ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಭೆ

ಜಿಲ್ಲಾಡಳಿತ ಸಭಾಂಗಣದಲ್ಲಿ ಬುಧವಾರ ಮತದಾರ ಪಟ್ಟಿ ಪರಿಷ್ಕರಣೆ ಕುರಿತು ಸಭೆ ಜರುಗಿತು. ದುರಗೇಶ ಕೆ.ಆರ್​., ಸಂತೋಷ ಹಿರೇಮಠ, ಗಂಗಪ್ಪ ಎಂ, ಬಸನಗೌಡ ಕೋಟೂರ, ಎಸ್​. ಡಿ. ಪಾಟೀಲ ಇತರರು ಇದ್ದರು.
ಜಿಲ್ಲಾಡಳಿತ ಸಭಾಂಗಣದಲ್ಲಿ ಬುಧವಾರ ಮತದಾರ ಪಟ್ಟಿ ಪರಿಷ್ಕರಣೆ ಕುರಿತು ಸಭೆ ಜರುಗಿತು. ದುರಗೇಶ ಕೆ.ಆರ್​., ಸಂತೋಷ ಹಿರೇಮಠ, ಗಂಗಪ್ಪ ಎಂ, ಬಸನಗೌಡ ಕೋಟೂರ, ಎಸ್​. ಡಿ. ಪಾಟೀಲ ಇತರರು ಇದ್ದರು.
Published on
ಪಾರದರ್ಶಕ ಮತದಾರರ ಪಟ್ಟಿ ತಯಾರಿಕೆಗೆ ಬಿಎಲ್​ಓಗಳ ಪಾತ್ರ ಪ್ರಮುಖ: ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ. ಆರ್​
ವಿಜಯವಾಣಿ ಸುದ್ದಿಜಾಲ ಗದಗ
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಪಾರದರ್ಶಕ ಮತದಾರರ ಪಟ್ಟಿ ತಯಾರಿಕೆಗೆ ಬಿಎಲ್​ಓಗಳ ಪಾತ್ರ ಪ್ರಮುಖವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್​. ಹೇಳಿದರು.
ನಗರದ ಜಿಲ್ಲಾಡಳಿತ ಭವನದದಲ್ಲಿ ಬುಧವಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮ್ಯಾಪಿಂಗ್​ ಕುರಿತು ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗವು ಕರ್ನಾಟಕ ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಮೆ 14 ರಂದು ವೇಳಾ ಪಟ್ಟಿ ಪ್ರಕಟಿಸಿದೆ. ಇಲಾಖೆ ತಂತ್ರಾಂಶದಲ್ಲಿ ಮತದಾರ ಪಟ್ಟಿ ದತ್ತಾಂಶವು ಫ್ರೀಜ್​ ಆಗುವುದರಿಂದ ಜಿಲ್ಲೆಗೆ ಸಂಬಂಧಿಸಿದ 2002 ರ ಮತದಾರರ ಪಟ್ಟಿಗೆ 2025 ರ ಮತದಾರರ ಪಟ್ಟಿಯ ಮ್ಯಾಪಿಂಗ್​ ಕಾರ್ಯವನ್ನು ರ್ಪೂಣ ಗೊಳಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಬಿಎಲ್​ಓಗಳು ವಿಶೇಷ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದಂತೆ ಮನೆ ಮನೆಗೆ ಭೇಟಿ ನೀಡಿ ಸಮಗ್ರ ವಿಷಯಗಳ ಪರಿಶೀಲನೆ ನಡೆಸಬೇಕು. ಸ್ಥಳಾಂತರಗೊಂಡ, ಮರಣ ಹೊಂದಿದ ಮತದಾರರ ಹೆಸರುಗಳ ಕಡೆ ವಿಶೇಷ ಗಮನ ಹರಿಸಬೇಕು. ಸಾಹಿತಿ, ಕ್ರೀಡಾಪಟು, ಪ್ರಶಸ್ತಿ ವಿಜೇತರು, ಎಂಪಿ, ಎಂಎಲ್​ಎ, ತಾಪಂ. ಮಾಜಿ ಅಧ್ಯ, ಗ್ರಾಪಂ. ಸದಸ್ಯರು ಹೀಗೆ ವಿಐಪಿ ಹಾಗೂ ವಿವಿಐಪಿ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಬಾರದು. ಈ ಕಾರ್ಯದಲ್ಲಿ ಯಾವುದೇ ಲೋಪದೋಷ ಆಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಮತ್ತು ಬಿಎಲ್​ಓ ಗಳೊಂದಿಗೆ ಸಹಕರಿಸಿ ಕಾರ್ಯ ನಿರ್ವಹಿಸಬೇಕು ಎಂದರು.
ಬಾಕಿ ಉಳಿದಿರುವ ಮ್ಯಾಪಿಂಗ್​ ಕಾರ್ಯವನ್ನು ಶ್ರೀ ರ್ಪೂಣಗೊಳಿಸಬೇಕು.ಜಿಲ್ಲೆಯ ಮತದಾರರ ಪಟ್ಟಿ ಸಮಗ್ರ ಪರಿಷ್ಕಣೆ ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್​ ಕೆ.ಆರ್​. ತಿಳಿಸಿದರು.
ಚುನಾವಣಾ ತಹಶೀಲ್ದಾರ ಸಂತೋಷ ಹಿರೇಮಠ, ಜಿಲ್ಲಾ ಮಟ್ಟದ ಮಾಸ್ಟರ್​ ತರಬೇತುದಾರ ಬಿ.ಜಿ.ಗಿರಿತಮ್ಮಣ್ಣವರ ಮಾತನಾಡಿ ಬಿಎಲ್​ಓಗಳು ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ನಿರ್ವಹಿಸಬೇಕಾದ ಕರ್ತವ್ಯಗಳನ್ನು ವಿವರಿಸಿದರು.
ಉಪವಿಭಾಗಾಧಿಕಾರಿ ಗಂಗಪ್ಪ ಎಂ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಎಸ್​. ಡಿ. ಪಾಟೀಲ, ಜಿಲ್ಲೆಯ ಎಲ್ಲ ಸಹಾಯಕ ಮತದಾರರ ನೊಂದಣಾಧಿಕಾರಿಗಳು ಹಾಗೂ ತಹಸೀಲ್ದಾರರು, ಬಿಎಲ್​ಓಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net