ಬೇಸಿಗೆ ರಜೆ ಹಾಗೂ ಶಾಲೆ ಸಮಯದ ಬಳಿಕ ಮಕ್ಕಳು ಈಜಲು ತೆರಳುವ ಘಟನೆಗಳು ಹೆಚ್ಚಾಗುತ್ತಿವೆ. ಮಣ್ಣಿನ ಕ್ವಾರಿಗಳು, ಕೆರೆಗಳು, ಹೊಂಡಗಳು ಹಾಗೂ ನದಿಗಳಲ್ಲಿ ನೀರಿನ ಆಳ, ತಳಭಾಗದ ಮಣ್ಣು ಮತ್ತು ಅಕಸ್ಮಿಕ ಕುಸಿತಗಳು ಜೀವಕ್ಕೆ ಭಾರೀ ಅಪಾಯಕಾರಿ ಆಗುತ್ತಿದೆ. ಹೀಗಾಗಿ ಪಾಲಕರು ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಅಪಾಯಕರ ಸ್ಥಳಗಳಿಗೆ ತೆರಳದಂತೆ ಸ್ಪಷ್ಟ ಸೂಚನೆ ನೀಡಬೇಕು. ಶಾಲಾ ಆಡಳಿತ ಹಾಗೂ ವಸತಿ ನಿಲಯಗಳು ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ಮೂಡಿಸಬೇಕು. ಸಂಬಂಧಪಟ್ಟ ಇಲಾಖೆ ಹಾಗೂ ಪಂಚಾಯತ್ಗಳು ಕ್ವಾರಿಗಳ ಸುತ್ತ ಎಚ್ಚರಿಕೆ ಫಲಕ ಹಾಗೂ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.