ನಗರದಲ್ಲಿ 100 ಮಿಟರ್​ ಉದ್ದದ ತಿರಂಗಾ ಯಾತ್ರೆ

 ಸ್ವಾತಂತ್ರ ದಿನಾಚರಣೆ ನಿಮಿತ್ಯ ಗದಗ ನಗರದಲ್ಲಿ ಬೃಹತ್​ ತಿರಂಗಾ ಯಾತ್ರೆ ಜರುಗಿತು.
ಸ್ವಾತಂತ್ರ ದಿನಾಚರಣೆ ನಿಮಿತ್ಯ ಗದಗ ನಗರದಲ್ಲಿ ಬೃಹತ್​ ತಿರಂಗಾ ಯಾತ್ರೆ ಜರುಗಿತು.
Published on

ವಿಜಯವಾಣಿ ಸುದ್ದಿಜಾಲ ಗದಗ

ಸ್ವಾತಂತ್ರೋತ್ಸವದ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ತಿರಂಗಾ ಯಾತ್ರೆ ಬುಧವಾರ ಅದ್ಧೂರಿಯಾಗಿ ನಡೆಯಿತು. ಬೃಹತ್​ 100 ಮೀಟರ್​ ಉದ್ದದ ರಾಷ್ಟ್ರಧ್ವಜವನ್ನು ಹಿಡಿದು ನೂರಾರು ವಿದ್ಯಾಥಿರ್ಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ದೇಶಭಕ್ತಿ ಮೆರೆದರು.
ಹಾತಲಗೇರಿ ನಾಕಾದಿಂದ ಆರಂಭಗೊಂಡ ತಿರಂಗಾ ಯಾತ್ರೆ ಚೇತನಾ ಕ್ಯಾಂಟೀನ್​, ಕೆ.ಸಿ. ರಾಣಿ ರಸ್ತೆ, ಕೆಸಿಸಿ ಬ್ಯಾಂಕ್​, ರೋಟರಿ ವೃತ್ತ, ಹಳೆ ಬಸ್​ ನಿಲ್ದಾಣ, ಹುಯಿಲಗೋಳ ನಾರಾಯಣ ವೃತ್ತ ಹಾಗೂ ಮಹೇಂದ್ರಕರ ವೃತ್ತದ ಮೂಲಕ ಸಾಗಿ ತೊಂಟದಾರ್ಯ ಮಠದ ಮುಂಭಾಗದಲ್ಲಿ ಮುಕ್ತಾಯಗೊಂಡಿತು.
ಯಾತ್ರೆಯಲ್ಲಿ ಶಾಲಾ-ಕಾಲೇಜುಗಳ ನೂರಾರು ವಿದ್ಯಾಥಿರ್ಗಳು ಉತ್ಸಾಹದಿಂದ ಭಾಗವಹಿಸಿದ್ದರು. ವಿದ್ಯಾಥಿರ್ಗಳು ಬೃಹತ್​ ತಿರಂಗವನ್ನು ಹೆಮ್ಮೆಯಿಂದ ಹಿಡಿದು ಸಾಗುತ್ತಿದ್ದ ದೃಶ್ಯ ಸಾರ್ವಜನಿಕರ ಗಮನ ಸೆಳೆಯಿತು. ಮೆರವಣೀಗೆಯಲ್ಲಿ ದೇಶಭಕ್ತಿ ಗೀತೆಗಳು ಹಾಗೂ ಘೋಷಣೆಗಳು ಮೊಳಗಿದವು. ರಾಷ್ಟ್ರಧ್ವಜದೊಂದಿಗೆ ಸಾಗಿದ ವಿದ್ಯಾಥಿರ್ಗಳು ಹಾಗೂ ಸಾರ್ವಜನಿಕರಲ್ಲಿ ದೇಶಪ್ರೇಮದ ಭಾವನೆ ಮೂಡಿಸುವಲ್ಲಿ ಯಾತ್ರೆ ಯಶಸ್ವಿಯಾಯಿತು.
ತಿರಂಗಾ ಯಾತ್ರೆಯಲ್ಲಿ ನಿವೃತ್ತ ಸೈನಿಕರು, ಮಹಿಳೆಯರು, ಸಾಹಿತಿಗಳು, ಕಲಾವಿದರು, ವಿವಿಧ ಸಂಸಂಸ್ಥೆಗಳ ಪ್ರತಿನಿಧಿಗಳು, ಸಮಾಜಸೇವಕರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net