ವಿಶೇಷ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ರಾಧಾ ಮಣ್ಣೂರ

 ಗದಗ ಭುವನೇಶ್ವರಿ ವಿಶೇಷ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮನ್ನು ರಾಧಾ ಮಣ್ಣೂರು ಉದ್ಘಾಟಿಸಿದರು. ಶ್ರೀದೇವಿ ಎಸ್​.ಎನ್​, ಮಂಜುನಾಥ ಹದ್ದಣ್ಣವರ, ಗಗನ ರಡ್ಡೇರ, ಪ್ರಭಾವತಿ ರಡ್ಡೇರ, ನಜುಂಡ, ಶಂಕ್ರಮ್ಮ, ಶಾಂತಮ್ಮಾ, ವಿಶೇಷ ಮಕ್ಕಳು ಇದ್ದರು.
ಗದಗ ಭುವನೇಶ್ವರಿ ವಿಶೇಷ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮನ್ನು ರಾಧಾ ಮಣ್ಣೂರು ಉದ್ಘಾಟಿಸಿದರು. ಶ್ರೀದೇವಿ ಎಸ್​.ಎನ್​, ಮಂಜುನಾಥ ಹದ್ದಣ್ಣವರ, ಗಗನ ರಡ್ಡೇರ, ಪ್ರಭಾವತಿ ರಡ್ಡೇರ, ನಜುಂಡ, ಶಂಕ್ರಮ್ಮ, ಶಾಂತಮ್ಮಾ, ವಿಶೇಷ ಮಕ್ಕಳು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಅತ್ಯಂತ ಕಷ್ಟಕರವಾದ ಸೇವಾ ಕಾರ್ಯವನ್ನು ಈ ಸಂಸ್ಥೆಯು ಆಯ್ಕೆ ಮಾಡಿಕೊಂಡು ವಿಶೇಷ ಮಕ್ಕಳಿಗೆ ಸೂಕ್ತವಾದ ಅವಕಾಶಗಳನ್ನು ಕಲ್ಪಿಸಿ, ಅವರವರ ಸಾಮರ್ಥ್ಯಗೆ ತಕ್ಕಂತೆ ತರಬೇತಿ ನೀಡಿ, ಸಮಾಜದ ಮುಖ್ಯವಾಹಿನಿಗೆ ತರುತ್ತಿರುವುದರೊಂದಿಗೆ ಸಂಸ್ಕಾರವನ್ನು ನೀಡುತ್ತಿರುವ ವಿಶ್ವ ಕಲ್ಯಾಣ ಸಂಸ್ಥೆಯ ಸೇವಾ ಕಾರ್ಯ ಶ್ಲಾನೀಯವಾಗಿದೆ. ವಿಶೇಷ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ ಎಂದು ಜಿಲ್ಲಾ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಮಣ್ಣೂರವರು ಹೇಳಿದರು.
ನಗರದ ವಿಶ್ವ ಕಲ್ಯಾಣ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿರುವ ವಿಶೇಷ ಚೇತನರಲ್ಲಿ ಅದ್ಬುತವಾದ ಶಕ್ತಿ ಇರುತ್ತದೆ. ಅವರನ್ನು ವೈಜ್ಞಾನಿಕವಾಗಿ ಶಿಣ ಹಾಗೂ ತರಬೇತಿ ನೀಡಿ, ಸಮಾಜದಲ್ಲಿ ಸ್ವಾವಲಂಬಿ ಜೀವನವನ್ನು ನಡೆಸುವ ಹಾಗೆ ಮಾಡಿ, ಅವರಲ್ಲಿರುವ ಸೂಪ್ತವಾದ ಶಕ್ತಿಯನ್ನು ಹೊರತರುವ ಈ ಸೇವಾ ಕಾರ್ಯ ದೇವರು ಮೆಚ್ಚುವಂತದ್ದಾಗಿದೆ. ಸ್ಪಷ್ಟ, ದಿಟ್ಟವಾದ ನಿಲುವಿನೊಂದಿಗೆ ಕೊನೆಯ ಹಂತದವರೆಗೂ ಎಲ್ಲ ರೀತಿಯ ಅಡೆತಡೆಗಳನ್ನು ತೊಂದರೆಗಳನ್ನು ಮೆಟ್ಟಿನಿಂತು ಇಂತಹ ಸೇವಾ ಕಾರ್ಯ ಮಾಡಬೇಕು ಎಂದರು.
ಶ್ರೀದೇವಿ ಎಸ್​.ಎನ್​, ಮಂಜುನಾಥ ಹದ್ದಣ್ಣವರ, ಗಗನ ರಡ್ಡೇರ, ಪ್ರಭಾವತಿ ರಡ್ಡೇರ, ನಜುಂಡ, ಶಂಕ್ರಮ್ಮ, ಶಾಂತಮ್ಮಾ, ವಿಶೇಷ ಮಕ್ಕಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net