ವಿಬಿ ಜಿ ರಾಮ್ ಜಿಯ ಪ್ರಯೋಜನಗಳು, ನರೇಗಾ ಭ್ರಷ್ಟಾಚಾರದ ಬಗ್ಗೆ ಜನಜಾಗೃತಿ ಮೂಡಿಸಬೇಕು:ಬಸವರಾಜ ಬೊಮ್ಮಾಯಿ

Gadag
Gadag
Published on
ಮಹಾತ್ಮಾ ಗಾಂಧೀಜಿಯಿಂದ ರಾಮನನ್ನು ಬೇರ್ಪಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ:ಬಸವರಾಜ ಬೊಮ್ಮಾಯಿ
ಗದಗ: ಮಹಾತ್ಮಾ ಗಾಂಧಿಜಿ ದೇಶದ ಆತ್ಮ, ರಾಮ ಗಾಂಧೀಜಿ ಆತ್ಮ, ಅವರಿಬ್ಬರನ್ನು ಬೇರ್ಪಡಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ವಿಬಿ ಜಿ ರಾಮ್ ಜಿ ಯೋಜನೆಯಿಂದ ಆಗುವ ಪ್ರಯೋಜನಗಳು ಹಾಗೂ ನರೇಗಾ ಯೋಜನೆಯಲ್ಲಿ ಆಗುತ್ತಿರುವ ಭ್ರಷ್ಟಾಚಾರ ಮುಂದುವರೆಯಬೇಕಾ ಅಂತ ಬ್ಯಾನರ್ ಮಾಡಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಹಾಕಬೇಕು. ರಾಜ ಸರ್ಕಾರದ ರಾಜಶಕ್ತಿಯ ವಿರುದ್ದ ಜನಶಕ್ತಿಯ ಸಂಘರ್ಷ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 
ಇಂದು ಗದಗ ನಗರದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲೆಯ ವತಿಯಿಂದ ಏರ್ಪಡಿಸಿದ *ವಿಬಿ - ಜಿ - ರಾಮ್ - ಜಿ* ಯೋಜನೆಯ ಅನುಷ್ಠಾನ ಹಾಗೂ ಜನಜಾಗೃತಿ ಸಭೆಯನ್ನು  ಉದ್ಘಾಟಿಸಿ ಮಾತನಾಡಿದರು. 
ಮಹಾತ್ಮಾ ಗಾಂಧಿ ಈ ದೇಶದ ಆತ್ಮ. ‌ನಾವು ಗಾಂಧಿಜಿಯಿಂದ ಎರಡು ವಿಚಾರಗಳನ್ನು ಕಲಿತಿದ್ದೇವೆ. ಮೊದಲನೆಯದ್ದು ಸತ್ಯಮೇವ ಜಯತೆ, ಎರಡನೇಯದು ಸತ್ಯದ ಸಲುವಾಗಿ ಉಪವಾಸ ಇವೆರಡು ಗಾಂಧಿಜಿ ಯಿಂದ ಕಲಿತಿದ್ದೇವೆ. 
ಮಹಾತ್ಮಾ ಗಾಂಧಿ ಇಂದಿರಾ ಗಾಂಧಿಗೆ ಸಂಬಂಧ ಇಲ್ಲ. ಇಂದಿರಾ ಗಾಂಧಿ ಪತಿ ಫಿರೋಜ್ ಗ್ಯಾಂಡಿ, ಮಹಾತ್ಮಾ ಗಾಂಧಿ ಸ್ವಾತಂತ್ರ್ಯ ಬಂದಾಗ ಫಿರೋಜ್ ಗಾಂಧಿಯವರು ತಮ್ಮ ಗ್ಯಾಂಡಿಯನ್ನು ಗಾಂಧಿ ಮಾಡಿಕೊಂಡರು ಈಗ ಗಾಂಧಿ ಹೆಸರಲ್ಲಿ ಹೋರಾಟ ಮಾಡುತ್ತಿದ್ದಾರೆ. ಹೇಳೋದೊಂದು ಮಾಡೊದುಂದು ಕಾಂಗ್ರೆಸ್ಸಿನ ಎರಡು ಗುಣ.  ಕಲಿತಿರುವ ಗುಣ, ಹುಟ್ಟಿರುವ ಗುಣ, ಅಂತ ಇರುತ್ತವೆ, ಹುಟ್ಟಿರುವ ಗುಣ ಬದಲಿಸಲು ಆಗುವುದಿಲ್ಲ. ಸತ್ಯ ಮೇವ ಜಯತೆ ಅಂತ ಸತ್ಯ ಹೇಳಿಯೇ ಕಾಂಗ್ರೆಸ್ ಗೆ ಗೊತ್ರಿಲ್ಲ. ಯಾರ ಹೆಸರನ್ನು ಅಪಚಾರ ಮಾಡಿದ್ದಾರೆ. ಅವರ ಹೆಸರಿನಲ್ಲಿಯೇ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.
ಇಬ್ಬರು ವ್ಯಕ್ತಿಗಳನ್ನು ಕಾಂಗ್ರೆಸ್ ಅವರ ಹೆಸರು ಬಳಸಿಕೊಂಡು ಅವರ ಮಾತನ್ನು ಕೇಳಿಲ್ಲ. ಗಾಂಧಿಜಿ ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ವಿಸರ್ಜಿಸಿ ಅಂದರು ಅದನ್ನು ಮಾಡಲಿಲ್ಲ. ಅಂಬೇಡ್ಕರ್ ಜೀವಂತ ಇದ್ದಾಗ ಅವರನ್ನು ಸೋಲಿಸಿ ಮಂತ್ರಿ ಇದ್ದಾಗ ಅವರನ್ನು ರಾಜಿನಾಮೆ ಕೊಡಿಸಿದರು. ಅವರು ತೀರಿಕೊಂಡಾಗ ಮಣ್ಣು ಮಾಡಲು ದೆಹಲಿಯಲ್ಲಿ ಜಾಗ ಕೊಡಲಿಲ್ಲ. ದೆಹಲಿಯಲ್ಲಿ ಇಂದಿರಾ ಗಾಂಧಿ, ನೆಹರು, ರಾಜಿವ್ ಗಾಂಧಿ ಸಮಾಧಿ ಇದೆ. ಅಂಬೇಡ್ಕರ್  ಸಮಾಧಿ  ಇಲ್ಲ ಎಂದರು.
*ಝೀರೊ ಸಾಧನೆ ಸರ್ಕಾರ*
ಮಹಾತ್ಮಾ ಗಾಂಧಿ ಈ ದೇಶದ ಆತ್ಮ ಆದರೆ, ರಾಮ ಮಹಾತ್ಮಾ ಗಾಂಧಿ ಆತ್ಮ. ಅವರಿಬ್ಬರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಸರ್ಕಾರ ಅವರನ್ನು ಬೇರ್ಪಡಿಸಲು ಪ್ರಯತ್ನ ಮಾಡುತ್ತಿದೆ.
2013 ರಲ್ಲಿ ಯುಪಿಎ ಸರ್ಕಾರ ಇತ್ತು ಆಗ ನರೇಗಾ ಯೋಜನೆಗೆ 33 ಸಾವಿರ ಕೋಟಿ ಬಜೆಟ್ ಇತ್ತು. ಕಳೆದ ಬಜೆಟ್ ನಲ್ಲಿ 1.30. ಲಕ್ಷ ಕೋಟಿ ರೂ. ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಈ ವರ್ಷ ಬಜೆಟ್ ನಲ್ಲಿ 1.40 ಲಕ್ಷ ಕೋಟಿ ರೂ. ನಿಗದಿ ಮಾಡಿ, 75 ಸಾವಿರ ಕೋಟಿ ರೂ. ಮುಂದಿನ ವರ್ಷದ ಯೋಜನೆಗೆ 125 ದಿನಕ್ಕೆ ಇಟ್ಟು ಹಿಂದಿನ ಕೆಲಸದ ಬಾಕಿ 30 ಸಾವಿರ ಕೋಟಿ ಇಟ್ಟಿದೆ. ಈ ವರ್ಷವೂ 1.5 ಲಕ್ಷ ಕೋಟಿ ಕೇಂದ್ರ ಸರ್ಕಾರ ಇಟ್ಟಿದೆ. ನೂರು ದಿನದ ಹಣ ಕೇಂದ್ರ ಸರ್ಕಾರ ಕೊಡುತ್ತದೆ. 25 ದಿನಕ್ಕೆ ಕೊಡಿ ಎಂದರೆ ರಾಜ್ಯ ಸರ್ಕಾರದವರು ನಾಟಕ ಮಾಡುತ್ತಾರೆ. 
ಇವರು ಅಂಧಾದುಂದಿ ಖರ್ಚು ಮಾಡುತ್ತಾರೆ. ಝಿರೊ ಸಾಧನೆ ಮಾಡಿ ಸಮಾವೇಶ ಮಾಡಲು ಹಣ ಖರ್ಚು ಮಾಡುತ್ತಿದ್ದಾರೆ. ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ಳುತ್ತಿದ್ದಾರೆ. ಹಳ್ಳಿಗಳ ಪರಿಸ್ಥಿತಿ ನೋಡಿ, ಮನೆ ಕಟ್ಟಿದವರಿಗೆ ಹಣ ಕೊಟ್ಡಿಲ್ಲ, ಜಲ ಜೀವನ್ ಮಿಷನ್ ಹಣ ಬಿಡುಗಡೆ ಮಾಡಿಲ್ಲ. ನಮ್ಮ ಕಾಲದಲ್ಲಿ ಆಗಿರುವ ರಸ್ತೆಗಳ ಮೇಲೆ ವಾಹನ ಓಡುತ್ತಿವೆ‌. 2028 ಕ್ಕೆ ಕಾಂಗ್ರೆಸ್ ಮನೆಗೆ ಹೋಗುವುದು ಗ್ಯಾರೆಂಟಿ, ಅವರು ಬಿಟ್ಟು ಹೋಗುವಾಗ ಸುಮಾರು 8-10 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅದನ್ನು ಬಿಟ್ಟು ಹೋಗುತ್ತಾರೆ. ನಾನು ಸಿಎಂ ಆಗಿದ್ದಾಗ 64 ಸಾವಿರ ಕೋಟಿ ಸಾಲ ಮಾಡಲು ಅನುಮತಿ ಪಡೆದರೂ 57 ಸಾವಿರ ಕೋಟಿ ಖರ್ಚು ಮಾಡಿ, ಸರಪ್ಲಸ್ ಬಜೆಟ್ ಮಾಡಿದ್ದೆ. ಇವರು 1.40 ಲಕ್ಷ ಕೋಟಿ ರೂ. ಸಾಲ‌ ಮಾಡಿದ್ದಾರೆ. ಆದರೂ ಇವರಿಗೆ ಬಡವರಿಗೆ ಕೊಡಲು ಹಣ ಇಲ್ಲ. ಬಡವರ ಕೂಲಿ ಕಾರರ ವಿರೋಧಿ ಸರ್ಕಾರ ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. 
*ನರೇಗಾದಲ್ಲಿ ಲೂಟಿ*
ನಾನು ಬೆಳಗಾವಿ ಉಸ್ತುವಾರಿಯಾಗಿದ್ದಾಗ ನರೆಗಾ ಯೋಜನೆ ಬಗ್ಗೆ  ತನಿಖೆ ನಡೆಸಿದಾಗ ಪಿಡಿಒಗಳು ಜೈಲಿಗೆ ಹೋಗಿದ್ದರು. ಕಲಬುರ್ಗಿಯಲ್ಲಿ 150 ಕೊಟಿ ರೂ. ಭ್ರಷ್ಟಾಚಾರ ಆಗಿತ್ತು. ಅದನ್ನು ಸಿಬಿಐ ತನಿಖೆ ಮಾಡಿಸಿದ್ದೇವು. ಬೋಗಸ್ ಬಿಲ್ಲುಗಳನ್ನು ತಗೆದು ದುಡ್ಡು ಹೊಡೆದಿದ್ದರು.  ಅದನ್ನು ತಡೆಯಲು ತಂತ್ರಜ್ಞಾನ ಬಳಕೆ ಮಾಡುವ ವ್ಯವಸ್ಥೆ ಪ್ರಧಾನಿ ನರೇಂದ್ರ ಮೋದಿಯವರು ತಂದಿದ್ದಾರೆ. ನರೆಗಾದಲ್ಲಿ ಐವತ್ತು ಪರ್ಸೆಂಟ್ ಮಹಿಳೆಯರು ಇರಬೇಕು ಅಂತ ಇದೆ. ಇವರು ಗಂಡು ಮಕ್ಕಳಿಗೆ ಸೀರೆ ಉಡಿಸಿ ನರೇಗಾ ಪಗಾರ ಪಡೆದಿದ್ದಾರೆ‌ ಏಜೆಂಟರು, ಅಧಿಕಾರಿಗಳು, ದುಡ್ಡು ಹೊಡೆದಿದ್ದಾರೆ.
ವಿರೇಂದ್ರ ಪಾಟೀಲರ ಹೆಸರಿನಲ್ಲಿ ಕೂಲಿಗಾಗಿ ಕಾಳು ಯೋಜನೆಯಿಂದ ಕಾಳು ಪಡೆದಿದ್ದರು. ನೂರು ದಿನ ಕೆಲಸ ಕೊಡಬೇಕಾ 125 ಜಾಸ್ತಿ ಅನ್ನುವುದನ್ನು  ಕಾಂಗ್ರೆಸ್ ನವರನ್ನು ಕೇಳಬೇಕು. ಸಿದ್ದರಾಮಯ್ಯ ಹೇಳುವುದೆಲ್ಲ ಸುಳ್ಳೆ, ಅವರು ಹೇಳುವ ಅಂಕಿ ಅಂಶ ಬರೇ ಸುಳ್ಳು, ಇಂತಹ ಸರ್ಕಾರ ಇದೆ. ರಾಜ್ಯಕ್ಕೆ ಕೇಂದ್ರದ ಅನುದಾನ ಹೆಚ್ಚಾಗಿದೆ. 15 ನೇ ಹಣಕಾಸಿನಿಂದ 16 ನೇ ಹಣಕಾಸಿನಲ್ಲಿ 1 ಲಕ್ಷ ಕೋಟಿ ರೂ ರಾಜ್ಯಕ್ಕೆ ಬಂದಿದೆ. ಗ್ರಾಮ ಪಂಚಾಯತಿಯ ಅಧಿಕಾರ ಮೊಟಕುಗೊಳಿಸಲಾಗಿದೆ ಅಂತ ಸುಳ್ಳು ಹೇಳುತ್ತಾರೆ. ಬುದ್ದಿವಂತ ಕಾನೂನು ಸಚಿವರು ರೈತರ ವಿರೋಧಿ ಇದೆ ಅಂತ ಸುಳ್ಳು ಹೇಳುತ್ತಾರೆ. ಸಂಸತ್ತಿನ ಎರಡು ಸದನದಲ್ಲಿ ಪಾಸ್ ಆಗಿ ರಾಷ್ಟಪತಿ ಅಂಕಿತ ಅಗಿರುವ ಕಾನೂನನ್ನು ವಿರೋಧಿಸಿ ಠರಾವ್ ಪಾಸ್ ಮಾಡುತ್ತೇವೆ ಎನ್ನುತ್ತಾರೆ. ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
*ರೈತರ ಪರ ಹೋರಾಟ*
15 ನೇ ಹಣಕಾಸು 16 ನೇ ಎಷ್ಟು ಹಣ ಬಂದಿದೆ ಅಂತ ಜನರಿಗೆ ಹೇಗೆ ಗೊತ್ತಾಗುತ್ತದೆ. ರಾಜ್ಯ ಹಣಕಾಸು ಆಯೋಗ ಗ್ರಾಮ, ತಾಲೂಕು ಜಿಲ್ಲಾ  ಪಂಚಾಯತಿಗಳಿಗೆ 2 ಸಾವಿರ ಕೋಟಿ ಹಣ ಕೊಟ್ಟಿಲ್ಲ. ನಾವು  ಕೇಳುವ ಜಾಗದಲ್ಲಿಬಿದ್ದೇವೆ. ಗಟ್ಟಿ ಧ್ವನಿಯಲ್ಲಿ ಕೇಳಬೇಕು. ಒಂದು ಕಡೆ ವಿಬಿ ಜಿ ರಾಮ್ ಜಿ ಯ ಪ್ರಯೋಜನ ಏನು ಇನ್ನೊಂದು ಕಡೆ ನರೇಗಾ ಯೋಜನೆಯ ಭ್ರಷ್ಟಾಚಾರ ಮುಂದುವರೆಯಬೇಕಾ ಅಂತ ಬ್ಯಾನರ್ ಮಾಡಿ ಹಾಕಬೇಕು.
ಸೊಸಿಯಲ್ ಮಿಡಿಯಾ ಹಾಗೂ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಬೋರ್ಡ್ ಹಾಕಬೇಕು. ಇದು ಗ್ರಾಮ ಪಂಚಾಯತಿಯ ಹಕ್ಕನ್ನು ಭದ್ರಪಡಿಸುತ್ತದೆ. ನರೇಗಾದಲ್ಲಿ ಉಪಯೋಗ ಇಲ್ಲದ ಕಾಮಗಾರಿಗಳು ನಡೆಯುತ್ತಿವೆ. ಒಂದು ವರ್ಷ ಸಿದ್ದಪ್ಪನ ಮನೆಯಿಂದ ಶಿವಪ್ಪನ ಮನೆವರೆಗೆ, ಮುಂದಿನ ವರ್ಷ ಶಿವಪ್ಪನ ಮನೆವರೆಗೂ ಅಂತ ರಸ್ತೇನೆ ಆಗಿರುವುದಿಲ್ಲ. 
ಜಿ ರಾಮ್ ಜಿ ಬಂದ ಮೇಲೆ 125 ದಿನ ಗ್ರಾಮಗಳ ಅಭಿವೃದ್ಧಿ ಗೆ ಏನು ಬೇಕು ಅನ್ನುವುದನ್ನು ಮಾಡಿದ್ದಾರೆ. ರೈತರಿಗೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ ಅಂತ ಕಾಂಗ್ರೆಸ್ ಮಿತ್ರ ಪಕ್ಷದ ನಾಯಕ ಶರತ್ ಪವ್ವಾರ ಮಾತನಾಡಿದ್ದರು. ನಾನು ಒಂದು ಹೆಜ್ಜೆ ಮುಂದೆ ಹೊಗಿ ರೈತರಿಗೆ ಕೂಲಿ ಹಣ ನೀಡಲು ಈ ಯೋಜನೆಯಲ್ಲಿ ಅವಕಾಶ ನೀಡಬೇಕು ಅಂತ ಹೇಳಿದ್ದೆ ಅದನ್ನು ಹೋರಾಟ ಮಾಡಿ ತರುತ್ತೇವೆ. ಇಲ್ಲದಿದ್ದರೆ ರೈತ ಬದುಕಲು ಸಾಧ್ಯವಿಲ್ಲ. ನಾನು ಸಿಎಂ ಇದ್ದಾಗ ಹಿಂಗಾರು ಮುಂಗಾರು ಇದ್ದಾಗ ಎರಡು ಬಾರಿ ಬೀಜ ಗೊಬ್ಬರಕ್ಕೆ ಹಣ, ಪೆಟ್ರೊಲ್ ಡಿಸೇಲ್ ಗೆ ಹಣ ಕೊಟ್ಟಿದ್ದೇವು, ರೈತರ ಮಕ್ಕಳಿಗೆ ವಿದ್ಯಾನಿಧಿ ಮಾಡಿದ್ದೇವು ಅದ್ಯಾವುದು ಈಗ ಇಲ್ಲ ಎಂದು ಹೇಳಿದರು.
*ಹೋರಾಟ ಅನಿವಾರ್ಯ*
ಈಗ ಅಲ್ಪ ಸಂಖ್ಯಾತರ ಸಾಲದ ಬಡ್ಡಿ ಮನ್ನಾ ಮಾಡುತ್ತಿದ್ದಾರೆ . ಹಿಂದುಳಿದ ವರ್ಗ, ದಲಿತರು, ಮಹಿಳಾ ಸಂಘದ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬಹುದಿತ್ತು. ನಮ್ಮ ಗೆಳೆಯ ಇದ್ದ ಅವನು ಇದ್ದದ್ದು ಇದ್ದಂಗ ಹೇಳುತ್ತಿದ್ದ ಗಂಡು ಮಕ್ಕಳ ಮಕ್ಕಳಿಗೆ ಅವರವ್ವ ಬೇಸನ್ ಉಂಡಿ ಕೊಡುತ್ತಿದ್ದಳಂತೆ, ಹೆಣ್ಣು ಮಕ್ಕಳ ಮಕ್ಕಳಿಗೆ ರವಾ ಉಂಡಿ ಕೊಡುತ್ತಿದ್ದರಂತೆ, ಆದರೆ, ಇವರು ಬೇಸನ್ ಉಂಡಿನೂ ಇಲ್ಲಾ ರವಾ ಉಂಡಿನೂ ಕೊಡುತ್ತಿಲ್ಲ. ಯಾರು ದುಡಿತಾರೆ ಅವರ ಸಾಲ  ಮನ್ನಾ ಮಾಡುವುದಿಲ್ಲ. ಯಾರು ದುರುಪಯೋಗ ಪಡೆಸಿಕೊಳ್ಳುತ್ತಾರೆ ಅವರ ಸಾಲ ಮನ್ನಾ ಮಾಡುತ್ತದೆ. ಇದರ ವಿರುದ್ದ ಹೋರಾಟ ಮಾಡಿ ಈ ಸರ್ಕಾರ ಕಿತ್ತು ಬಹಾಕಬೇಕು ಎಂದರು.
*ಉತ್ತರ ಕರ್ನಾಟಕಕ್ಕೆ ಅನ್ಯಾಯ*
ಉತ್ತರ ಕರ್ನಾಟಕಕ್ಕೆ ಈ ಸರಕಾರ ನಿರಂತರ ಅನ್ಯಾಯ ಮಾಡುತ್ತಿದೆ. ನೀರಾವರಿ ಯೋಜನೆಗಳು ನಿಂತು ಹೋಗುತ್ತಿವೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ 30 ಸಾವಿರ ಕೋಟಿ ಅಂತ ಹೇಳುತ್ತಾರೆ. ಆದರೆ, ಹಣ ನೀಡುವುದಿಲ್ಲ. ನಾವು ಜಿ ರಾಮ್ ಜಿ ಯೋಜನೆಯನ್ನು ಪ್ರತಿ ಗ್ರಾಮ ಪಂಚಾಯತಿಯಲ್ಲಿ ಪ್ರಚಾರ ಮಾಡಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಶೆ 58% ಮಹಿಳೆಯರಿಗೆ ಕೆಲಸ ಸಿಗುವ ಅವಕಾಶ ಇದೆ.  ಮಹಿಳೆಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಸರ್ಕಾರದ ಬಳಿ ಹಣ ಅಧಿಕಾರ ಇದೆ. ನಮ್ಮ ಬಳಿ ಸತ್ಯ, ಪ್ರಾಮಾಣಿಕತೆ ಇದೆ. ಇದು ರಾಜ ಶಕ್ತಿ ವಿರುದ್ದ ಪ್ರಜಾಶಕ್ತಿ ಸಂಘರ್ಷ. ಯಾವಾಗ ರಾಜಶಕ್ತಿ ವಿರುದ್ದ ಜನಶಕ್ತಿಯ ಸಂಘರ್ಷ ಆಗಿದೆ ಆಗ ಜನಶಕ್ತಿ ಗೆದ್ದಿದೆ. ಇದನ್ನು ಜನ ಶಕ್ತಿ ಹೋರಾಟವನ್ನಾಗಿ ಮಾಡಿ ರಾಜಶಕ್ತಿಯ ವಿರುದ್ದ ಜಯ ಗಳಿಸಬೇಕು ಎಂದು ಹೇಳಿದರು. 
ಈ ಸಂಧರ್ಭದಲ್ಲಿ ಶಾಸಕರುಗಳಾದ  ಸಿ.ಸಿ.ಪಾಟೀಲ್, ಡಾ ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯರಾದ  ಎಸ್.ವಿ ಸಂಕನೂರ, ಮಾಜಿ ಶಾಸಕರಾದ  ಎ.ಎಸ್ ಪಾಟೀಲ್ ನಡಹಳ್ಳಿ, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ  ರಾಜು ಕುರಡಗಿ, ಕೆ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ  ಶಿವಕುಮಾರಗೌಡ ಪಾಟೀಲ್ ಸೇರಿದಂತೆ ಗದಗ ಜಿಲ್ಲೆಯ ಎಲ್ಲ ಮಂಡಳಗಳ ಅಧ್ಯಕ್ಷರುಗಳು ಪದಾಧಿಕಾರಿಗಳು, ಕಾರ್ಯಕರ್ತರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net