ಅಪ್ಪ ಎಂದರೆ ವಿಶ್ವಾಸ, ರಕ್ಷಣೆ: ಶ್ರೀನಿವಾಸ ಹುಯಿಲಗೋಳ.

ಗದಗ ವಿದ್ಯಾದಾನ ಸಮಿತಿಯಲ್ಲಿ ಅಪ್ಪಂದಿರ ದಿನಾಚರಣೆ ಆಚರಿಸಲಾಯಿತು. ಶ್ರೀನಿವಾಸ ಹುಯೀಲಗೋಳ, ಎಂ. ಆರ್​. ಡೊಳ್ಳಿನ, ದೀಪಾ ನಾಯರ, ರವಿಕುಮಾರ ನಾಗನೂರ, ಪಂಪಣ್ಣ ರೋಡ್ಡಾನವರ, ವೀಣಾ ಹುಬ್ಬಳ್ಳಿ ಹಲವರು ಇದ್ದರು.
ಗದಗ ವಿದ್ಯಾದಾನ ಸಮಿತಿಯಲ್ಲಿ ಅಪ್ಪಂದಿರ ದಿನಾಚರಣೆ ಆಚರಿಸಲಾಯಿತು. ಶ್ರೀನಿವಾಸ ಹುಯೀಲಗೋಳ, ಎಂ. ಆರ್​. ಡೊಳ್ಳಿನ, ದೀಪಾ ನಾಯರ, ರವಿಕುಮಾರ ನಾಗನೂರ, ಪಂಪಣ್ಣ ರೋಡ್ಡಾನವರ, ವೀಣಾ ಹುಬ್ಬಳ್ಳಿ ಹಲವರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ನಗರದ ವಿದ್ಯಾದಾನ ಸಮಿತಿಯಯಲ್ಲಿ ಸೋಮವಾರ ವತಿಯಿಂದ ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ಅಪ್ಪ ಎಂದರೆ ವಿಶ್ವಾಸ , ಭರವಸೆ ಹಾಗೂ ರಕ್ಷಣೆ. ಅಪ್ಪ ಎಂದರೆ ಆಕಾಶ. ಅಮ್ಮ ಎಂದರೆ ಪ್ರೀತಿ ಎಂದೆ ವ್ಯಾಖ್ಯಾನಿಸಲಾಗುವ ಈ ಸಂಬಂಧದ ಬಗ್ಗೆ ಹೇಳುವುದು ಕಷ್ಟವಾದರೂ ಪ್ರತಿ ಮಗು ಅಪ್ಪನೊಂದಿಗೆ ಹೊಂದಿರುವ ಬಾಂಧವ್ಯವನ್ನು ಅನುಭವಿಸಿಯೇ ಬೆಳೆಯಬೇಕು. ಅದು ಮಕ್ಕಳ ಏಳಿಗೆಯಲ್ಲಿ ಪ್ರತಿಫಲನವಾಗುತ್ತದೆ. ತಾಯಿಯೊಂದಿಗೆ ನಕ್ಕು ನಲಿಯುವ ಮಕ್ಕಳು ತಂದೆಯಿಂದ ಅನತಿ ದೂರದಲ್ಲಿ ನಿಂತು ಆಜ್ಞೆಗಳನ್ನು ಪಾಲಿಸುತತವೆ. ಅವಶ್ಯಕತೆಗಳು ಬಂದಾಗ ಹಿಂಜರಿಯುತ್ತಲೇ ಅಪ್ಪನಿಗೆ ಹೇಳುತ್ತಿದ್ದ ಮಕ್ಕಳು ಅಪ್ಪನ ಮಾತುಗಳನ್ನು ಮೀರದೆ ಆ ಸಂಬಂಧಕ್ಕೆ ಒಂದು ಗೌರವ ತಂದು ಕೊಟ್ಟಿರುತ್ತಾರೆ. ಇದು ಅಪ್ಪ ಅಮ್ಮನ ಬಗ್ಗೆ ಇರಬೇಕಾದ ನಿಜವಾದ ಪ್ರೀತಿ ಎಂದರು.
ಬದಲಾದ ಕಾಲಟ್ಟದಲ್ಲಿ ವಯಸ್ಸಾದ ತಂದೆ ತಾಯಿಗಳನ್ನು ಗೌರವದಿಂದ ಕಂಡು ಪ್ರೀತಿಯಿಂದ ನೋಡಿಕೊಂಡರೆ ನಾವೇ ಧನ್ಯರು. ಎಲ್ಲಾ ಮಕ್ಕಳಿಗೆ ಸೂಪರ್​ ಹೀರೋ ಎಂದರೆ ಅವರ ಅಪ್ಪ ಆಗಿದ್ದಾನೆ ಎಂದರು.
ಸಂಸ್ಥೆಯ ನಿರ್ದೇಶಕ ಪ್ರತಿಕ ಹುಯಿಲಗೋಳ ಮಾತನಾಡಿ, ಮಕ್ಕಳ ವಿಚಾರದಲ್ಲಿ ಅತಿಯಾದ ಶಿಸ್ತು ಬೇಡ, ಮಕ್ಕಳ ಸಂತಸದಲ್ಲಿ ಪಾಲ್ಗೊಳ್ಳುವುದನ್ನು ಕಲಿಯಬೇಕು. ಮಕ್ಕಳ ಕೆಲವು ಸಲಹೆಯನ್ನು ಕೇಳಬೇಕು. ಮಕ್ಕಳು ಕೇಳುವ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ನೀಡಬೇಕು. ಮಕ್ಕಳ ಮೇಲೆ ಸಿಟ್ಟಿನ ಪ್ರಯೋಗ ಮಾಡಬಾರದು ಎಂದರು.
ಅಪ್ಪಮದಿರ ದಿನಾಚರಣೆ ನಿಮಿತ್ಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಶಾಲೆಯ ಪ್ರಾಚಾರ್ಯ ಎಂ. ಆರ್​. ಡೊಳ್ಳಿನ, ಸಮನ್ವಯ ಶಿಕ್ಷಕಿ ದೀಪಾ ನಾಯರ, ರವಿಕುಮಾರ ನಾಗನೂರ, ಪಂಪಣ್ಣ ರೋಡ್ಡಾನವರ, ವೀಣಾ ಹುಬ್ಬಳ್ಳಿ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net