Trainig: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

Gadag
Gadag
Published on
ಗದಗ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಫೆಬ್ರವರಿ ೨೪ ಮಂಗಳವಾರ ದಂದು ದಿ. ಚೇಂಬರ್ ಆಫ್ ಕಾಮರ್ಸ್, ಗದಗ ಎ.ಪಿ.ಎಂ.ಸಿ. ಯಾರ್ಡ್, ಗದಗ ತಾ.ಜಿ.ಗದಗ ಇದರ ಸಭಾಭವನದಲ್ಲಿ ಜರುಗಿತು.
ಕೆ.ಸಿ.ಸಿ. ಬ್ಯಾಂಕ ಲಿ., ಧಾರವಾಡ ಹಾಗೂ ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ನಿರ್ದೇಶಕರಾದ ಎಂ. ಎಫ್. ಕಲಗುಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಗ್ರಾಮೀಣ ಜನರಿಗೆ ನೆರವಾಗುವ ದೃಷ್ಠಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ರೂಪಿಸಲಾಗಿದೆ. ಈ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರಿಗೆ ಸಾಲ ಸೌಲಭ್ಯ ನೀಡುವುದು, ಹೆಚ್ಚು ಠೇವಣಿಗಳನ್ನು ಸಂಗ್ರಹಿಸುವ ಮೂಲಕ ರೈತರಿಗೆ ರಸಗೊಬ್ಬರಗಳನ್ನು, ಕೃಷಿ ಉಪಕರಣಗಳನ್ನು ವಿತರಿಸುವುದು, ಇನ್ನು ಹತ್ತು ಹಲವಾರು ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ನಮ್ಮ ಸಹಕಾರ ಸಂಘಗಳು ಮುನ್ನಡೆಯುತ್ತಿವೆ. ರಸಗೊಬ್ಬರಗಳ ವಿತರುಸಲು ಪಡೆದ ಪರವಾನಗಿಯನ್ನು ಸಕಾಲದಲ್ಲಿ ಸಂಘದ ಸಿಬ್ಬಂದಿಗಳು ನವಿಕರಿಸಿಕೊಳ್ಳುವುದು ಅವಶ್ಯಕವಾಗಿದೆ. ಪ್ಯಾಕ್ಸ್ಗಳಲ್ಲಿ ಇ.ಆರ್.ಪಿ.ಯು ಬಳಕೆದಾರ ಸ್ನೇಹಿ ಸಾಪ್ಟವೇರ್ ಆಗಿದ್ದು, ಐಕಾನ ಆಧಾರಿತ ಇಂಟರ್ಫೇಸ್ ಮತ್ತು ವರ್ಕಪ್ಲೋ ಚಾಲಿತ ವಿನ್ಯಾಸ ಹೊಂದಿದೆ, ಪ್ರಾದೇಶಿತ ಭಾಷೆಗಳನ್ನು ಬೆಂಬಲಿಸುವ ಈ ಸಾಫ್ಟವೇರ್ ಸಂಘದ ಎಲ್ಲಾ ಚಟುವಟಿಕೆಗಳನ್ನು ಗಣಕೀಕರಿಸುತ್ತದೆ ಮತ್ತು ಮಧ್ಯಸ್ಥಗಾರರಿಗೆ ಅಗತ್ಯವಿರುವ ಎಲ್ಲಾ ವರದಿಗಳನ್ನು ಉತ್ಪಾದಿಸುತ್ತದೆ. ಸಂಘದ ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷರಾದ ಶ್ರೀ ಸಿ. ಎಂ. ಪಾಟೀಲರವರು ವಹಿಸಿ ಮಾತನಾಡುತ್ತಾ ಅಗತ್ಯ ಮತ್ತು ವ್ಯವಹಾರ ಬೆಂಬಲ ಸೇವೆಗಳನ್ನು ಒದಗಿಸಲು ಸಹಾಯ ಮಾಡುವುದು ಮತ್ತು ಅವುಗಳನ್ನು ಗ್ರಾಮೀಣ ಕೇಂದ್ರಗಳಾಗಿ ಪರಿವರ್ತಿಸುವುದು. ಗ್ರಾಮೀಣ ಜನರಿಗೆ ಅವರ ಮನೆ ಬಾಗಿಲಿಗೆ ಕಡಿಮೆ ವೆಚ್ಚದ ಸೇವೆಗಳು, ಹೆಚ್ಚಿನ ವ್ಯಾಪ್ತಿ ಮತ್ತು ಸಾಲ ವಿತರಣೆಯ ಸುಧಾರಣೆಗಾಗಿ ಸಹಕಾರಿ ಸಂಘ ಇತರ ಸರ್ಕಾರಿ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಕಾರ್ಯವಿಧಾನ, ಹೊಸ ವ್ಯವಹಾರಗಳು ಮತ್ತು ಆದಾಯ ಉತ್ಪಾದನೆಯ ಅವಕಾಶಗಳನ್ನು ಕಲ್ಪಿಸುವುದು ಮತ್ತು ಬದಲಾವಣೆಯನ್ನು ತರುವುದು ಈ ತಬೇತಿಯ ಉದ್ದೇಶವಾಗಿದೆ ಸದರ ತರಬೇತಿಯ ಸದುಪಯೋಗ ಪಡೆದುಕೊಂಡು ತಮ್ಮ ಸಂಘದ ಏಳ್ಗೆಗೆ ಶ್ರಮಿಸಬೇಕು ಎಂದು ಹೇಳಿದರು.
ಸಂಜೀವಕುಮಾರ ನೆಗಳೂರು ಮಾತನಾಡುತ್ತಾ ಬಿತ್ತನೆಯಿಂದ ಹಿಡಿದು ಬೆಳೆಯನ್ನು ಪಡೆಯುವ ವರೆಗೆ ರೈತರಿಗೆ ಕೃಷಿ ಇಲಾಖೆಯಿಂದ ಸಲಹೆ ನೀಡಲಾಗುತ್ತಿದೆ. ೨೦೨೫-೨೬ ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಉತ್ತಮವಾಗಿ ಮಳೆಯಾಗಿದ್ದು, ಬಿತ್ತನೆಯಾಗಿ ೪೦-೫೦ ದಿನಗಳ ಬೆಳೆಯಿದ್ದು, ಮೇಲುಗೊಬ್ಬರವಾಗಿ ಯೂರಿಯಾ ರಸಗೊಬ್ಬರವನ್ನು ನೀಡಲಾಗುತ್ತಿದೆ. ರೈತರು ಶಿಫಾರಸ್ಸಿನ ಪ್ರಮಾಣಕ್ಕಿಂತ ಹೆಚ್ಚು ಯೂರಿಯಾ ರಸಗೊಬ್ಬರವನ್ನು ಮೇಲುಗೊಬ್ಬರವಾಗಿ ಬಳಸುತ್ತಿದ್ದು, ಇದರಿಂದ ಬೆಳೆಯು ಹುಲುಸಾಗಿ ಬೆಳೆದು ಕೀಟ ಮತ್ತು ರೋಗ ಬಾಧೆ ಹೆಚ್ಚಾಗುತ್ತಿದ್ದು, ಇವುಗಳನ್ನು ನಿಯಂತ್ರಿಸಲು ವಿವೇಚನರಹಿತವಾಗಿ ಕೀಟನಾಶಕಗಳನ್ನು ಬಳಸಲಾಗುತ್ತಿದೆ. ಮುಂದುವರೆದು ಯೂರಿಯಾ ರಸಗೊಬ್ಬರದಲ್ಲಿನ ೩೦-೫೦ ಶೇ.ರಷ್ಟು ಸಾರಜನಕ ಮಾತ್ರ ಬೆಳೆಗಳಿಂದ ಹೀರಲ್ಪಟ್ಟು ಉಳಿದ ಲಭ್ಯವಿಲ್ಲದ (ಟಿoಟಿಚಿvಚಿiಟಚಿbಟe) ಸಾರಜನಕವು ನೈಟ್ರೇಟ್ ರೂಪದಲ್ಲಿ ಮಣ್ಣು, ಗಾಳಿ ಮತ್ತು ನೀರನ್ನು ಕಲುಷಿತಗೊಳಿಸಿ ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮುಂಬರುವ ದಿನಗಳಲ್ಲಿ ಹರಳು ರೂಪದ ಯೂರಿಯಾ ಬಳಕೆಯನ್ನು ಕಡಿಮೆ ಮಾಡಬೇಕಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕಿಯರಾದ ಶ್ರೀಮತಿ ಎಸ್. ಎಸ್. ಕಬಾಡೆ, ಸಹಕಾರ ಸಂಘಗಳ ಸಹಾಯಕ ನಿಬಂಧಕಿಯರಾದ ಶ್ರೀಮತಿ ಪುಷ್ಪಾ ಕೆ. ಕಡಿವಾಳ, ಶಿರಹಟ್ಟಿ ತಾಲೂಕಿನ ಸಹಕಾರ ಅಭಿವೃಧ್ಧಿ ಅಧಿಕಾರಿಗಳಾದ ಶ್ರೀ ಕೆ. ಸಿ. ಕೂಸನೂರಮಠ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಮಾರಾಟಾಧಿಕಾರಿಗಳು ಹಾಗೂ ಗದಗ ತಾಲೂಕಾ ಸಹಕಾರ ಅಭಿವೃಧ್ಧಿಗಳಾದ ಶ್ರೀ ಬಿ. ಆರ್. ನಿಡಗುಂದಿ, ರೋಣ ತಾಲೂಕಿನ ಸಹಕಾರ ಅಭಿವೃಧ್ದಿ ಅಧಿಕಾರಿಗಳಾದ ಶ್ರೀ ಪ್ರಶಾಂತ ಮುಧೋಳ, ಕೆ.ಸಿ.ಸಿ. ಬ್ಯಾಂಕ್ ಲಿ., ಗದಗ ಜಿಲ್ಲಾ ನಿಯಂತ್ರಣಾಧಿಕಾರಿಗಳಾದ ಶ್ರೀ ಎಸ್. ಎಂ. ಚಿಕ್ಕಮಠ, ಸಹಕಾರ ಮಾರಾಟ ಮಾಹಾಮಂಡಳ ಗದಗ ಡಿ. ಬಿ. ದೊಕ್ಕಣ್ಣವರ, ಕೆ.ಸಿ.ಸಿ. ಬ್ಯಾಂಕ್‌ನ ನಿರೀಕ್ಷಕರಾದ ಶ್ರೀ ಎ. ಎ. ಶಾಬಾದಿ ಸುನಿಲಕುಮಾರ ಚಳಗೇರಿ ಹಾಗೂ ಶ್ರೀ ಸುರೇಶಕುಮಾರ ಎಸ್. ಉಪಸ್ಥಿತರಿದ್ದರು.
ತರಬೇತಿ ಕಾರ್ಯಾಗಾರದಲ್ಲಿ “ರಸಗೂಬ್ಬರಗಳ ಮಾರಾಟ ನಿರ್ವಹಣೆ” ಕುರಿತು ಶ್ರೀಮತಿ ಮೇಘನಾ ನಾಡಗೇರ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಗದಗ “ಪ್ಯಾಕ್ಸ್ಗಳಲ್ಲಿ ಇ.ಆರ್.ಪಿ. ಸಾಪ್ಟವೇರ್ ಹಾಗೂ ಸಿಸ್ಟಮ್ ಅಡಿಟ್” ಕುರಿತು ಶ್ರೀ ಬಸವರಾಜ ಎಂ. ಮುಚ್ಚಕಣ್ಣವರ, ಕಂಪ್ಯೂಟರ್ ಪ್ರೋಗ್ರಾಮರ್, ಬಾಗಲಕೋಟ ಡಿ.ಸಿ.ಸಿ. ಬ್ಯಾಂಕ್ ಲಿ., ಬಾಗಲಕೋಟ, “ಯಶಸ್ವಿನಿ ಯೋಜನೆ” ಕುರಿತು ಶ್ರೀ ಪ್ರಮೋದ ಕುಸುಬಿ, ಯಶಸ್ವಿನಿ ಕೋ-ಆರ್ಡಿನೇಟರ್, ಗದಗ ಹಾಗೂ “ಜಿ.ಎಸ್.ಟಿ ನೊಂದಾವಣಿÀ” ಕುರಿತು ಶ್ರೀ ಪ್ರಕಾಶ ಬೇಲಿ, ಕರ ಸಲಹೆಗಾರರು, ಗದಗ ಇವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಮೊದಲಿಗೆ ಲಕ್ಕುಂಡಿ ನಂ.೩ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಎಸ್. ವ್ಹಿ. ಗರ್ಜಪ್ಪನವರ ಇವರು ಪ್ರಾರ್ಥನೆ ಮಾಡಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ಚಂದ್ರಶೇಖರ ಎಸ್. ಕರಿಯಪ್ಪನವರ ಇವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು, ನಂತರ ಯೂನಿಯನ್‌ದ ಮಹಿಳಾ ಸಹಕಾರ ಶಿಕ್ಷಕಿ ಶ್ರೀಮತಿ ರಶೀದಾಬಾನು ಸಿ. ಯಲಿಗಾರ ಇವರು ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net