ಬೇಸಿಗೆ ಹೆಚ್ಚಾಗುತ್ತಿದ್ದಂತೆಯೇ ಮನುಷ್ಯರು ತಂಪು ಪಾನಿಯ, ಫ್ರಿಡ್ಜ ನೀರಿಗೆ ಮೊರೆ ಹೋಗುತ್ತಾರೆ. ಮನೆಗೆ ಕೂಲರ್, ಹವಾ ನಿಯಂತ್ರಕ ವಸ್ತುಗಳು ಅಗತ್ಯ ವಸ್ತುಗಳಾಗಿ ಬಿಡುತ್ತವೆ. ಜ್ಯೂಸ್ ಮನುಷ್ಯನ ದಿನನಿತ್ಯದ ಆಹಾರ ಪದ್ಧತಿಗೆ ಸೇರ್ಪಡೆಗೊಳ್ಳುತ್ತದೆ. ಅದೇ ರೀತಿ ಸುಸ್ತು, ನಿರ್ಜಲೀಕರಣವು ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಆದರೆ, ಬೇಸಿಗೆ ಬಿಸಿಲಿಗೆ ಮೂಕ ಪ್ರಾಣಿಗಳ ಕಷ್ಟು ನೋವು ಅರಿತು ನಡೆಯುವ ಮಾನವೀಯತೆ ಮರೆಯಾಗುತ್ತಿರುವುದು ಸತ್ಯ. ಜಿಲ್ಲೆಯಲ್ಲಿ ಮೂಕ ಜೀವಿಗಳು ಬಿಸಿಲಿನ ಹೊಡೆತಕ್ಕೆ ತತ್ತರಿಸಿ ಹೋಗಿವೆ.