ಶಿರಸಲ ಎಂಬ ಜಾತಿಯ ಮರಗಳು ಇವಾಗಿದ್ದು, ಕಳೆದ 12 ವರ್ಷಗಳ ಹಿಂದೆ ಆರ್ಆರ್ಪಿ ಹಾಗೂ ನರೇಗಾ ಯೋಜನೆಯಡಿ 3 ಕಿಮೀ ವರೆಗೆ 976 ಸಸಿಗಳನ್ನು ನಡೆಸಲಾಗಿತ್ತು. ಅರಣ್ಯ ಇಲಾಖೆಯವರು ನೀರುಣಿಸಿ, ಪಾಲನೆ, ಪೋಷಣೆ ಮಾಡಿ ಬೆಳೆಸಿದ್ದರು. ಹತ್ತಾರು ವರ್ಷಗಳ ಕಾಲ ಬೆಳೆದು ಹೆಮ್ಮರವಾಗಿ ರಸ್ತೆಯ ಎರಡೂ ಬದಿಯಲ್ಲಿ ಚಪ್ಪರಗಳಂತೆ ಕಾಣಬೇಕಿದ್ದ ಮರಗಳು ಈಗ ಬರುಡಾಗಿವೆ. ಮಾಃಇತಿ ಪ್ರಕಾರ ಹುಯಿಲಗೋಳ ಗ್ರಾಮದ ರೈತರು ಈ ಮರಗಳನ್ನು ಕಡಿದಿರಬಹುದು ಎಂದು ಆರೋಪಿಸಲಾಗುತ್ತಿದೆ. ಈ ಮರಗಳಿಂದ ಜಮೀನಿನಲ್ಲಿ ಬೆಳೆ ಬೆಳೆಯುತ್ತಿಲ್ಲ. ಹಾಗಾಗಿ ಮರಗಳನ್ನು ಕಡಿಯಬೇಕು ಎಂದು ಕೆಲ ರೈತರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು ಎನ್ನಲಾಗಿದೆ. ಎರಡು ವರ್ಷಗಳಿಂದಲೂ ಅರಣ್ಯ ಇಲಾಖೆಗೆ ಮನವಿ ಸಲ್ಲಿಸುತ್ತ ಬಂದಿದ್ದರೂ ಎನ್ನಲಾಗಿದೆ.. ಈ ಮರಗಳ ನೆರಳಿನಿಂದ ಅದರ ಸುತ್ತಲೂ ನನ್ನ ಜಮೀನಿನಲ್ಲಿ ಬೆಳೆ ಬೆಳೆಯುತ್ತಿಲ್ಲ. ಹಾಗಾಗಿ ಮರ ಕಡಿಯಲು ಪರವಾನಿಗೆ ಕೇಳಿದ್ದರಂತೆ. ಆದರೆ, ಅರಣ್ಯ ಇಲಾಖೆ ಇದಕ್ಕೆ ಸಹಮತಿ ನೀಡಿರಲಿಲ್ಲ ಎಂದು ಹೇಳಲಾಗಿದೆ. ಈ ಟನೆ ಪರಿಸರ ಪ್ರೇಮಿಗಳ ಆಕ್ರೋಶಕ್ಕೂ ಕಾರಣವಾಗಿದೆ.