ಉಭಯ ಗುರುಗಳು ವೀರೇಶ್ವರ ಪುಣ್ಯಾಶ್ರಮದ ಕಲ್ಪವೃ ಆಗಿದ್ದಾರೆ: ತೋಂಟದ ಶ್ರೀಗಳು

 ಗದಗ ವಿರೇಶ್ವರ ಪುಣ್ಯಾಶ್ರಮದಲ್ಲಿ ಏರ್ಪಡಿಸಿದ್ದ ಉಭಯ ಶ್ರೀಗಳ ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಮಠದ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ಬಸವರಾಜ ಬೊಮ್ಮಾಯಿ, ಪ್ರಹ್ಲಾದ ಜೋಶಿ, ತೋಂಟದಾರ್ಯ ಶ್ರೀಗಳು, ಎಸ್​.ವಿ. ಸಂಕನೂರು, ನಿಂಗಪ್ಪ  ಕೆಂಗಾರ, ಪರಶುರಾಮ ಕಟ್ಟಿಮನಿ, ವಿಶಾಲ ಪವಾರ, ಅರುಣ ಕಟ್ಟಿಮನಿ, ಮಂಜುನಾಥ ಎಸ್​. ಪಿ., ಇತರರು ಇದ್ದರು.
ಗದಗ ವಿರೇಶ್ವರ ಪುಣ್ಯಾಶ್ರಮದಲ್ಲಿ ಏರ್ಪಡಿಸಿದ್ದ ಉಭಯ ಶ್ರೀಗಳ ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಮಠದ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ಬಸವರಾಜ ಬೊಮ್ಮಾಯಿ, ಪ್ರಹ್ಲಾದ ಜೋಶಿ, ತೋಂಟದಾರ್ಯ ಶ್ರೀಗಳು, ಎಸ್​.ವಿ. ಸಂಕನೂರು, ನಿಂಗಪ್ಪ ಕೆಂಗಾರ, ಪರಶುರಾಮ ಕಟ್ಟಿಮನಿ, ವಿಶಾಲ ಪವಾರ, ಅರುಣ ಕಟ್ಟಿಮನಿ, ಮಂಜುನಾಥ ಎಸ್​. ಪಿ., ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಉಭಯ ಶ್ರೀಗಳು ತಮ್ಮ ಬದುಕನ್ನು ಅಂಧ ಅನಾಥರು, ಬಡವರಿಗಾಗಿ ಸವೆದು ತಮ್ಮ ಜೀವನ ಸಾರ್ಥಕ ಪಡೆದುಕೊಂಡರು. ಅಂತಹ ಮಹಾಪುರುಷರನ್ನು ಸಮಾಜವು ಸದಾ ಸ್ಮರಿಸುತ್ತದೆ ಎಂದು ತೋಂದಾರ್ಯ ಮಠದ ಸಿದ್ದರಾಮ ಶ್ರೀಗಳು ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂಚಾರಿ ಗವಾಯಿಗಳ 82ನೇ ಹಾಗೂ ಪಂ. ಪುಟ್ಟರಾಜ ಗವಾಯಿಗಳವರ 16ನೇ ಪುಣ್ಯಸ್ಮರಣೋತ್ಸವ ಮತ್ತು ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಶಿವಾನುಭವ ಗೋಷ್ಠಿಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಾಣಿರ್ಕ ಯುಗದ ಮಹಾಪುರುಷರಾದ ಹಾನಗಲ್​ ಕುಮಾರೇಶ್ವರ ಚೈತನ್ಯ ಶಕ್ತಿಯಿಂದ ಪಂಚಾರಿ ಗವಾಯಿಗಳರವರನ್ನು ಗುರುತಿಸಿ ಅವರನ್ನು ಗಾನಯೋಗಿಯನ್ನಾಗಿ ಮಾಡಿದ್ದಾರೆ. ಪುಟ್ಟರಾಜ ಗವಾಯಿಗಳು ಗುರುಗಳ ಮಾರ್ಗದರ್ಶನದಲ್ಲಿ ದಾರಿ ದೀಪವಾಗಿ ನಡೆದು ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ. ದೇಶದ ಅನೇಕ ಕಡೆಗಳಲ್ಲಿ ಜಾತ್ರೆ ನಡೆಯುತ್ತದೆ. ಆದರೆ, ಸಂಗೀತದ ಜಾತ್ರೆ ನಡೆಯುವುದು ಗದುಗಿನಲ್ಲಿ ಮಾತ್ರ. ಆಶ್ರಮದ ಕಲಾವಿದರು ತಮ್ಮ ಬದುಕನ್ನು ಕಟ್ಟಿಕೊಂಡು ಪ್ರತಿ ವರ್ಷ ಇಲ್ಲಿ ಬಂದು ಸೇವೆ ಸಲ್ಲಿಸುತ್ತಿರುವುದು ಶ್ಲಾನೀಯ. ಇಂತಹ ಅನುಭವ ಕಾಣಲು ಇಲ್ಲಿ ಮಾತ್ರ ಸಾಧ್ಯ ಎಂದು ಶ್ರೀಗಳು ಹೇಳಿದರು
ಪುಟ್ಟರಾಜ ಗವಾಯಿಗಳು ಶಿವಯೋಗ ಸಾಧನೆ ಮಾಡಿ ಶಿವಯೋಗಿ ಆಗಿದ್ದಾರೆ. ಶಿವನ ಸ್ವರೂಪವೇ ಶಿವಯೋಗಿ ಪುಟ್ಟರಾಜ ಗವಾಯಿಗಳು. ಅಂಧ ಅನಾಥರ ಆಶಾ ದೀಪವಾಗಿ ಸಿದ್ಧಿಯ ತುತ್ತ ತುದಿಯನ್ನು ತಲುಪಿದ್ದಾರೆ. ಅಂತಹ ಮಹಾತ್ಮರನ್ನು ನಿತ್ಯವೂ ಸ್ಮರಿಸಬೇಕು. ಅವರು ಜಾತ್ಯಾತಿತವಾಗಿ, ಪಾತೀತವಾಗಿರುವ ಈ ಮಠದಲ್ಲಿ ಮಹಾತ್ಮರಿಗೆ ನೋವು ತರಿಸುವ ಕೆಲಸ ಯಾರು ಮಾಡಬಾರದು ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಈ ಪುಣ್ಯೇತ್ರದ ಮಣ್ಣಿಗೆ ಭಕ್ತಿಯ ಲೇಪನ ಇದೆ. ಸಂಗೀತ ಪರಂಪರೆ ಹೊಂದಿದ ಅತ್ಯಂತ ಪವಿತ್ರವಾದ ಪುಣ್ಯೇತ್ರ ಇದಾಗಿದೆ. ಕಣ್ಣು ಇದ್ದವರು ಮಾಡಲಾರದಂತಹ ಕೆಲಸವನ್ನು ಉಭಯ ಶ್ರೀಗಳು ಮಾಡಿದ್ದಾರೆ. ಶಿವನ ಆರಾಧನೆ ಮಾಡಿ ಶಿವಯೋಗಿ ಆದ ಶ್ರೀಗಳು ಸ್ವತಃ ಅಂಧರಾದರೂ ಜಗತ್ತಿಗೆ ಜ್ಞಾನದ ಜ್ಯೋತಿಯನ್ನು ಬೆಳಗಿಸಿ ವಿಭೂತಿ ಪುರುಷರಾಗಿದ್ದಾರೆ. ಅವರ ಸ್ಮಾರಕವನ್ನು ರ್ಪೂಣಗೊಳಿಸಲು ರಾಜ್ಯ ಮತ್ತು ಕೇಂದ್ರದಿಂದ ಸಹಕಾರ ನೀಡಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಇಂದಿನ ಆಧುನಿಕ ಹಾಗೂ ವಸ್ತುಪ್ರಧಾನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಡಿಮೆ ಆಗುತ್ತಿದ್ದು, ಪಾಪ ಪುಣ್ಯಗಳ ತಕ್ಕಡಿ ಮಾಯವಾಗಿ ಎಲ್ಲವನ್ನೂ ಲಾಭ ನಷ್ಟದ ತಕ್ಕಡಿಯಲ್ಲಿ ತೂಗುವ ಪ್ರವೃತ್ತಿ ಹೆಚ್ಚಾಗುತ್ತಿದೆ ಉಭಯ ಮಹಾಪುರುಷರು ತಮ್ಮ ಜೀವನದುದ್ದಕ್ಕೂ ಸಾತ್ವಿಕ, ಸದ್ಭಾವನೆ ಹಾಗೂ ಸಾರ್ಥಕತೆಯ ಸಂದೇಶವನ್ನು ಸಾರಿದ್ದಾರೆ. ಅವರ ಪುಣ್ಯಸ್ಮರಣೆ ಮಾಡುವುದು ನಮ್ಮ ಪರಂಪರೆಯಾಗಿದೆ ಎಂದರು.
ಜಗತ್ತಿನಲ್ಲಿ ಸಂಗೀತದ ಮೂಲಕ ಸಾವಿರಾರು ಅಂಧ ಹಾಗೂ ಅಸಹಾಯಕ ಮಕ್ಕಳಿಗೆ ಆಶ್ರಯ ನೀಡಿ, ಅವರ ಬದುಕನ್ನು ಉಜ್ವಲಗೊಳಿಸಿದ ಕೀತಿರ್ ಪಂ. ಪುಟ್ಟರಾಜ ಗವಾಯಿಗಳಿಗೆ ಸಲ್ಲುತ್ತದೆ. ಅವರ ಈ ಸಾಧನೆ ಮತ್ತು ಸೇವೆ ಇತಿಹಾಸದಲ್ಲಿ ಸದಾ ಅಮರವಾಗಿರುತ್ತದೆ. ಹಿಂದೆ ಸ್ಮಾರಕ ಭವನಕ್ಕಾಗಿ 5 ಕೋಟಿ ರೂ. ಮಂಜೂರು ಮಾಡಿದ್ದೆವು. ಆದರೆ, ಆ ಕೆಲಸ ಇನ್ನೂ ಸಂರ್ಪೂಣವಾಗಿ ಮುಗಿದಿಲ್ಲ. ಈ ಭವನದ ಕಾಮಗಾರಿಯನ್ನು ರ್ಪೂಣಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಂತದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ, ಸೂಕ್ತ ಯೋಜನೆ ರೂಪಿಸಿ, ಅಗತ್ಯವಿರುವ ಸಂರ್ಪೂಣ ನೆರವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಠದ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ವೇದಿಕೆ ಮೇಲೆ ಗುಳೇದಗುಡ್ಡ ಮುರುಘಾಮಠದ ಕಾಶೀನಾಥ ಶ್ರೀಗಳು, ಅಡ್ನೂರ ಬ್ರಹನ್ಮಠದ ಅಭಿನವ ಪಂಚಾರಿ ಶಿವಾಚಾರ್ಯ ಶ್ರೀಗಳು, ಡಾ. ಶರತ್​ಚಂದ್ರ ಶ್ರೀಗಳು, ಶ್ರೀಕಂಠ ಸ್ವಾಮಿಗಳು, ಕುಮಾರ ದೇವರು, ಅಡವೀಂದ್ರಮಠದ ಮಹೇಶ್ವರ ಸ್ವಾಮೀಜಿ, ಎಸ್​. ವಿ. ಸಂಕನೂರ, ನಿಂಗಪ್ಪ ಕೆಂಗಾರ, ಪರಶುರಾಮ ಕಟ್ಟಿಮನಿ, ವಿಶಾಲ ಪವಾರ, ಅರುಣ ಕಟ್ಟಿಮನಿ, ಮಂಜುನಾಥ ಎಸ್​. ಪಿ., ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net