ಬೇಸಿಗೆ ಪೂರ್ವದಲ್ಲಿ ಬಿಸಿಲು ಹೆಚ್ಚಾದಂತೆ ನೀರಿನ ಸಮಸ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಮೂಲಗಳ ಪ್ರಕಾರ ಪ್ರತಿವರ್ಷಕ್ಕಿಂತಲೂ ಈ ಬಾರಿ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಅಧಿಕಗೊಳ್ಳುವ ಸಾಧ್ಯತೆ ಇದ್ದು, ಮುಂಜಾಗ್ರತವಾಗಿ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳ ಬಗ್ಗೆ ಪರಿಶೀಲನೆ ಮತ್ತು ನೀರು ಪೂರೈಕೆ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸಬೇಕಿದೆ. ಅದರಲ್ಲೂ ಜಿಲ್ಲೆಯ 76 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸುವ ಸಾಧ್ಯತೆ ಇದೆ. ತುಂಗಭದ್ರ ಮತ್ತು ಮಲಪ್ರಭಾ ಕಾಲುವೆ ಮೂಲಕ ಗ್ರಾಮೀಣ ಭಾಗಕ್ಕೆ ನೀರು ಹರಿದರೂ ಸಹ ಗ್ರಾಮಿಣ ಕುಡಿಯುವ ನೀರು ವಿಭಾಗದಿಂದ ಜಾರಿಯಾದ ಯೋಜನೆಗಳು ತಲುಪದ ಮತ್ತು ಕಾಲುವೆ ಮತ್ತು ನೀರಿನ ಮೂಲಗಳಿಂದ ದೂರ ಇರುವ ಹಾಗೂ ಕೊಳುವೆ ಬಾವಿ ಸಂರ್ಪೂಣ ಬತ್ತಿದ 76 ಹಳ್ಳಿಗಳಲ್ಲಿ ಜಲಾಮ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದು ಬಂದಿದೆ.
ತುಂಗಭದ್ರ ಮತ್ತು ಮಲಪ್ರಭಾ ನದಿ ಮೂಲಗಳಿಂದ ಜಿಲ್ಲೆಯ ಗ್ರಾಮಿಣ ಭಾಗದ 342 ಹಳ್ಳಿಗಳಿಗೆ ನೀರು ಪೂರೈಸುವ ಜವಾಬ್ದಾರಿಯನ್ನು ತಹಲ್ ಮತ್ತು ಎಲ್ ಅಂಡ್ ಟಿ ಖಾಸಗಿ ಕಂಪನಿಗಳು ವಹಿಸಿಕೊಂಡಿವೆ. ರೋಣ ಮತ್ತು ನರಗುಂದ ಭಾಗದ ಹಳ್ಳಿಗಳಿಗೆ ತಹಲ್ ಖಾಸಗಿ ಕಂಪನಿ ನೀರು ಪೂರೈಕೆ ಮತ್ತು ಪೈಪ್ಲೈನ್ ಜವಾಬ್ದಾರಿ ವಹಿಸಿಕೊಂಡಿದ್ದು, ಗದಗ, ಮುಂಡರಗಿ ಹಾಗೂ ಶಿರಹಟ್ಟಿ ಭಾಗದ ಹಳ್ಳಿಗಳಿಗೆ ಎಲ್ ಅಂಡ್ ಟಿ ಕಂಪನಿ ನೀರು ಪೂರೈಕೆ ಜವಾಬ್ದಾರಿ ವಹಿಸಿಕೊಂಡಿದೆ. ಜಲಾಮ ಎದುರಾಗಬಹುದಾದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕೈಮೀರುವ ಮೊದಲೆ ಸಭೆ ನಡೆಸಬೇಕಾದ ಅನಿವಾರ್ಯತೆ ಇದೆ.
ರೊಣ ಮತ್ತು ನರಗುಂದ ತಾಲೂಕಿನ 123 ಹಳ್ಳಿ, 129 ಜನವಸತಿ ಪ್ರದೇಶಗಳು ಒಳಗೊಳ್ಳುತ್ತವೆ. ಈ ಭಾಗದ ಹಳ್ಳಿಗಳಿಗೆ ಸವದತ್ತಿಯ ರೇಣುಕಾ ಜಲಾಶಯದಿಂದ ನೀರು ಪೂರೈಸಲಾಗುತ್ತಿದೆ. ಪ್ರತಿನಿತ್ಯ 26 ಮಿಲಿಯನ್ ಲೀಟರ್(ಎಂಎಲ್ಡಿ) ನೀರು ಅಗತ್ಯವಿದ್ದು, ಪ್ರಸ್ತುತ 16 ರಿಂದ 20 ಎಂಎಲ್ಡಿ ನೀರು ಪೂರೈಕೆ ಆಗುತ್ತಿದೆ. ನರಗುಂದ ತಾಲೂಕಿನಲ್ಲಿ 18 ಜನವಸತಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗವಹುದು. ರೋಣ ತಾಲೂಕಿನಲ್ಲಿ ಕಾಲುವೆ ಮೂಲಕ ಕೆರೆಗಳಿಗೆ ನೀರು ತುಂಬಿಸಿದ್ದರಿಂದ ನೀರಿನ ಸಮಸ್ಯೆ ಕಷ್ಟಸಾಧ್ಯ. ನೀರು ಸರಬರಾಜು ಮತ್ತು ನಿರ್ವಹಣೆಯನ್ನು ತಹಲ್ ಖಾಸಗಿ ಕಂಪನಿ ವಹಿಸಿಕೊಂಡಿದೆ. ಸಮಸ್ಯೆ ಉದ್ಭವಿಸುವ ಮೊದಲೇ ಕ್ರಮ ಕೈಗೊಳ್ಳುವ ಅವಶ್ಯವಿದೆ.
ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ 194 ಹಳ್ಳಿ, 213 ಜನವಸತಿ ಪ್ರದೇಶಗಳು ಒಳ್ಳಗೊಳ್ಳುತ್ತವೆ. ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರು ಬ್ಯಾರೇಜ್ ಮೂಲಕ ನೀರು ಪೂರೈಸಲಾಗುತ್ತಿದೆ. ಎಲ್ ಅಂಡ್ ಟಿ ಕಂಪನಿ ನೀರು ಪೂರೈಕೆ ಮತ್ತು ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದೆ. 40 ಎಂಎಲ್ಡಿ ನೀರಿನ ಅವಶ್ಯಕತೆ ಇದ್ದು, ಈಗ ಅಂದಾಜು 30 ಎಂಎಲ್ಡಿ ನೀರು ಲಭ್ಯವಿದೆ. ಮುಂಡರಗಿಯ 7, ಗದಗ ತಾಲೂಕಿನ 14 ಹಾಗೂ ಶಿರಹಟ್ಟಿ ತಾಲುಕಿನ 16 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಬಹುದು. ಮೂರು ತಾಲೂಕಿನ ಗ್ರಾಮಗಳ ಒಟ್ಟು ಜನಸಂಖ್ಯೆ 4.74 ಲಕ್ಷ ಇದೆ.
ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಹಳ್ಳಿಗಳು:
* ಗದಗ: ಎಚ್.ಎಸ್. ವೆಂಕಟಾಪುರು, ನಾಗಸಮುದ್ರ, ಸೊರಟೂರು, ಅಡವಿಸೋಮಾಪುರ, ಎಲಿಶಿರೂರು, ತಿಮ್ಮಾಪುರ, ಹಿರೇಹಂದಿಗೊಳ, ಕೋಟಮುಚಗಿ,ಕದಡಿ, ಗರಗವಾಡ, ಚಿಂಚಲಿ, ಸಾರಿಗೆ ನಗರ, ಲಿಂಗದಾಳ, ಹೊಂಬಳ.
ಗ್ರಾಮೀಣ ಭಾಗದ ನೀರು ಸರಬರಾಜು ವಿಷಯದಲ್ಲಿ ಇಲಾಖೆಗಳು ನಿರ್ಲಕ್ಷ$್ಯ ವಹಿಸಬಾರದು. ಪ್ರಸಕ್ತ ಸಾಲಿನಲ್ಲಿ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದ್ದು, ಸಮಪರ್ಕ ನೀರು ಪೂರೈಸಲು ಜಿಲ್ಲಾಡಳಿತ ಮತ್ತು ಕುಡಿಯುವ ನೀರು ಸರಬರಾಜು ವಿಭಾಗದ ಕ್ರಮ ಕೈಗೊಳ್ಳಬೇಕು.