಎ. ನಟರಾಜ, ಎಂ. ಎಸ್​. ಶಿರಿಯಣ್ಣವರ, ಡಾ. ಎನ್​. ಎಸ್​. ಹದ್ಲಿ, ಪ್ರಭು ಜಕ್ಕನಗೌಡ್ರ, ಷಡಕ್ಷರಿ ಮೆಣಸಿನಕಾಯಿ, ಸಂಜೀವಕುಮಾರ ಹಡಗಲಿ, ಆನಂದ ಸರಗಾವಿ, ವೆಂಕಟೇಶ ಜಿತೂರಿ, ಗಂಗಾಧರ ಕೆಂಗಾರ, ಬಸವರಾಜ ವಾರಿ, ಜಯಶ್ರೀ ಡಾವಣಗೇರಿ, ಸುಮಂಗಲಾ ಹದ್ಲಿ, ಎಂ. ವಿ. ಕಲಹಾಳ, ಡಾ. ಎಸ್​. ಎಸ್​. ಹಿರೇಮಠ, ಕೆ. ಎಸ್​. ಪಲ್ಲೆದ, ಶಿವಲೀಲಾ ಅಕ್ಕಿ ಇತರರು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net