ಮಹಿಳೆಯರಿಗೆ ಶೇ. 33 ಮೀಸಲು! ಕ್ರಾಂತಿಕಾರಕ ನಿರ್ಧಾರ: ಎಂ. ಎಂ. ಹಿರೇಮಠ

M M Hiremath
M M Hiremath
Published on
ಗದಗ: ನಾರಿಶಕ್ತಿ ವಂದನಾ ಅದಿ ನಿಯಮವು ಭಾರತದ ಮಹಿಳಾ ಶಕ್ತಿಗೆ ಸಲ್ಲಿಸುವ ಮಹತ್ತರ ಗೌರವದ ಸಂಕೇತವಾಗಿದೆ. ಮಹಿಳೆಯರು ಕೇವಲ ಕುಟುಂಬದ ಅಡಿಪಾಯ ಅಲ್ಲದೇ ದೇಶದ ಪ್ರಗತಿಯ ದಿಕ್ಕು ತೋರಿಸುವ ಶಕ್ತಿ ಎಂಬ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವ ಐತಿಹಾಸಿಕ ಹೆಜ್ಜೆ ಆಗಿದೆ. ಮಹಿಳೆಯರಿಗೆ ಲೋಕಸಭೆ ಹಾಗು ವಿಧಾನಸಭೆಯಲ್ಲಿ ಶೇ. 33 ರಷ್ಟು ಮಿಸಲಿಡುವ ವಿದೇಯಕವನ್ನು ಜಾರಿಗೆ ತರುತ್ತಿರುವುದು ಕ್ರಾಂತಿಕಾರಕ ನಡೆಯಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಂ. ಎಂ.ಹಿರೇಮಠ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವಅವರು, ಮಹಿಳೆಯರಿಗೆ ರಾಜಕೀಯ ಹಾಗು ಆಡಳಿತ ೇತ್ರಗಳಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ದಿಕ್ಕಿನಲ್ಲಿ ಮಹತ್ವ ಮೈಲುಗಲ್ಲು ಆಗಿದೆ. ಕೇಂದ್ರ ಸರ್ಕಾರವು ಈ ಅದಿ ನಿಯಮದ ಮೂಲಕ ಮಹಿಳೆಯರನ್ನು ನಿರ್ಧಾರಾತ್ಮಕ ಸ್ಥಾನಗಳಲ್ಲಿ ಸ್ಥಾಪಿಸಿ ದೇಶ ಮತ್ತು ರಾಜ್ಯಗಳ ನೀತಿ ನಿರೂಪಣೆಯಲ್ಲಿ ಅವರ ಧ್ವನಿಗೆ ನ್ಯಾಯ ಸಿಗುವಂತೆ ಮಾಡುವ ಸಂಕಲ್ಪವನ್ನು ವ್ಯಕ್ತಪಡಿಸಿದೆ. ಇದು ಮಹಿಳಾ ಸಬಲೀಕರಣದ ಪರಿರ್ಪೂಣ ರೂಪವಾಗಿದ್ದು, ಸಮಾನತೆ, ನ್ಯಾಯ ಮತ್ತು ಸ್ವಾಭಿಮಾನವನ್ನು ಪ್ರತಿಪಾದಿಸುವ ಧಿಕ್ಕಿನಲ್ಲಿ ಒಂದು ಪ್ರಗತಿಪರ ಚಳುವಳಿಯಾಗಿದೆ. ಸಾಮಾಜಿಕ, ಆಥಿರ್ಕ ಮತ್ತು ರಾಜಕೀಯ ೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಿ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಪ್ರಮುಖ ಶಕ್ತಿಯಾಗಬೇಕು ಎಂಬ ಉದ್ದೇಶದಿಂದ ರೂಪುಗೊಂಡ ಈ ಯೋಜನೆ ಭವಿಷ್ಯದ ಭಾರತವನ್ನು ಇನ್ನಷ್ಟು ಶಕ್ತಿಶಾಲಿಯಾಗಿ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ಎಂ. ಎಂ. ಹಿರೇಮಠ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net