ನಾಡಿನ ಸಹಸ್ರಾರು ಜನ ಅಂಧರಿಗೆ ಸಂಗೀತ ಶಿಣ ನೀಡುವ ಮೂಲಕ ಅಂಧರ ಬಾಳಿಗೆ ಬೆಳಕು ನೀಡಿರುವ ಲಿಂ.ಪಂಚಾರ ಗವಾಯಿಗಳು, ಲಿಂ. ಪಂ.ಪುಟ್ಟರಾಜ ಕವಿ ಗವಾಯಿಗಳು ಕಟ್ಟಿ ಬೆಳೆಸಿದ ವೀರೇಶ್ವರ ಪುಣ್ಯಾಶ್ರಮದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ನಡೆದಿರುವ ಅವ್ಯವಹಾರ, ಹಣಕಾಸು ರ್ದುಬಳಕೆ ಪ್ರಕರಣಕ್ಕೆ ಸಂಭಂಧಿಸಿದಂತೆ ಸರ್ಕಾರ ಕೂಡಲೇ ತನಿಖೆ ಮಾಡಬೇಕು ಎಂದು ಹಿಂದೂ ಸಂಟನೆಗಳ ಅಧ್ಯಕ್ಷ ರಾಜೂ ಖಾನಪ್ಪನವರ ಆಗ್ರಹಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ವೀರೇಶ್ವರ ಪುಣ್ಯಾಶ್ರಮದಲ್ಲಿ ಸಹಸ್ರಾರು ಅಂಧರು, ಅನಾಥ ಮಕ್ಕಳು ಸಂಗೀತ ಶಿಣ ಪಡೆದು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ವೀರೇಶ್ವರ ಪುಣ್ಯಾಶ್ರಮಕ್ಕೆ ನಾಡಿನಾದ್ಯಂತ ಅಸಂಖ್ಯಾತ ಭಕ್ತರಿದ್ದಾರೆ. ಭಕ್ತರು ಅಪಾರ ಪ್ರಮಾಣದಲ್ಲಿ ದವಸ ಧಾನ್ಯಗಳು, ಹಣವನ್ನು ದೇಣಿಗೆಯಾಗಿ ನೀಡುತ್ತಾರೆ. ಈ ಹಣ ಮತ್ತು ದವಸ ಧಾನ್ಯಗಳು ಸಮರ್ಪಕವಾಗಿ ಸದುಪಯೋಗವಾಗದೇ ರ್ದುಬಳಕೆ ಆಗುತ್ತಿದೆ ಎಂದು ಆರೋಪಿಸಿದರು.
ವೀರೇಶ್ವರ ಪುಣ್ಯಾಶ್ರಮಕ್ಕೆ ಯಾವದೇ ರೀತಿಯಿಂದಲೂ ಸಂಭಂಧವಿಲ್ಲದ ಅನ್ಯ ಕೋಮಿನ ದಂಪತಿಗಳು ಆಶ್ರಮದಲ್ಲಿ ತಮ್ಮದೇ ದರ್ಪ, ದರ್ಬಾರ ನಡೆಸುತ್ತಿದ್ದಾರೆ. ಆಶ್ರಮದಲ್ಲಿನ ಅಂಧ, ಅನಾಥ ಮಕ್ಕಳ ಮೇಲೆ ದೌರ್ಜನ್ಯ ನಡೆಸುವದು, ಆಶ್ರಮದ ವ್ಯವಹಾರಗಳಲ್ಲಿ ಮೂಗು ತೂರಿಸುವದು ನಡೆಸುತ್ತಿದ್ದಾರೆ. ಇವರ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕಾಗಿರುವ ಪೀಠಾಧೀಪತಿ ಕಲ್ಲಯ್ಯಜ್ಜನವರೂ ಸಹ ಅವರಿಗೆ ಸಾಥ ನೀಡುತ್ತಿರುವದು ವಿಪರ್ಯಾಸ. ಆಶ್ರಮದ ಕುಲಪತಿ ಕಲ್ಲಯ್ಯಜ್ಜನವರು ಆಶ್ರಮಕ್ಕೆ ಸಂಭಂಧವಿಲ್ಲದ ವ್ಯಕ್ತಿಗಳ ಅಕ್ರಮಕ್ಕೆ ಸಾಥ ನೀಡುತ್ತಿರುವದನ್ನು ನೋಡಿದರೆ ಅವರ ಮೇಲೆ ಯಾವದೋ ಕೆಲ ಶಕ್ತಿಗಳು ಒತ್ತಡ ಹೇರುತ್ತಿವೆ ಎಂಬ ಭಾವನೆ ಮೂಡುತ್ತಿದೆ. ಆಶ್ರಮಕ್ಕೆ ಸಂಭಂಧವಿಲ್ಲ ವ್ಯಕ್ತಿಗಳ ಹಸ್ತೇಪಕ್ಕೆ ಅೇಪಿಸಿದ ವೀರೇಶ್ವರ ಪುಣ್ಯಾಶ್ರಮದ ಟ್ರಸ್ಟಿಗಳ ವಿರುದ್ಧವೇ ಕಲ್ಲಯ್ಯಜ್ಜನವರಿಂದ ತಮ್ಮ ಜೀವಕ್ಕೆ ಭಯವಿದೆ. ತಮ್ಮ ಮೇಲೆ ಟ್ರಸ್ಟಿಗಳು ಯಾವದೇ ಣದಲ್ಲಿ ಹಲ್ಲೆ ಮಾಡಬಹುದು ಎಂದು ಹೇಳಿಕೆ ನೀಡಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆಯುತ್ತಿರುವ ಅವ್ಯವಹಾರ, ಅಧಿಕಾರ ರ್ದುಬಳಕೆ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಹೇಶ ರೋಖಡೆ, ಅರುಣ್ ಬಾವಿ, ಶಿವಯೋಗಿ ಹಿರೇಮಠ, ಮಹಾಬಲೇಶ್ವರ ಶೆಟ್ಟರ್, ಪಿ. ಎಸ್. ಕಾಳೆ, ಸತೀಶ್ ಕುಂಬಾರ, ಅಶೋಕ ಬಜಂತ್ರಿ, ವೆಂಕಟೇಶ್ ದೊಡ್ಡಮನಿ, ಕುಮಾರ ನಡಗೇರಿ, ಕುಮಾರ ಮಿಟ್ಟಿಮಠ, ಈರಪ್ಪ ಹೆಬಸೂರು, ಈರಣ್ಣ ಪೂಜಾರ, ಭರತ ಲದ್ದಿ, ಸಿದ್ದಪ್ಪ ಯಳವತ್ತಿ, ಪ್ರವಿಣ ಕರಿಬಷ್ಟಿ, ಬಸನಗೌಡ ಪೊಲೀಸ ಪಾಟೀಲ, ಹುಲುಗಪ್ಪ ವಾಲ್ಮೀಕಿ ಹಲವರು ಇದ್ದರು.