ಪ್ರಕೃತಿ ಉಳಿದರೆ ಮಾತ್ರ ಭವಿಷ್ಯ ಸುರಕ್ಷಿತ: ಪ್ರಕಾಶ ಪವಾಡಿಗೌಡರ

ಗದಗ ಸರ್ಕಾರಿ ಸಿದ್ಧಲಿಂಗ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜಯವಾಣಿ ಸಹಯೋಗದೊಂದಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು. ಬಸವರಾಜ ಧಾರವಾಡ, ಪ್ರಕಾಶ ಪವಾಡಿಗೌಡರ್​, ರಮನ್​ ನಾಯಕ, ಅಣ್ಣೀಗೇರಿ, ಸಾವಿತ್ರಿ ಗದ್ದನಕೇರಿ, ಎಂ.ಐ. ಶಿವನಗೌಡರ, ಆರ್​, ವೈ. ಬಸರಿ, ಎಸ್​.ಎಂ. ಪತ್ತಾರ, ಶಿವಕುಮಾರ, ಎಚ್​. ಎಸ್​. ತಕ್ಕಲಕೋಟಿ,  ವಿಜಯವಾಣಿ ಪತ್ರಿಕೆ ಜಿಲ್ಲಾ ವರದಿಗಾರ  ಶಿವಾನಂದ ಹಿರೇಮಠ ಇತರರು ಇದ್ದರು.
ಗದಗ ಸರ್ಕಾರಿ ಸಿದ್ಧಲಿಂಗ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜಯವಾಣಿ ಸಹಯೋಗದೊಂದಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು. ಬಸವರಾಜ ಧಾರವಾಡ, ಪ್ರಕಾಶ ಪವಾಡಿಗೌಡರ್​, ರಮನ್​ ನಾಯಕ, ಅಣ್ಣೀಗೇರಿ, ಸಾವಿತ್ರಿ ಗದ್ದನಕೇರಿ, ಎಂ.ಐ. ಶಿವನಗೌಡರ, ಆರ್​, ವೈ. ಬಸರಿ, ಎಸ್​.ಎಂ. ಪತ್ತಾರ, ಶಿವಕುಮಾರ, ಎಚ್​. ಎಸ್​. ತಕ್ಕಲಕೋಟಿ, ವಿಜಯವಾಣಿ ಪತ್ರಿಕೆ ಜಿಲ್ಲಾ ವರದಿಗಾರ ಶಿವಾನಂದ ಹಿರೇಮಠ ಇತರರು ಇದ್ದರು.
Published on
ವಿಜಯವಾಣಿ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ
ವಿಜಯವಾಣಿ ಸುದ್ದಿಜಾಲ ಗದಗ
ಜಾಗತಿಕ ತಾಪಮಾನ ಏರಿಕೆ, ಅರಣ್ಯ ನಾಶ, ನೀರಿನ ಕೊರತೆ, ವಾಯು ಮಾಲಿನ್ಯ ಹಾಗೂ ಜೀವ ವೈವಿಧ್ಯದ ಣತೆ ಸಮಸ್ಯೆಗಳು ಇಂದು ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿವೆ. ಮಾನವನ ಅತಿಯಾದ ಅಭಿವೃದ್ಧಿ ಚಟುವಟಿಕೆಗಳು ಪ್ರಕೃತಿಯ ಸಮತೋಲನವನ್ನು ಹಾಳು ಮಾಡುತ್ತಿದ್ದು, ಪರಿಸರ ಸಂರಕ್ಷಣೆ ಮತ್ತು ಜಾಗೃತಿಯ ಅಗತ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಪರಿಸರ ಉಳಿಸಲು ಇಂದಿನ ಮಕ್ಕಳು ಸೇರಿದಂತೆ ಎಲ್ಲರೂ ಕೈಜೋಡಿಸಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ ಪವಾಡಿಗೌಡರ ಹೇಳಿದರು.
ಸಿದ್ಧಲಿಂಗ ನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ, ವಿಜಯವಾಣಿ ದಿನಪತ್ರಿಕೆ ಹಾಗೂ ಸಿದ್ಧಲಿಂಗ ನಗರ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪರಿಸರವೆಂದರೆ ಕೇವಲ ಮರಗಳು, ನದಿಗಳು ಅಥವಾ ಪ್ರಾಣಿಗಳು ಮಾತ್ರವಲ್ಲ. ನಮ್ಮ ಸುತ್ತಲಿನ ಗಾಳಿ, ನೀರು, ಮಣ್ಣು, ಸಸ್ಯಗಳು ಹಾಗೂ ಜೀವಜಾಲಗಳ ಸಮಗ್ರ ವ್ಯವಸ್ಥೆಯೇ ಪರಿಸರವಾಗಿದೆ. ಈ ವ್ಯವಸ್ಥೆಯಲ್ಲಿ ಉಂಟಾಗುವ ಯಾವುದೇ ಅಸಮತೋಲನ ನೇರವಾಗಿ ಮಾನವನ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಭೂಕುಸಿತ, ಉಷ್ಣಾಂಶ ಏರಿಕೆ ಹಾಗೂ ಹವಾಮಾನ ವೈಪರೀತ್ಯಗಳು ಹೆಚ್ಚಾಗುತ್ತಿರುವುದು ಪರಿಸರ ಹಾನಿಯ ಸ್ಪಷ್ಟ ಸೂಚನೆಯಾಗಿದೆ. ಮಕ್ಕಳು ಪ್ರತಿಯೊಬ್ಬರು ಒಂದು ಮರವನ್ನು ನೆಟ್ಟು ಆರೈಕೆ ಮಾಡಿ ಬೆಳಸಬೇಕು ಎಂದರು.
ತಾಲೂಕು ಸಾಮಾಜಿಕ ಅರಣ್ಯ ಅಧಿಕಾರಿ ರಮನ್​ ನಾರಾಯಣ ನಾಯ್ಕ ಮಾತನಾಡಿ, ಪ್ಲಾಸ್ಟಿಕ್​ ಬಳಕೆ, ಅರಣ್ಯ ನಾಶ, ಕೈಗಾರಿಕಾ ತ್ಯಾಜ್ಯ, ವಾಹನಗಳ ಹೊಗೆ ಮತ್ತು ನೀರಿನ ರ್ದುಬಳಕೆ ಪರಿಸರ ಮಾಲಿನ್ಯದ ಪ್ರಮುಖ ಕಾರಣಗಳಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಪರಿಸರದ ಬಗ್ಗೆ ನಿರ್ಲಕ್ಷ$್ಯ ಹೆಚ್ಚಾಗುತ್ತಿದ್ದು, ಕೆರೆ-ಕಟ್ಟೆಗಳ ಒತ್ತುವರಿ, ಅಕ್ರಮ ಮರ ಕಡಿತ ಹಾಗೂ ತ್ಯಾಜ್ಯ ವಿಲೇವಾರಿಯ ಸಮಸ್ಯೆಗಳು ಕಂಡು ಬರುತ್ತಿವೆ. ಇಂತಹ ಬೆಳವಣಿಗೆಗಳು ಮುಂದಿನ ಪೀಳಿಗೆಯ ಬದುಕಿಗೆ ದೊಡ್ಡ ಸವಾಲಾಗಬಹುದು ಎಂದರು.
ಶಿಕ್ಷಣ ತಜ್ಞ ಬಸವರಾಜ ಧಾರವಾಡ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಸರ್ಕಾರದ ಜೊತೆಗೆ ಸಾರ್ವಜನಿಕರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ನೆಟ್ಟು ಅದರ ಪೋಷಣೆ ಮಾಡಬೇಕು. ಪ್ಲಾಸ್ಟಿಕ್​ ಬಳಕೆಯನ್ನು ಕಡಿಮೆ ಮಾಡಿ ಬಟ್ಟೆ ಅಥವಾ ಕಾಗದದ ಚೀಲಗಳನ್ನು ಬಳಸಬೇಕು. ಮಳೆ ನೀರು ಸಂಗ್ರಹಣೆ ನೀರಿನ ಮಿತವ್ಯಯ, ಕಸ ವಿಂಗಡಣೆ ಮತ್ತು ಮರುಬಳಕೆ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಶಾಲಾ- ಕಾಲೇಜುಗಳಲ್ಲಿ ಪರಿಸರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಮಕ್ಕಳಲ್ಲಿ ಪ್ರಕೃತಿ ಪ್ರೇಮ ಬೆಳೆಸಬೇಕು ಎಂದರು.
ಮುಖ್ಯೊಪಾದ್ಯಾಯ ಎಚ್​. ಎಸ್​. ತಕ್ಕಲಕೋಟಿ ಮಾತನಾಡಿ, ಪ್ರಕೃತಿ ನಮಗೆ ಬದುಕಲು ಅಗತ್ಯವಾದ ಎಲ್ಲ ಸಂಪನ್ಮೂಲಗಳನ್ನು ನೀಡಿದೆ. ಆದರೆ ಅವುಗಳನ್ನು ವಿವೇಚನೆಯಿಂದ ಬಳಸದೆ ಹೋದರೆ ಭವಿಷ್ಯದಲ್ಲಿ ಭಾರೀ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಪರಿಸರದ ಮಹತ್ವವನ್ನು ಅರಿತು, ಸಂರಕ್ಷಣೆಯತ್ತ ಪ್ರತಿಯೊಬ್ಬರೂ ಕೈಜೋಡಿಸಬೇಕು. ಇಂದು ನಾವು ಪ್ರಕೃತಿಯನ್ನು ಉಳಿಸಿದರೆ ನಾಳೆ ಪ್ರಕೃತಿ ನಮ್ಮನ್ನು ಉಳಿಸುತ್ತದೆ ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡಾಗ ಮಾತ್ರ ಹಸಿರು ಮತ್ತು ಸುಸ್ಥಿರ ಭವಿಷ್ಯ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಎಂ.ಐ. ಶಿವನಗೌಡರ ಮಾತನಾಡಿ, ಪ್ರತಿ ವರ್ಷ ಜೂನ್​ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಆದರೆ ಪರಿಸರ ಕಾಳಜಿ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿದಿನದ ಜೀವನ ಶೈಲಿಯ ಭಾಗವಾಗಬೇಕು. ಪರಿಸರ ಸಂರಕ್ಷಣೆ ಒಂದು ಸಾಮಾಜಿಕ ಜವಾಬ್ದಾರಿ ಆಗಿದೆ. ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು ಎಂದರು.
ಜಯಲಕ್ಷಿ$್ಮ ಅಣ್ಣೀಗೇರಿ, ಸಾವಿತ್ರಿ ಗದ್ದನಕೇರಿ, ಆರ್​, ವೈ. ಬಸರಿ, ಎಸ್​.ಎಂ. ಪತ್ತಾರ, ಶಿವಕುಮಾರ, ವಿಜಯವಾಣಿ ಪತ್ರಿಕೆ ಜಿಲ್ಲಾ ವರದಿಗಾರ ಶಿವಾನಂದ ಹಿರೇಮಠ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಪ್ರಕೃತಿಯೇ ಸ್ಪೂತಿರ್ ಎಂಬ ವಿಷಯ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ 300ಕ್ಕೂ ಅಧಿಕ ವಿದ್ಯಾಥಿರ್ಗಳು ಭಾಗವಹಿಸಿದ್ದರು. ವಿದ್ಯಾಥಿರ್ಗಳಾದ ಕೃಷ್ಣಪ್ರೀಯ ಬದಿ ಹಾಗೂ ದಾನಮ್ಮ ಹತಿರ್ ಪ್ರಥಮ ಸ್ಥಾನ ಪಡೆದರು. ದ್ವೀತಿಯ ಸ್ಥಾನವನ್ನು ಗೋಪಾಲ ಪವಾರ, ಮಂಜುನಾಥ ಶಿರಬಡಗಿ ಹಾಗೂ ಪವಿತ್ರ ರೋಣದ ಹಾಗೂ ವೈಷ್ಣವಿ ಕಳಸಣ್ಣವರ ತೃತೀಯ ಸ್ಥಾನ ಪಡೆದರು. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸಸಿ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಸಸಿ ನೆಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net