21ರಂದು ಸಂಜೆ 5ರಿಂದ 7ರ ವರೆಗೆ ಪ್ರಾಯೋಗಿಕವಾಗಿ ವಿಶ್ವ ಧ್ಯಾನ ದಿನವನ್ನು ಆಚರಿಸುತ್ತಿದ್ದೇವೆ. ಉದ್ಘಾಟನೆಯ ಕಾರ್ಯಕ್ರಮ ನಂತರ ಎಲ್ಲರಿಗೂ 45 ನಿಮಿಷಗಳವರೆಗೆ ಮನಸ್ಸು, ಬುದ್ಧಿಯನ್ನು ಏಕಾಗ್ರಗೊಳಿಸುವ ,ಆಳವಾದ ಶಾಂತಿಯ ಅನುಭವ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಡಾ. ಸತೀಶ್ ಹೊಂಬಾಳಿ, ಡಾ. ಜಯಕುಮಾರ ಬ್ಯಾಳಿ, ಶರಣಬಸಪ್ಪ ಗುಡಿಮನಿ, ಲೋಕೇಶ್ ಜಿ.ಎಸ್. ಸೇರಿ ಹಲವರು ಪಾಲ್ಗೊಳ್ಳುವರು ಎಂದು ಹೇಳಿದರು.